ಕರ್ನಾಟಕ ಪೊಲೀಸರ ಆರೋಗ್ಯಕ್ಕಾಗಿ ‘ಅನನ್ಯ’ ಯೋಜನೆ, ವಿವರಗಳು | Arogya Bhagya Health Scheme For Karnataka Police Know Details

Karnataka

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 21; ಬಿಡುವು, ರಜೆ ಇಲ್ಲದಂತೆ ಕಾನೂನು & ಸುವ್ಯವಸ್ಥೆ ಕಾಪಾಡಲು ಕಾರ್ಯ ನಿರ್ವಹಣೆ ಮಾಡುವುದು ಪೊಲೀಸರು. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರವು ಆರೋಗ್ಯ ಭಾಗ್ಯ ಯೋಜನೆ ಎಂದು ಕರೆಯಲ್ಪಡುವ ‘ಅನನ್ಯ’ ಯೋಜನೆಯನ್ನು ಪೊಲೀಸರಿಗೆ ಮತ್ತು ಅವರ ಕುಟುಂಬಗಳಿಗೆ ಪಚಯಿಸಿದೆ.

ತನ್ನ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಪರಿಚಯಿಸಿದೆ. ಈ ಯೋಜನೆಯನ್ನು 2002 ನೇ ಸಾಲಿನ ಜೂನ್‌ ಮಾಹೆಯಲ್ಲಿ ಪ್ರಾರಂಬಿಸಲಾಯಿತು. ಈ ಯೋಜನೆಯು ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯವರ ಮಾಸಿಕ ಕೊಡುಗೆಯಿಂದ ಮತ್ತು ಸರ್ಕಾರದಿಂದ ವೈಧ್ಯಕೀಯ ಮರುಪಾವತಿಯ ಮೂಲಕ ನಿರ್ವಹಿಸಲ್ಪಡುವ ಸ್ವ ಹಣಕಾಸು ಯೋಜನೆಯಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಪ್ರಗತಿ ಪರಿಶೀಲಿಸಿದ ಸಿಎಂ: ಸೇವೆಯಲ್ಲಿನ ಲೋಪ ಸರಿಪಡಿಸಲು ಸಿದ್ದರಾಮಯ್ಯ ತಾಕೀತುರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಪ್ರಗತಿ ಪರಿಶೀಲಿಸಿದ ಸಿಎಂ: ಸೇವೆಯಲ್ಲಿನ ಲೋಪ ಸರಿಪಡಿಸಲು ಸಿದ್ದರಾಮಯ್ಯ ತಾಕೀತು

Arogya Bhagya Health Scheme For Karnataka Police Know Details

ಈ ಯೋಜನೆಯನ್ನು 2002ನೇ ಸಾಲಿನ ಜೂನ್ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮಾಸಿಕ ಕೊಡುಗೆಯಿಂದ ಮತ್ತು ಸರ್ಕಾರದಿಂದ ವೈದ್ಯಕೀಯ ಮರುಪಾವತಿಯ ಮೂಲಕ ನಿರ್ವಹಿಸಲ್ಪಡುವ ಸ್ವ-ಹಣಕಾಸು ಯೋಜನೆಯಾಗಿದೆ.

 ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿಸಿದ್ರೆ ಕಟ್ಟುನಿಟ್ಟಿನ ಕ್ರಮ, ಆರೋಗ್ಯ ಸಚಿವರ ಎಚ್ಚರಿಕೆ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷಿಸಿದ್ರೆ ಕಟ್ಟುನಿಟ್ಟಿನ ಕ್ರಮ, ಆರೋಗ್ಯ ಸಚಿವರ ಎಚ್ಚರಿಕೆ

ವೈದ್ಯಕೀಯ ಆಡಳಿತದಲ್ಲಿ ಪರಿಣತಿಯನ್ನು ಹೊಂದಿರುವ ನೋಡಲ್ ಎಜೆನ್ಸಿಯವರು ಈ ಯೋಜನೆಯನ್ನು ನಿರ್ವಹಿಸುತ್ತಾರೆ. ಜಿಲ್ಲೆಗಳು ಮತ್ತು ನಗರಗಳಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಸೌಲಭ್ಯಗಳೊಂದಿಗೆ ವೈದ್ಯಕೀಯ ಮರು ಪಾವತಿ ಮಾಡುವ ಉದ್ದೇಶದಿಂದ ಸರ್ಕಾರಿ ಮಾನ್ಯತೆ ಪಡೆದ ಹೈಟೆಕ್ ಆಸ್ಪತ್ರೆಗಳನ್ನು ನೋಡಲ್ ಏಜೆನ್ಸಿಯಾಗಿ ಗುರುತಿಸಲಾಗಿದೆ.

ದಾವಣಗೆರೆ: ಸಹಾಯ ಮಾಡಿದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಪದ್ಭಾಂಧವದಾವಣಗೆರೆ: ಸಹಾಯ ಮಾಡಿದ ತಪ್ಪಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಪದ್ಭಾಂಧವ

ಯೋಜನೆಯ ವಿವರಗಳು; ಆರೋಗ್ಯ ಭಾಗ್ಯ ಯೋಜನೆ ಎಂದು ಕರೆಯಲ್ಪಡುವ ‘ಅನನ್ಯ’ ಯೋಜನೆಯಡಿ 60000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯವರು ಬರುತ್ತಾರೆ. ಕರ್ನಾಟಕ ಪೊಲೀಸ್ ಆರೋಗ್ಯ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಒಳ್ಳೆಯ ಗುಣಮಟ್ಟದ 69ಕ್ಕೂ ಹೆಚ್ಚು ಆಸ್ಪತ್ರೆಗಳನ್ನು (ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ) ಈ ಯೋಜನೆಯಡಿಯಲ್ಲಿ ಸೇರಿಸಲಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ಆಸ್ಪತ್ರೆ ಈ ಯೋಜನೆಯಡಿ ಬರುತ್ತದೆ ಎಂಬ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಈ ಆರೋಗ್ಯ ಭಾಗ್ಯ ಯೋಜನೆಗೆ ಪೊಲೀಸರ ಕೊಡುಗೆ, ಗೆಜೆಟೆಡ್ ಉದ್ಯೋಗಿಗಳು 250 ರೂ. ಗೆಜೆಟೆಡ್ ಅಲ್ಲದ ಉದ್ಯೋಗಿಗಳು 200 ರೂ. ಕೊಡುಗೆಯನ್ನು ನೀಡಬೇಕು. ಮಾಸಿಕವಾಗಿ ವೇತನದಲ್ಲಿ ಈ ಯೋಜನೆಗಾಗಿ ಕಡಿತ ಮಾಡಲಾಗುತ್ತದೆ. ಆರೋಗ್ಯ ಹದಗೆಟ್ಟಾಗ ಪೊಲೀಸರು ಯೋಜನೆ ಉಪಯೋಗ ಪಡೆದು ಚಿಕಿತ್ಸೆ ಪಡೆಯಬಹುದಾಗಿದೆ.

ಈ ಯೋಜನೆಯಡಿ ಮೊದಲೇ ಇರುವಂತ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಆಸ್ಪತ್ರೆಗೆ ಪ್ರವೇಶದ ಸಮಯದಿಂದ ಚಿಕಿತ್ಸೆ ಮುಗಿದ ನಂತರ ಹೊರಹೋಗುವವರೆಗೂ ಸಂಪೂರ್ಣ ವಹಿವಾಟು ನಗದು ರಹಿತವಾಗಿರುತ್ತದೆ.

ಕರ್ನಾಟಕ ಸರ್ಕಾರದ ಪ್ರಕಾರ ವೈದ್ಯಕೀಯ ಹಾಜರಾತಿ ನಿಯಮಗಳು 1963 ರ ಅಡಿಯಲ್ಲಿ ಕೃತಕ ಅಂಗಾಂಗ (Implants & prosthesis) ಜೋಡಣೆ ಹೊರತುಪಡಿಸಿ ಉಳಿದ ಎಲ್ಲಾ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಯೋಜನೆ ಜಾರಿಗೆ ಬಂದ ಬಳಿಕ ಕೆಳ ಹಂತದ ಸಿಬ್ಬಂದಿಗಳಿಗೆ ಹಲವು ಗೊಂದಲಗಳಿತ್ತು. ಆದ್ದರಿಂದ ಇಲಾಖೆಯ ಮೂಲಕವೇ ಸ್ಪಷ್ಟೀಕರಣವನ್ನು ನೀಡಲಾಗಿದೆ.

ಈ ಯೋಜನೆಯ ಪ್ರಾರಂಭದಲ್ಲಿ ಪೊಲೀಸ್‌ ಸಿಬ್ಬಂದಿ, ಆತನ/ ಆಕೆಯ ಪತ್ನಿ/ ಪತಿ, 21 ವರ್ಷ ಮೀರದ ಇಬ್ಬರು ಮಕ್ಕಳು ಮತ್ತು ತಂದೆ ತಾಯಿ ಯೋಜನೆಯಡಿ ಫಲಾನುಭವಿಗಳಾಗಿದ್ದರು. ತದನಂತರ ತಂದೆ-ತಾಯಿಯನ್ನು ಕೈಬಿಡಲಾಗಿರುತ್ತದೆ. ಮಕ್ಕಳ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963 ನಿಯಮದಲ್ಲಿ ಅವಕಾಶ ಇರುವ ಎಲ್ಲಾ ಅವಲಂಬಿತ ಮಕ್ಕಳನ್ನು ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮ 1963 ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳನ್ನು ಮಾತ್ರ ಈ ಯೋಜನೆಯಡಿ ಗುರುತಿಸಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ 140ಕ್ಕೂ ಅಧಿಕ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ಪರಿಗಣಿಸಲಾಗುವ ಖಾಯಿಲೆಗಳು; ಯೋಜನೆಯಡಿ ಹೃದಯಕ್ಕೆ ಸಂಬಂಧಿಸಿದ ಖಾಯಿಲೆ (ವೈದ್ಯಕೀಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿರುವುದು), ಮೂತ್ರಪಿಂಡ ತೊಂದರೆಗಳು, ಎಲ್ಲಾ ರೀತಿಯ ಕ್ಯಾನ್ಸರ್, ತುರ್ತು ಚಿಕಿತ್ಸೆ ಅಗತ್ಯವಿರುವ ಎಲ್ಲಾ ಖಾಯಿಲೆಗಳು, ಶಸ್ತ್ರಚಿಕಿತ್ಸೆ ಅಗತ್ಯವಿರುವ ಎಲ್ಲಾ ಖಾಯಿಲೆಗಳು, ಐ.ಸಿ.ಯು. ಆರೈಕೆ ಬೇಕಾದ ಎಲ್ಲಾ ಖಾಯಿಲೆಗಳು, ಎಲ್ಲಾ ಗಂಭೀರ ಮತ್ತು ಮಾರಣಾಂತಿಕ ಖಾಯಿಲೆಗಳು, ಹೆರಿಗೆ (ಸಾಮಾನ್ಯ ಮತ್ತು ಸಿಸೇರಿಯನ್), ಒಳರೋಗಿಯಾಗಿ ದಾಖಲಾಗಬೇಕಾದ ಕಣ್ಣಿನ ಎಲ್ಲಾ ಖಾಯಿಲೆಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿರುವ ಆಘಾತಗಳಿಂದ ಉಂಟಾದ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಲಾಗಿದೆ.

ಹೊರರೋಗಿ ಚಿಕಿತ್ಸೆ, ಸೌಂದರ್ಯವರ್ಧಕ ಚಿಕಿತ್ಸೆ, ಆತ್ಮಹತ್ಯೆ ಪ್ರಯತ್ನ, ಸ್ವಯಿಚ್ಚಾತ ಗರ್ಭಪಾತ, ಕುಟುಂಬ ಯೋಜನೆ ಮತ್ತು ಲ್ಯಾಪ್ರೋಸ್ಕೋಪಿಕ್ ಸ್ಟರಿಲೈಜೇಷನ್, ಸಾಮಾನ್ಯ ದಂತ ಚಿಕಿತ್ಸೆಗಳನ್ನು ಪರಿಗಣಿಸಲಾಗುವುದಿಲ್ಲ.

ಆರೋಗ್ಯ ಭಾಗ್ಯ ಯೋಜನೆಯ ಹೆಚ್ಚಿನ ವಿವರಗಳು, ಯೋಜನೆ ಯಾವ-ಯಾವ ಆಸ್ಪತ್ರೆಗಳಿಗೆ ಒಳಪಡುತ್ತದೆ ಎಂಬ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. https://ksp.karnataka.gov.in/new-page/Arogya Bhagya Yojane/kn

English summary

Karnataka government Arogya Bhagya health scheme in the name of Ananya for Karnataka police. Here are the details of the scheme.

Source link