Karnataka
oi-Ravindra Gangal

ಬೆಂಗಳೂರು, ಜೂನ್ 21: ರಾಜ್ಯ ಸರ್ಕಾರವು ‘ಕಾವೇರಿ-2.0’ ವೆಬ್ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಪೋರ್ಟಲ್‌ನ ಸುಧಾರಿತ ಆವೃತ್ತಿಯಾಗಿದೆ. ಆಸ್ತಿಯನ್ನು ನೋಂದಾಯಿಸಲು ತೆಗೆದುಕೊಳ್ಳುವ ಸಮಯವನ್ನು ಸುಧಾರಿತ ಪೋರ್ಟಲ್ ಕಡಿಮೆ ಮಾಡುತ್ತದೆ.
ರಾಜ್ಯದ 251 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ-2 ಸಾಫ್ಟ್‌ವೇರ್ ಕಾರ್ಯಾರಂಭ ಮಾಡಿದ್ದು, ಉಳಿದವುಗಳನ್ನು ಈ ವಾರದ ಅಂತ್ಯದೊಳಗೆ ಪೂರೈಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಹೇಳಿದ್ದಾರೆ.

ಆಸ್ತಿ ನೋಂದಣಿ ಇನ್ನು ಮುಂದೆ ಸರಳ
ಈ ಹಿಂದೆ ಸಬ್ ರಿಜಿಸ್ಟ್ರಾರ್ ಕಛೇರಿಗಳು ಸಂಘಟಿತವಾಗಿರಲಿಲ್ಲ. ಈ ಕಾರಣ, ಆಸ್ತಿ ನೋಂದಣಿ ಪ್ರಕ್ರಿಯೆ ತಡವಾಗುತ್ತಿತ್ತು. ನವೀಕರಿಸಿದ ಪೋರ್ಟಲ್‌ನೊಂದಿಗೆ ನೋಂದಣಿ ಪ್ರಕ್ರಿಯೆಯು 15 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಸಚಿವರು ವಿವರಿಸಿದರು.
ಕಾವೇರಿ-2 ಸಾಫ್ಟ್‌ವೇರ್‌ನಲ್ಲಿ ಸರ್ವರ್ ಸಮಸ್ಯೆಗಳು ಮತ್ತು ತಾಂತ್ರಿಕ ದೋಷಗಳಂತಹ ಹಿಂದಿನ ದೂರುಗಳನ್ನು ಪರಿಹರಿಸಲಾಗಿದೆ ಎಂದು ಅವರು ಹೇಳಿದರು.
ಹಿಂದಿನ ವೆಬ್‌ಸೈಟ್‌ನಲ್ಲಿ, ಆಸ್ತಿ ದಾಖಲೆಗಳನ್ನು ಸಬ್-ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಬೇಕಿತ್ತು ಮತ್ತು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗಿತ್ತು. ಅದರ ನಂತರ, ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುವ ಮೊದಲು ನೋಂದಣಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿತ್ತು.
ಗೃಹ ಜ್ಯೋತಿ: ಮೂರು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ
ಹೊಸ ಸಾಫ್ಟ್‌ವೇರ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಆನ್‌ಲೈನ್‌ನಲ್ಲಿ ಪಾವತಿಯನ್ನು ಸಹ ಮಾಡಬಹುದು ಎಂದು ಕೃಷ್ಣ ಬೈರೇಗೌಡ ಹೇಳಿದರು. ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಲು ಖರೀದಿದಾರ ಮತ್ತು ಮಾರಾಟಗಾರರು ಆನ್‌ಲೈನ್‌ನಲ್ಲಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬಹುದು.
‘ಸಾಫ್ಟ್‌ವೇರ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ಪ್ರತಿಯೊಬ್ಬ ಸಬ್-ರಿಜಿಸ್ಟ್ರಾರ್ ಆನ್‌ಲೈನ್‌ನಲ್ಲಿ ಸಹಿ ಮಾಡಬೇಕಾಗುತ್ತದೆ. ಕಡಿಮೆ ಮೌಲ್ಯಮಾಪನ ಮತ್ತು ದಾಖಲೆ ಪರಿಶೀಲನೆ ಪ್ರಕ್ರಿಯೆಯಂತಹ ಅಂಶಗಳನ್ನು ಟ್ರ್ಯಾಕ್ ಮಾಡಬಹುದು’ ಎಂದು ಸಚಿವರು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರವು ಏಪ್ರಿಲ್‌ನಲ್ಲಿ ಕಾವೇರಿ-2.0 ಪೋರ್ಟಲ್ ಅನ್ನು ಹೊರತರಲು ಯೋಜಿಸಿತ್ತು. ಆದರೆ ಸಾಫ್ಟ್‌ವೇರ್‌ನಲ್ಲಿ ಹಲವಾರು ದೋಷಗಳಿದ್ದವು. ಅವುಗಳನ್ನು ಈಗ ಪರಿಹರಿಸಲಾಗಿದೆ ಎಂದು ತಿಳಿದುಬಂದಿದೆ.
ಆದಾಯ ಉತ್ಪಾದನೆ ಕುರಿತು ಮಾತನಾಡಿದ ಸಚಿವರು, ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸರ್ಕಾರ 1,224 ಕೋಟಿ ಸಂಗ್ರಹಿಸಿದ್ದು, ಈ ವರ್ಷ 1,352 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದರು.
English summary
Kaveri 2.0: Karnataka Government Launched a New Software for quick and online property registration where you can register the property just few clicks
Story first published: Wednesday, June 21, 2023, 11:20 [IST]