ವಿಪಕ್ಷ ನಾಯಕನ ಆಯ್ಕೆ ವಿಳಂಬ; ಟ್ವೀಟ್‌ನಲ್ಲಿ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌ | No Adjustment Politics With Congress Leader Says Basanagouda Patil Yatnal

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಪಾಯಳಯಲ್ಲಿ ಹೊಂದಾಣಿಕೆ ರಾಜಕೀಯ ಹೆಚ್ಚು ಚರ್ಚೆಯಾಗುತ್ತಿದ್ದಾರೆ. ಬಿಜೆಪಿಯಲ್ಲಿ ಸ್ವಪಕ್ಷದ ನಾಯಕರ ವಿರುದ್ದವೇ ಆರೋಪ ಹಾಗೂ ಪ್ರತ್ಯಾರೋಪ ಹೆಚ್ಚಾಗಿದ್ದು, ಇದೀಗ ವಿಪಕ್ಷ ಸ್ಥಾನದ ವಿಚಾರವಾಗಿ ಬಿಜೆಪಿ ಪಾಳಯದಲ್ಲಿ ಪೈಪೋಟಿ ಶುರುವಾಗಿದೆ.

ಬಜೆಟ್‌ ಅಧಿವೇಶನ ಆರಂಭವಾಗಿ 10 ದಿನ ಕಳೆದರು ವಿಪಕ್ಷ ನಾಯಕನನ್ನ ಆಯ್ಕೆ ಮಾಡದ ಹಿನ್ನಲೆ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು, ಸದನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಸದಸ್ಯರ ನಡುವೆ ವಿಪಕ್ಷ ನಾಯಕನ ವಿಚಾರವಾಗಿ ಟೀಕೆ ಟಿಪ್ಪಣಿಗಳು ಶುರುವಾಗಿವೆ.

Basanagouda Patil Yatnal

ಇತ್ತ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿದ್ದು, ಆಡಳಿತ ಪಕ್ಷ ಕಾಂಗ್ರೆಸ್‌ ಮುಂದೆ ಬಿಜೆಪಿಗೆ ಹಲವು ಬಾರಿ ಮುಜುಗರ ಉಂಟಾಗಿದೆ. ಇದರ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿದ್ದು ಬಿಜೆಪಿ ಕಾರ್ಯಕರ್ತರು ಹಾಗೂ ನಾಡಿನ ಮತದಾರರಿಗೆ ತಮ್ಮದೇ ರೀತಿಯಲ್ಲಿ ಮಾಹಿತಿ ನೀಡಿದ್ದಾರೆ. ಅದಲ್ಲದೇ ನಾವು ಯಾರ ಜೊತೆಯೂ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ

ತಮ್ಮ ಟ್ವೀಟ್‌ನಲ್ಲಿ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಎಲ್ಲ ಬಿಜೆಪಿ ಶಾಸಕರು ಸದನದಲ್ಲಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಯಾವ ರಾಜಕಾರಣಿ ಅಥವಾ ಮಂತ್ರಿಗಳ ಜೊತೆಯೂ ನಮ್ಮ “Adjustment” ರಾಜಕೀಯ ಇಲ್ಲ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ರಾಜ್ಯದ ಮತದಾರರಿಗೆ ತಿಳಿಸಿದ್ದಾರೆ.

ಜೊತೆಗೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹಾಗೂ ಸರ್ಕಾರದ ವೈಫಲ್ಯದ ಕುರಿತು ನಮ್ಮ ಎಲ್ಲಾ ಶಾಸಕ ಮಿತ್ರರು ಸಮರ್ಥವಾಗಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಾಗೂ ಆಯವ್ಯಯದ ಕುರಿತು ಚರ್ಚೆಗಳು ಬಾಕಿ ಇದೆ ಎನ್ನುವ ಮೂಲಕ ಸರ್ಕಾರವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಮುಂದುವರೆದ ಗೊಂದಲ; ಬಿಜೆಪಿಗೆ ಶಾಸಕಾಂಗ ನಾಯಕರಿಲ್ಲ!

ಹೌದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ, ಮತ್ತೆ ಪಕ್ಷವನ್ನ ಸಂಘಟಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ಸ್ಥಾನದ ಆಯ್ಕೆ ಹೈಕಮಾಂಡ್‌ ಮುಂದಾಗಿದ್ದು, ಬಿಜೆಪಿ ಶಾಸಕಾಂಗ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರದಿಂದ ರಾಜ್ಯಕ್ಕೆ ಬಂದಿದ ವಿಕ್ಷಕರು ಈಗಾಗಲೇ ಬಿಜೆಪಿ ಶಾಸಕರ ಅಭಿಪಾಯ್ರವನ್ನ ಸಂಗ್ರಹಿಸಿ, ಹೈಕಮಾಂಡ್‌ ಗೆ ವರದಿಯನ್ನ ನೀಡಿದ್ದು, ಬರೋಬ್ಬರಿ ಎರಡು ತಿಂಗಳಾದ್ರೂ ಬಿಜೆಪಿಗೆ ಶಾಸಕಾಂಗ ನಾಯಕರಿಲ್ಲದಂತಾಗಿದೆ.

Assembly Session: ಯತ್ನಾಳ್ ಕುಳಿತುಕೊಳ್ಳಪ್ಪ ‌ನೀನು ವಿರೋಧ ಪಕ್ಷದ ನಾಯಕ ಆಗಲ್ಲ: ಸಿದ್ದರಾಮಯ್ಯ ಭವಿಷ್ಯAssembly Session: ಯತ್ನಾಳ್ ಕುಳಿತುಕೊಳ್ಳಪ್ಪ ‌ನೀನು ವಿರೋಧ ಪಕ್ಷದ ನಾಯಕ ಆಗಲ್ಲ: ಸಿದ್ದರಾಮಯ್ಯ ಭವಿಷ್ಯ

ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಹಿನ್ನಲೆ ಕಾಂಗ್ರೆಸ್‌ ನಾಯಕರು ಈಗಾಗಲೇ ಹಲವು ಬಾರೀ ಟೀಕೆಯನ್ನ ಮಾಡುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿ ವಿರೋಧ ಪಕ್ಷದ ನಾಯಕನಿಲ್ಲದೇ ಕರ್ನಾಟಕ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಬೇಕಾಗಿದೆ. ಸದ್ಯ ಸದನ ನಡೆಯುತ್ತಿದ್ದರೂ ವಿಪಕ್ಷ ನಾಯಕನ ಆಯ್ಕೆ ಮಾತ್ರ ಆಗಿಲ್ಲ. ಸದನದಲ್ಲಿ ಪ್ರತಿಬಾರಿ ಆಡಳಿತ ಪಕ್ಷದೊಂದಿಗೆ ಹೋರಾಟಕ್ಕೆ ಇಳಿದಾಗ ನಿಮಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿತ್ತು, ಬಿಜೆಪಿ ನಾಯಕರಿಗೆ ಸದನದಲ್ಲಿ ಮುಜುಗರ ಉಂಟಾಗುತ್ತಿದೆ.

English summary

Basanagouda Patil Yatnal Said That No Adjustment Politics With Congress Leader

Story first published: Wednesday, July 12, 2023, 21:36 [IST]

Source link