ಲಡಾಕ್‌ನಲ್ಲಿ ಅಕಾಲಿಕ ಹಿಮಪಾತ, ಭಾರಿ ಮಳೆ: ರೆಡ್ ಅಲರ್ಟ್ ಘೋಷಣೆ | Red Alert Issued as Ladakh Experiences Unseasonal Snowfall and Rains

India

oi-Naveen Kumar N

|

Google Oneindia Kannada News

ಭಾರಿ ಮಳೆಯಿಂದಾಗಿ ಉತ್ತರ ಭಾರತದ ರಾಜ್ಯಗಳು ತತ್ತರಿಸಿವೆ. ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಲಡಾಕ್ ಸೇರಿದಂತೆ ಹಲವು ಭಾಗಗಳಲ್ಲಿ ಅಕಾಲಿಕ ಹಿಮಪಾತವಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಮಳೆಯಿಂದಾಗಿ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಮಯೂರುನಲ್ಲಿ ಭೂಕುಸಿತ ಉಂಟಾಗಿದ್ದು, ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ. ಎರಡು ದಿನಗಳ ಮಳೆಯ ನಂತರ ಲೇಹ್ ಮತ್ತು ಕಾರ್ಗಿಲ್ ಎರಡೂ ಜಿಲ್ಲೆಗಳಲ್ಲಿನ ಎತ್ತರದ ಪ್ರದೇಶದಲ್ಲಿ ರಾತ್ರಿಯಿಡೀ ಅಕಾಲಿಕ ಹಿಮಪಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

India Rain

ಕಾರ್ಗಿಲ್‌ನ ರಂಗ್ಡಮ್ ಗ್ರಾಮವು ಸುಮಾರು ಮೂರು ಇಂಚುಗಳಷ್ಟು ಹಿಮಪಾತಕ್ಕೆ ಸಾಕ್ಷಿಯಾಗಿದೆ, ಪೆನ್ಸಿಲಾ, ಝನ್ಸ್ಕರ್ ಮತ್ತು ಕಾರ್ಗಿಲ್ ಸುತ್ತಮುತ್ತಲಿನ ಬೆಟ್ಟಗಳು ಸೇರಿದಂತೆ ಇತರ ಪ್ರದೇಶಗಳು ಸಹ ಹಿಮದ ಹೊದಿಕೆಯಿಂದ ಆವೃತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾರ್ಗಿಲ್-ಜನ್ಸ್ಕಾರ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಲಾಮಯೂರುನಲ್ಲಿ ಭೂಕುಸಿತದ ನಂತರ, ಲೇಹ್-ಕಾರ್ಗಿಲ್ ಮುಖ್ಯ ಹೆದ್ದಾರಿಯನ್ನು ಸಂಚಾರಕ್ಕೆ ಮುಚ್ಚಲಾಗಿದ್ದು, ರಸ್ತೆ ಸಂಚಾರವನ್ನು ಮತ್ತೆ ಆರಂಭಿಸಲು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶಕ್ಕೆ “ರೆಡ್ ಅಲರ್ಟ್” ನೀಡುವುದರ ಜೊತೆಗೆ ಭಾನುವಾರ ಸಂಜೆಯವರೆಗೆ ಮಳೆ ಮತ್ತು ಹಿಮಪಾತವು ಮುಂದುವರಿಯುತ್ತದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

“ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ವ್ಯಾಪಕವಾದ ಭಾರೀ ಮಳೆ ಮತ್ತು ಹಿಮಪಾತವಿದೆ. ಜನರು ಜಾಗರೂಕರಾಗಿರಲು ಮತ್ತು ಇಳಿಜಾರು ಪ್ರದೇಶಗಳಲ್ಲಿ ಓಡಾಡುವುದನ್ನು ತಪ್ಪಿಸಲು ಸೂಚಿಸಲಾಗಿದೆ” ಎಂದು ಹವಾಮಾನ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯಾಗುತ್ತಿದ್ದು ಹಠಾತ್ ಪ್ರವಾಹದ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ. ಆದಾಗ್ಯೂ, ಹವಾಮಾನ ತಜ್ಞರು ಜುಲೈ 10 ರಿಂದ 14 ರವರೆಗೆ ಚದುರಿದ ಸ್ಥಳಗಳಲ್ಲಿ ಪ್ರತ್ಯೇಕವಾದ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಉತ್ತರಾಖಂಡದಲ್ಲಿ ಐವರು ಸಾವು

ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ ಭಾನುವಾರ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಗಂಗಾ ಸೇರಿದಂತೆ ಎಲ್ಲಾ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಗುಡ್ಡಗಾಡು ರಾಜ್ಯದಲ್ಲಿ ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ, ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಪ್ರತಿಕೂಲ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, ಅನಗತ್ಯ ಸಂಚಾರವನ್ನು ತಪ್ಪಿಸುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜನರಿಗೆ ಮನವಿ ಮಾಡಿದ್ದಾರೆ.

ಭಾರಿ ಮಳೆಯಿಂದಾಗಿ ಕುಲುವಿನ ರೋಹ್ಟಾಂಗ್ ಸುರಂಗ ರಸ್ತೆ ಮತ್ತು ರೋಹ್ಟಾಂಗ್ ಪಾಸ್ ರಸ್ತೆಯನ್ನು ಮುಚ್ಚಲಾಗಿದೆ. ಶಿಮ್ಲಾ-ಕಲ್ಕಾ ಮಾರ್ಗದಲ್ಲಿ ರೈಲುಗಳನ್ನು ರದ್ದುಗೊಳಿಸಲಾಗಿದೆ

English summary

Wide parts of Ladakh witnessed unseasonal snowfall and heavy rains, leading to a red alert being issued by the meteorological department. Additionally, landslides caused by the rainfall on the Leh-Kargil-Srinagar National Highway at Lamayuru resulted in the closure of the crucial highway.

Story first published: Sunday, July 9, 2023, 18:37 [IST]

Source link