ಭಾರತದ 10 ಶ್ರೀಮಂತ ರಾಜ್ಯಗಳಿವು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಅಂಕಿಅಂಶ, ವಿವರ ತಿಳಿಯಿರಿ | Top 10 Richest States in India 2023: Which are they? Check the list and details

India

oi-Ravindra Gangal

|

Google Oneindia Kannada News

ನವದೆಹಲಿ, ಜುಲೈ 12: ಭಾರತದ ಹಲವಾರು ರಾಜ್ಯಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳನ್ನು ಮೆರೆದಿವೆ. ಆರ್ಥಿಕತೆ, ಮೂಲಭೂತ ಸೌಕರ್ಯ, ಕೈಗಾರಿಕೆಗಳಿಗೆ ಉತ್ತೇಜನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ರಾಜ್ಯಗಳು ತಮ್ಮದೇ ಆದ ಛಾಪು ಮೂಡಿಸಿವೆ. ಭಾರತದ ಶ್ರೀಮಂತ ರಾಜ್ಯಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ. ಈ ಶ್ರೀಮಂತಿಕೆಯನ್ನು ಜಿಡಿಪಿ ಮೂಲಕ ಅಳೆಯಲಾಗುತ್ತದೆ.

ಭಾರತದ ಹತ್ತು ಶ್ರೀಮಂತ ರಾಜ್ಯಗಳಿವು

1- ಮಹಾರಾಷ್ಟ್ರ: ಇದು ಭಾರತದಲ್ಲಿ ಅತಿ ಹೆಚ್ಚು ದೇಶೀಯ ಉತ್ಪನ್ನವನ್ನು ಹೊಂದಿದೆ. 400 ಬಿಲಿಯನ್‌ ಡಾಲರ್‌ಗೂ ಹೆಚ್ಚು ಹೆಚ್ಚು ಪ್ರಮಾಣದ ದೇಶೀಯ ಉತ್ಪನ್ನವು ಮಹಾರಾಷ್ಟ್ರದಲ್ಲಿದೆ. ರಾಜ್ಯವು ತನ್ನ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಭಾರತದ ವಾಣಿಜ್ಯ ನಗರಿ ಎಂದೇ ಹೆಸರುವಾಸಿಯಾಗಿರುವ ಮುಂಬೈ ಮಹಾನಗರವು ಮಹಾರಾಷ್ಟ್ರದಲ್ಲಿದೆ. ಇದು ಭಾರತದ ಅತಿದೊಡ್ಡ ಮಹಾನಗರವಾಗಿದ್ದು ವ್ಯಾಪಾರ ಮತ್ತು ಹಣಕಾಸಿನ ವ್ಯವಹಾರಗಳಿಗೆ ಕೇಂದ್ರವಾಗಿದೆ. ಮಹಾರಾಷ್ಟ್ರವು ಹತ್ತಿ, ಸೋಯಾಬೀನ್ ಮತ್ತು ಕಬ್ಬಿನ ಅದಿರನ ಪ್ರಮುಖ ಉತ್ಪಾದಕ ಕೇಂದ್ರವಾಗಿದೆ.

Top 10 Richest States in India 2023

2- ತಮಿಳುನಾಡು: ಇದು ಭಾರತದಲ್ಲಿ ಎರಡನೇ ದೇಶೀಯ ಉತ್ಪನ್ನವನ್ನು ಹೊಂದಿದ ರಾಜ್ಯವಾಗಿದೆ. 300 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ದೇಶೀಯ ಉತ್ಪನ್ನವನ್ನು ತಮಿಳುನಾಡು ಹೊಂದಿದೆ. ಇದು ಭಾರತದಲ್ಲಿ ಎರಡನೇ ಶ್ರೀಮಂತ ರಾಜ್ಯವಾಗಿದೆ. ಶಕ್ತಿಯುತ ಮತ್ತು ವೈವಿಧ್ಯಮಯ ಆರ್ಥಿಕತೆಗೆ ರಾಜ್ಯವು ಹೆಸರುವಾಸಿಯಾಗಿದೆ. ಇದಕ್ಕೆ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳು ಗಣನೀಯ ಕೊಡುಗೆ ನೀಡಿವೆ. ಎಂಜಿನಿಯರಿಂಗ್, ಆಟೋಮೊಬೈಲ್ ಮತ್ತು ಜವಳಿ ಕ್ಷೇತ್ರಗಳಿಗೆ ತಮಿಳುನಾಡು ಹೆಸರುವಾಸಿಯಾಗಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಆಟೋಮೊಬೈಲ್‌ ಉತ್ಪಾದನಾ ಕೇಂದ್ರವಾಗಿದೆ.

3- ಗುಜರಾತ್‌: 150 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ದೇಶೀಯ ಉತ್ಪನ್ನವನ್ನು ಗುಜರಾತ್‌ ಹೊಂದಿದೆ. ಗುಜರಾತ್ ಭಾರತದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ಗುಜರಾತ್‌ನ ಆರ್ಥಿಕ ಯಶಸ್ಸು ಹಲವಾರು ಕಾರಣಗಳ ಪರಿಣಾಮವಾಗಿದೆ. ರಾಜ್ಯದಲ್ಲಿ ದೃಢವಾದ ಕೈಗಾರಿಕಾ ಮೂಲಗಳಿವೆ. ಉತ್ತಮ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ಜಾಲವನ್ನು ಗುಜರಾತ್‌ ಒಳಗೊಂಡಿದೆ. ಜವಳಿ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್‌ಗಳ ಉತ್ಪಾದನೆಗೆ ರಾಜ್ಯವು ಹೆಸರುವಾಸಿಯಾಗಿದೆ.

Top 10 Richest States in India 2023

4- ಕರ್ನಾಟಕ: 150 ಬಿಲಿಯನ್‌ ಡಾಲರ್‌ಗೂ ಹೆಚ್ಚಿನ ದೇಶೀಯ ಉತ್ಪನ್ನವನ್ನು ಕರ್ನಾಟಕ ಹೊಂದಿದೆ. ಇದು ನಾಲ್ಕನೇ ಶ್ರೀಮಂತ ರಾಜ್ಯವಾಗಿದೆ. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡೂ ಗಣನೀಯ ಅಭಿವೃದ್ಧಿ ಕಂಡಿವೆ. ಕಬ್ಬು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ರಾಜ್ಯದ ಬಹುಪಾಲು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ರಾಜ್ಯಕ್ಕೆ ಗಣನೀಯ ಆರ್ಥಿಕ ಕೊಡುಗೆಯನ್ನು ನೀಡುತ್ತದೆ. ಐಟಿ, ಜೈವಿಕ ತಂತ್ರಜ್ಞಾನ ಮತ್ತು ಏರೋಸ್ಪೇಸ್ ಸೇರಿದಂತೆ ಹಲವಾರು ಕೈಗಾರಿಕೆಗಳು ರಾಜ್ಯದಲ್ಲಿ ನೆಲೆಗೊಂಡಿವೆ. ರಾಜಧಾನಿ ಬೆಂಗಳೂರು ಸಿಲಿಕಾನ್‌ ವ್ಯಾಲಿ ಎಂದೇ ಖ್ಯಾತಿ ಪಡೆದಿದೆ.

5- ಉತ್ತರ ಪ್ರದೇಶ: ಇದು ದೇಶದ ಅತ್ಯಂತ ದೊಡ್ಡ ( ವಿಸ್ತೀರ್ಣ ಹಾಗೂ ಜನಸಂಖ್ಯೆ ) ರಾಜ್ಯವಾಗಿದೆ. ವೈವಿಧ್ಯಮಯ ಮತ್ತು ಶಕ್ತಿಯುತವಾದ ಆರ್ಥಿಕತೆಯ ಕಾರಣದಿಂದಾಗಿ, ಉತ್ತರ ಪ್ರದೇಶ ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಕೃಷಿ ಉದ್ಯಮವು ಗಣನೀಯ ಬೆಳವಣಿಗೆ ಕಂಡಿದೆ. ಉತ್ತರ ಪ್ರದೇಶದ ಬಹುತೇಕ ಜನರಿಗೆ ಕೃಷಿಯೇ ಆಧಾರವಾಗಿದೆ. ಆಹಾರ ಧಾನ್ಯಗಳು, ಕಬ್ಬು ಮತ್ತು ಆಲೂಗಡ್ಡೆಗಳ ಉತ್ಪಾದನೆಗೆ ಉತ್ತರ ಪ್ರದೇಶ ಹೆಸರುವಾಸಿಯಾಗಿದೆ. ಹೈನುಗಾರಿಕೆ, ತೋಟಗಾರಿಕೆ ಮತ್ತು ಪ್ರಾಣಿಗಳ ಕೈಗಾರಿಕೆಗಳಲ್ಲಿ ಅಭಿವೃದ್ಧಿ ಹೊಂದಿದೆ.

Top 10 Richest States in India 2023

6- ಆಂಧ್ರಪ್ರದೇಶ: ಆಂಧ್ರಪ್ರದೇಶವು ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಆರ್ಥಿಕ ಯಶಸ್ಸಿನ ಹಿಂದೆ ಹಲವಾರು ಕಾರಣಗಳಿವೆ. ಉತ್ತಮ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ಜಾಲವನ್ನು ಆಂಧ್ರಪ್ರದೇಶ ಹೊಂದಿದೆ. ಇದು ಕೈಗಾರಿಕಾ ಉದ್ಯಮಿಗಳ ನೆಚ್ಚಿನ ತಾಣವಾಗಿದೆ. ಜವಳಿ, ಔಷಧೀಯ ಮತ್ತು ಕೃಷಿ-ಆಧಾರಿತ ವಲಯಗಳಿಗೆ ಆಂಧ್ರ ಪ್ರದೇಶ ಹೆಸರುವಾಸಿಯಾಗಿದೆ.

7- ತೆಲಂಗಾಣ: ಇದು ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಆರ್ಥಿಕತೆಯು ವೈವಿಧ್ಯಮಯವಾಗಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ರಾಜ್ಯವು ಬಲವಾದ ಒತ್ತು ನೀಡಿದೆ. ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ಕಾರಣದಿಂದ ಪ್ರತಿ ವರ್ಷ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ತೆಲಂಗಾಣದ ಕೃಷಿ ಉದ್ಯಮವು ಗಣನೀಯ ಅಭಿವೃದ್ಧಿ ಕಂಡಿದೆ. ಫಲವತ್ತಾದ ಮಣ್ಣು ಮತ್ತು ಹೇರಳವಾದ ನೀರು ಸರಬರಾಜುಗಳಿಗೆ ಹೆಸರುವಾಸಿಯಾಗಿದೆ. ಇದು ಅಕ್ಕಿ, ಹತ್ತಿ ಮತ್ತು ಮೆಕ್ಕೆಜೋಳದಂತಹ ಬೆಳೆಗಳಿಗೆ ಖ್ಯಾತಿ ಹೊಂದಿದೆ.

Top 10 Richest States in India 2023

8- ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳವು ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಆರ್ಥಿಕತೆಯು ವೈವಿಧ್ಯಮಯವಾಗಿದೆ. ರಾಜ್ಯವು ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಬಲವಾದ ಒತ್ತು ನೀಡಿದೆ. ರಾಜ್ಯವು ತನ್ನ ಸುಪ್ರಸಿದ್ಧ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ಕಾರಣದಿಂದ ಪ್ರತಿ ವರ್ಷ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.

9- ರಾಜಸ್ಥಾನ: ವೈವಿಧ್ಯಮಯ ಆರ್ಥಿಕತೆ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ರಾಜಸ್ಥಾನ ಹೆಸರುವಾಸಿಯಾಗಿದೆ. ರಾಜಸ್ಥಾನವನ್ನು ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾಜ್ಯದ ಆರ್ಥಿಕತೆಯು ಹೆಚ್ಚಾಗಿ ಮೂರು ಕ್ಷೇತ್ರಗಳನ್ನು ಒಳಗೊಂಡಿದೆ: ಕೃಷಿ, ಪ್ರವಾಸೋದ್ಯಮ ಮತ್ತು ಸೇವೆಗಳು. ಇವುಗಳು ತ್ವರಿತ ಗತಿಯಲ್ಲಿ ಬೆಳವಣಿಗೆ ಹೊಂದುತ್ತಿವೆ.

ಈ 5 ರಾಶಿಯ ಮಹಿಳೆಯರು ಶ್ರೀಮಂತ ಪತಿ ಪಡೆಯುವ ಅದೃಷ್ಟವಂತರು... ನಿಮ್ಮ ರಾಶಿ ಇದರಲ್ಲಿದೆಯೇ?ಈ 5 ರಾಶಿಯ ಮಹಿಳೆಯರು ಶ್ರೀಮಂತ ಪತಿ ಪಡೆಯುವ ಅದೃಷ್ಟವಂತರು… ನಿಮ್ಮ ರಾಶಿ ಇದರಲ್ಲಿದೆಯೇ?

10- ಮಧ್ಯಪ್ರದೇಶ: ವೈವಿಧ್ಯಮಯ ಮತ್ತು ಹೇರಳವಾದ ನೈಸರ್ಗಿಕ ಸಂಪನ್ಮೂಲಗಳಿಂದಾಗಿ ರಾಜ್ಯವು ಅಭಿವೃದ್ಧಿ ಕಾಣುತ್ತಿದೆ. ಮಧ್ಯಪ್ರದೇಶವು ರಾಷ್ಟ್ರದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಗೋಧಿ, ಸೋಯಾಬೀನ್ ಮತ್ತು ಹತ್ತಿ ಸೇರಿದಂತೆ ಪ್ರಮುಖ ಬೆಳೆಗಳನ್ನು ಬೆಳೆಯಲಾಗುತ್ತದೆ. ಕೃಷಿ ಉದ್ಯಮವು ರಾಜ್ಯದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿದೆ.

English summary

Top 10 Richest States in India 2023: Check here the list and details of ten richest states in India

Story first published: Wednesday, July 12, 2023, 19:26 [IST]

Source link