Bengaluru
oi-Punith BU

ಬೆಂಗಳೂರು, ಜೂನ್ 21: ನಾಲ್ಕು ವರ್ಷಗಳ ಅಂತರದ ನಂತರ ಬಿಬಿಎಂಪಿಯು ಜೂನ್ ಅಂತ್ಯದೊಳಗೆ ಬೀದಿ ನಾಯಿ ಗಣತಿಯನ್ನು ಪ್ರಾರಂಭಿಸಲು ಸಜ್ಜಾಗಿದೆ. 2019ರ ಹಿಂದಿನ ಸಮೀಕ್ಷೆಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳನ್ನು ಗುರುತಿಸಲಾಗಿತ್ತು.
ನಾಯಿಗಳ ಗಣತಿಯು ಬಿಬಿಎಂಪಿ ತನ್ನ ಲಸಿಕೆ ಮತ್ತು ಕ್ರಿಮಿನಾಶಕ ಕಾರ್ಯಕ್ರಮಗಳು ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಡಿಎಚ್ ವರದಿ ಮಾಡಿದೆ.

ಗಣತಿ ನಡೆಸಲು ಬಿಬಿಎಂಪಿ ಹಾಗೂ ರಾಜ್ಯ ಪಶುಸಂಗೋಪನಾ ಇಲಾಖೆಯಿಂದ ತಲಾ ಅರ್ಧದಷ್ಟು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನಾವು 50 ತಂಡಗಳನ್ನು ರಚಿಸಿದ್ದೇವೆ, ಪ್ರತಿಯೊಂದೂ ತಂಡ ಇಬ್ಬರು ಸದಸ್ಯರನ್ನು ಇಡಲಾಗಿದೆ. ಒಬ್ಬರು ವಾಹನವನ್ನು ಓಡಿಸುತ್ತಾರೆ. ಇನ್ನೊಬ್ಬರು ಬೀದಿ ನಾಯಿಗಳ ಡೇಟಾವನ್ನು ಗುರುತಿಸಿ ಅಪ್‌ಲೋಡ್ ಮಾಡುತ್ತಾರೆ ಎಂದು ಬಿಬಿಎಂಪಿಯ ಜಂಟಿ ನಿರ್ದೇಶಕ (ಪಶುಸಂಗೋಪನೆ) ಡಾ ಕೆ ಪಿ ರವಿಕುಮಾರ್ ಹೇಳಿದ್ದಾರೆ.
ಪ್ರತಿ ನಾಯಿಯ ಜಿಯೋಟ್ಯಾಗ್ ಮಾಡಲಾದ ಚಿತ್ರವನ್ನು ಜೊತೆಗೆ ಲಿಂಗ, ಕ್ರಿಮಿನಾಶಕಗೊಳಿಸಲಾಗಿದೆಯೇ (ಕಿವಿಯ ಕ್ಲಿಪಿಂಗ್ ಆಧರಿಸಿ) ಇತ್ಯಾದಿಯನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಪ್ರತಿ ತಂಡವು ದಿನಕ್ಕೆ ಬೆಳಿಗ್ಗೆ 6 ರಿಂದ 10 ರವರೆಗೆ ನಾಯಿಗಳು ಕಡಿಮೆ ಚಟುವಟಿಕೆಯಿಂದ ಮತ್ತು ಸುಲಭವಾಗಿ ಗೋಚರಿಸುವಾಗ 5 ಕಿಮೀ ರಸ್ತೆಗಳನ್ನು ಕ್ರಮಿಸುತ್ತದೆ.
ವಾರ್ಡ್ ಪುನರ್ ವಿಂಗಡಣೆಗೆ ಅವಕಾಶ; ಈ ವರ್ಷ ಬಿಬಿಎಂಪಿ ಚುನಾವಣೆ ಇಲ್ಲ
ಪ್ರತಿ ತಂಡವು ಕ್ರಮಿಸಬೇಕಾದ ಪ್ರದೇಶಗಳನ್ನು ಈಗಾಗಲೇ ಮ್ಯಾಪ್ ಮಾಡಲಾಗಿದೆ. ಅವರು ನಾಯಿಗಳನ್ನು ಗುರುತಿಸಿ ದಾಖಲಿಸಲು ಸತತ ಎರಡು ದಿನಗಳಲ್ಲಿ ಪ್ರತಿ ಪ್ರದೇಶಕ್ಕೆ ಹೋಗುತ್ತಾರೆ. ಆರು ದಿನಗಳ ನಂತರ ಇಲಾಖೆ ಅಧಿಕಾರಿಗಳು ಜನಸಂಖ್ಯೆಯನ್ನು ದೃಢೀಕರಿಸಲು ಅದೇ ಸ್ಥಳಕ್ಕೆ ಹೋಗುತ್ತಾರೆ ಎಂದು ಡಾ. ರವಿಕುಮಾರ್ ಹೇಳಿದರು.
15 ದಿನಗಳೊಳಗೆ ಸಂಪೂರ್ಣ ದಾಖಲೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರ ನಂತರ ಕಚ್ಚಾ ಅಂಕಿ ಅಂಶವನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಗೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ವಿಶ್ಲೇಷಿಸಲಾಗುತ್ತದೆ. ಬಳಿಕ 2019 ರಲ್ಲಿ ಮಾಡಿದಂತೆ ಅಂತಿಮ ನಾಯಿಗಳ ಸಂಖ್ಯೆಯ ಅಂದಾಜುಗಳನ್ನು ನೀಡಲಾಗುತ್ತದೆ.
ಗಣತಿಯ ದತ್ತಾಂಶದ ಆಧಾರದ ಮೇಲೆ ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯು 100 ನಾಯಿಗಳಿಗೆ ಮೈಕ್ರೋಚಿಪ್‌ಗಳನ್ನು ಅಳವಡಿಸುವ ತನ್ನ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ನಾಯಿಯ ಕತ್ತಿನ ಮೈಕ್ರೋಚಿಪ್ ಅನ್ನು ಸ್ಕ್ಯಾನ್ ಮಾಡಿದಾಗ, ಅದರ ಲಸಿಕೆ ಮತ್ತು ಕ್ರಿಮಿನಾಶಕ ಸ್ಥಿತಿಯಂತಹ ವಿವರಗಳು ಲಭ್ಯವಾಗುತ್ತವೆ.
ಬಿಬಿಎಂಪಿಯ ವಾರ್ಷಿಕ ಲಸಿಕೆ ಕಾರ್ಯಕ್ರಮದಿಂದ ಹೆಚ್ಚಿನ ಪ್ರಮಾಣದ ನಾಯಿಗಳು ತಪ್ಪಿಸಿಕೊಂಡರೆ ಕೆಲವು ಒಂದಕ್ಕಿಂತ ಹೆಚ್ಚು ಬಾರಿ ಲಸಿಕೆಗೆ ಒಳಗಾಗುತ್ತವೆ. ಆದ್ದರಿಂದ ಮೈಕ್ರೋಚಿಪ್ ಡೇಟಾವು ಸರಿಯಾದ ವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಾಯಿಗಳು ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಿವೆಯೇ ಮತ್ತು ಕಾರ್ಯಕ್ರಮವು ಎಷ್ಟು ಉಪಯುಕ್ತವಾಗಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅದನ್ನು ಆಧರಿಸಿ ಅದನ್ನು ವಿಸ್ತರಿಸುತ್ತೇವೆ” ಎಂದು ಡಾ ರವಿಕುಮಾರ್ ಹೇಳಿದ್ದಾರೆ.
English summary
After a gap of four years, the BBMP is all set to start the stray dog census by June-end. In the previous survey of 2019, around three lakh stray dogs were identified.
Story first published: Wednesday, June 21, 2023, 12:19 [IST]