ಪ್ರಧಾನಿ ಮೋದಿ ಅಮೆರಿಕದಲ್ಲಿರುವಾಗಲೇ ಚೀನಾ ಅಧ್ಯಕ್ಷರನ್ನು ‘ಸರ್ವಾಧಿಕಾರಿ’ ಎಂದ ಜೋ ಬೈಡನ್‌- ಇದರ ಹಿಂದಿನ ಮರ್ಮವೇನು? | US President Joe Biden called the President of China a ‘dictator’- Know the Reason

International

oi-Ravindra Gangal

|

Google Oneindia Kannada News

ವಾಷಿಂಗ್ಟನ್‌, ಜೂನ್‌ 21: ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್ ಮೇಲೆ ಚೀನಾದ ಬಲೂನ್ ಹಾರಾಡಿತ್ತು. ಇದು ಎರಡೂ ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು.

ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಚೀನಾ ಪ್ರವಾಸ ಕೈಗೊಂಡಿದ್ದಾರೆ. ಬ್ಲಿಂಕೆನ್ ಅವರು ಜಿನ್‌ಪಿಂಗ್‌ ಅವರನ್ನು ಭೇಟಿಯಾದ ಒಂದು ದಿನದ ನಂತರ ಬೈಡನ್‌ ಈ ಹೇಳಿಕೆ ನೀಡಿದ್ದಾರೆ.

US President Joe Biden called the President of China a dictator- Know the Reason

ಕ್ಯಾಲಿಫೋರ್ನಿಯಾದಲ್ಲಿ ಮಾತನಾಡಿರುವ ಬೈಡನ್‌, ‘ಅಮೆರಿಕಕ್ಕೆ ಬಂದಿದ್ದ ಬಲೂನ್ ಅನ್ನು ಎರಡು ಬಾಕ್ಸ್ ಕಾರ್‌ಗಳಲ್ಲಿ ಪತ್ತೇದಾರಿ ಉಪಕರಣಗಳನ್ನು ತುಂಬಿಸಿ ಹೊಡೆದುರುಳಿಸಿದಾಗ ಜಿನ್‌ಪಿಂಗ್ ತುಂಬಾ ಅಸಮಾಧಾನಗೊಂಡಿದರು’ ಎಂದು ಆರೋಪಿಸಿದ್ದಾರೆ.

‘ಇದು ಸರ್ವಾಧಿಕಾರಿಗಳಿಗೆ ದೊಡ್ಡ ಮುಜುಗರದ ಸಂಗತಿಯಾಗಿದೆ. ಏನಾಯಿತು ಎಂದು ಅವರಿಗೆ ತಿಳಿದಿಲ್ಲ ಎಂಬುದನ್ನು ನಾವು ನಂಬಲು ಸಾಧ್ಯವಿಲ್ಲ. ಅದು ಸಹಜವಾಗಿ ಇಲ್ಲಿಗೆ ಬಂದಿರಲಿಲ್ಲ’ ಎಂದು ಬೈಡನ್‌ ಹೇಳಿದ್ದಾರೆ.

US President Joe Biden called the President of China a dictator- Know the Reason

ಶಂಕಿತ ಚೀನೀ ಪತ್ತೇದಾರಿ ಬಲೂನ್ ಫೆಬ್ರವರಿಯಲ್ಲಿ ಯುಎಸ್ ವಾಯುಪ್ರದೇಶದ ಮೇಲೆ ಹಾರಾಡಿತ್ತು. ಇದನ್ನು ಯುಎಸ್‌ ಭದ್ರತಾ ಪಡೆಗಳು ಹೊಡೆದು ಉರುಳಿಸಿದ್ದವು. ಈ ಘಟನೆ ಬಳಿಕ ಅಮೆರಿಕ- ಚೀನಾ ನಡುವೆ ಉದ್ವಿಗ್ನತೆಗಳು ಹೆಚ್ಚಿವೆ. ಇತ್ತೀಚೆಗೆ ತೈವಾನ್‌ ಅಧಿಕಾರಿಗಳ ನಿಯೋಗವೊಂದು ಅಮೆರಿಕಕ್ಕೆ ಭೇಟಿ ನೀಡಿರುವುದು ಚೀನಾ ಅಧ್ಯಕ್ಷರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚೀನಾವು ನಿಜವಾದ ಆರ್ಥಿಕ ತೊಂದರೆಗಳನ್ನು ಹೊಂದಿದೆ ಎಂದು ಬೈಡನ್‌ ಪ್ರತಿಪಾದಿಸಿದ್ದಾರೆ.

ಕೈಗಾರಿಕಾ ಉತ್ಪಾದನೆ ಮತ್ತು ಚಿಲ್ಲರೆ ಮಾರಾಟದ ಬೆಳವಣಿಗೆಯು ಚೀನಾದಲ್ಲಿ ಮುಗ್ಗರಿಸಿದೆ. ಈ ಹಿನ್ನೆಲೆಯಲ್ಲಿ ಚೀನಾದ ಆರ್ಥಿಕತೆಯು ಮೇ ತಿಂಗಳಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ. ಚೀನಾ ಸಾಂಕ್ರಾಮಿಕ ರೋಗದ ನಷ್ಟಗಳಿಂದ ಇನ್ನೂ ಹೊರಬಂದಿಲ್ಲ ಎಂದು ಬೈಡನ್‌ ಆರೋಪಿಸಿದ್ದಾರೆ.

ಬ್ಲಿಂಕೆನ್ ಮತ್ತು ಜಿನ್‌ಪಿಂಗ್‌ ಅವರು ಸೋಮವಾರ ಸಭೆ ನಡೆಸಿದ್ದಾರೆ. ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ತೀವ್ರ ಅಸಮಾಧಾನಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೂ, ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು ಚೀನಾ ಹಾಗೂ ಅಮೆರಿಕ ನಡುವಿನ ಸಮನ್ವತೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ಹೇಳಲಾಗುತ್ತಿದೆ.

ಎರಡು ದೇಶಗಳ ನಡುವಿನ ಸಂಬಂಧಗಳು ಸರಿಯಾದ ಹಾದಿಯಲ್ಲಿವೆ ಎಂದು ಭಾವಿಸಿರುವುದಾಗಿ ಬೈಡನ್‌ ಅವರು ಸೋಮವಾರ ಹೇಳಿದ್ದರು. ಬ್ಲಿಂಕೆನ್ ಅವರ ಪ್ರವಾಸದ ಸಮಯದಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದರು. ಆದರೆ, ಮಂಗಳವಾರ ಬೈಡನ್‌ ತಮ್ಮ ಮಾತಿನ ದಾಟಿಯನ್ನು ಬದಲಾಯಿಸಿದ್ದಾರೆ.

ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಿರುವ ಕ್ವಾಡ್ ಸ್ಟ್ರಾಟೆಜಿಕ್ ಸೆಕ್ಯುರಿಟಿ ಗ್ರೂಪ್ ಬಗ್ಗೆ ಜಿನ್‌ಪಿಂಗ್‌ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಬೈಡನ್‌ ಮಂಗಳವಾರ ಹೇಳಿದ್ದಾರೆ.

ಕ್ವಾಡ್‌ನೊಂದಿಗೆ ಚೀನಾವನ್ನು ಸುತ್ತುವರಿಯಲು ಯುಎಸ್ ಪ್ರಯತ್ನಿಸುತ್ತಿಲ್ಲ ಎಂಬುದಾಗಿ ಚೀನಾ ಅಧ್ಯಕ್ಷರಿಗೆ ಈ ಹಿಂದೆಯೇ ಮನವರಿಕೆ ಮಾಡಿಕೊಟ್ಟಿರುವುದಾಗಿ ಬೈಡನ್‌ ತಿಳಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಬೈಡನ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅವರ ಮಾತುಕತೆ ಸಂದರ್ಭದಲ್ಲಿ ಚೀನಾದ ಬಗ್ಗೆ ಪ್ರಸ್ತಾಪವಾಗಲಿರುವುದು ಸ್ಪಷ್ಟವಾಗಿದೆ. ಮೋದಿ ಭೇಟಿ ಸಂದರ್ಭದಲ್ಲೇ ಬಂದಿರುವ ಬೈಡನ್‌ ಹೇಳಿಕೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

English summary

US President Joe Biden called the President of China a ‘dictator’.

Story first published: Wednesday, June 21, 2023, 13:02 [IST]

Source link