ವಿಶ್ವಪ್ರಸಿದ್ಧ ಜೋಗಫಾಲ್ಸ್‌ ಬಳಿ ಪ್ರವಾಸಿಗರ ಭರ್ಜರಿ ಡ್ಯಾನ್ಸ್‌, ವಿಡಿಯೋ ವೈರಲ್‌ | Tourists Dance near world famous Tourist spot Jog Falls

Travel

lekhaka-Sandesh R Pawar

By ಶಿವಮೊಗ್ಗ ಪ್ರತಿನಿಧಿ

|

Google Oneindia Kannada News

ಶಿವಮೊಗ್ಗ, ಜುಲೈ, 09: ಮುಂಗಾರು ಮಳೆ ಚುರುಕಾದ ಹಿನ್ನೆಲೆ ಈಗಾಗಲೇ ರಾಜ್ಯದ ಬಹುತೇಕ ಜಲಾಶಯಗಳ ನೀರಿನ ಮಟ್ಟ ಏರಿಕೆ ಆಗುತ್ತಿದ್ದು, ಈ ದೃಶ್ಯವನ್ನು ಸವಿಯಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಅದೇ ರೀತಿ ಜೋಗದ ಸಿರಿಯ ಮಡಿಲಿನಲ್ಲಿ ಯುವತಿಯರು ಸಕತ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.

ಹಾಲ್ನೊರೆಯಂತೆ ಕಂಗೊಳಿಸುವ ಜೋಗ್ ಫಾಲ್ಸ್ ಮುಂದೆ ಯುವತಿಯರು ಹೆಜ್ಜೆ ಹಾಕಿದ್ದಾರೆ. ರಾಜ, ರಾಣಿ, ರೋರರ್, ರಾಕೇಟ್ ಮುಂದೆ ಯುವತಿಯರು ರೀಲ್ಸ್‌ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಹೌದು.. ಇತ್ತೀಚಿಗೆ ಈ ರೀಲ್ಸ್ ಟ್ರೆಂಡ್ ಆಗಿದ್ದು, ಇದಕ್ಕಾಗಿ, ವಿಶ್ವವಿಖ್ಯಾತ ಜೋಗ ಜಲಪಾತದ ಮುಂದೆ ರೀಲ್ಸ್ ಮೊರೆ ಹೋದ ಯುವತಿಯರು, ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

Tourist spot Jog Falls

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಆಸುಪಾಸಿನಲ್ಲಿ ಕಳೆದೊಂದು ವಾರದಿಂದ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಇದೀಗ ಜೋಗ ಜಲಪಾತದ ಕಳೆಯೂ ಹೆಚ್ಚಾಗಿದೆ. ಅಲ್ಲದೆ ನಿರಂತರ ವರ್ಷಧಾರೆಯಿಂದಾಗಿ ಕಂಗೊಳಿಸುತ್ತಿದೆ. ಈ ಜೋಗ ಜಲಪಾತದ ವಯ್ಯಾರವನ್ನು ನೋಡಲು ಪ್ರತಿನಿತ್ಯ ಪ್ರವಾಸಿಗರು ಸಾಗಾರೋಪಾದಿಯಲ್ಲಿ ಹರಿದುಬರುತ್ತಿದ್ದಾರೆ.

ಇನ್ನು ವಾರಾಂತ್ಯದ ಪ್ರವಾಸಕ್ಕೆ ಬಂದಂತಹ ನೂರಾರು ಪ್ರವಾಸಿಗರು ಜೋಗ್‌ ಫಾಲ್ಸ್‌ ಸದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಜೋಗ-ಕಾರ್ಗಲ್ ಶರಾವತಿ ಹಿನ್ನೀರ ಪ್ರದೇಶದಲ್ಲಿ ನಿರಂತರ ವರ್ಷಧಾರೆ ಹಿನ್ನೆಲೆಯಲ್ಲಿ ಜಲಪಾತದಲ್ಲಿ ಯಥೇಚ್ಛ ನೀರು ಜಲಪಾತವಾಗಿ ಹೊರಹೋಗುತ್ತಿದ್ದು, ಇದನ್ನು ಅಸ್ವಾದಿಸುವುದೇ ಕಣ್ಣಿಗೆ ಹಬ್ಬವಾದಂತಾಗಿದೆ.

ಮುಳ್ಳಯ್ಯನಗಿರಿಗೆ ಆಗಮಿಸುತ್ತಿದೆ ಪ್ರವಾಸಿಗರ ದಂಡು

ಮತ್ತೊಂದೆಡೆ ವಾರಾಂತ್ಯ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಜಿನುಗು ಮಳೆಯ ನುಡುವೆಯೇ ರಾಜ್ಯದ ಬಹುತೇಕ ಭಾಗಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

ಪ್ರವಾಸಿಗರಿಗೆ ಸಿಹಿಸುದ್ದಿ; ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್, ದರಪ್ರವಾಸಿಗರಿಗೆ ಸಿಹಿಸುದ್ದಿ; ಹುಬ್ಬಳ್ಳಿ-ಜೋಗ ನಡುವೆ ವಿಶೇಷ ಬಸ್, ದರ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಮಾಣಿಕ್ಯಧಾರ, ಮೂಡಿಗೆರೆ ಚಾರ್ಮಡಿ ಘಾಟ್, ದತ್ತಾತ್ರೇಯ ಪೀಠ, ಕಳಸ ಕಳಸೇಶ್ವರ ದೇವಸ್ಥಾನ, ಲಕ್ಕವಳ್ಳಿ ಭದ್ರಾ ಜಲಾಶಯ, ಶೃಂಗೇರಿ ಋಷ್ಯಾ ಶೃಂಗಪುರ, ಶೃಂಗೇರಿ ಶಾರದಾಂಬೆ, ಮೂಡಿಗೆರೆ ದೇವರಮನೆ ಬೆಟ್ಟ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಜಿಲ್ಲೆಯಲ್ಲಿ ಐತಿಹಾಸಿಕ ಹಾಗೂ ಮನಮೋಹನ ಪ್ರವಾಸಿ ತಾಣಗಳಿವೆ.

ಮುಳ್ಳಯ್ಯನಗಿರಿ ಕರ್ನಾಟಕದ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಸಮುದ್ರ ಮಟ್ಟದಿಂದ 1,930 ಮೀಟರ್ (6,330ಅಡಿ) ಎತ್ತರವನ್ನು ಹೊಂದಿದೆ. ಇದು ಚಿಕ್ಕಮಗಳೂರು ನಗರದಿಂದ 26 ಕಿಲೋ ಮೀಟರ್‌ ದೂರದಲ್ಲಿದ್ದು, ಮುಳ್ಳಯ್ಯನಗಿರಿಗೆ ಸಾಗುವ ದಾರಿಯಲ್ಲಿ ಸೀತಾಳಯ್ಯ ನಗಿರಿ ಮೊದಲು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ಮುಳ್ಳಯ್ಯನಗಿರಿ ತುತ್ತ ತುದಿಗೆ ತಲುಪುತ್ತೇವೆ.

ಬೆಟ್ಟದ ಬುಡದ ತನಕ ವಾಹನ ಚಲಿಸಲು ಅನುಕೂಲವಿದೆ. ಮುಂದೆ ಸರ್ಪದ ದಾರಿಯಂತಿರುವ ಹಾದಿಯಲ್ಲಿ ನಡೆದು ಬೆಟ್ಟದ ತುದಿಯನ್ನು ಏರಬೇಕು. ಇಲ್ಲಿನ ಸುಂದರ ಪರಿಸರ, ಮಂಜಿನ ಹನಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಹನ್ನೆರಡು ವರ್ಷಕ್ಕೊಮ್ಮೆ ಬಿಡುವ ಕುರಂಜಿ ಹೂವು ಇಲ್ಲಿನ ವಿಶೇಷ ಆಕರ್ಷಣೆ ಆಗಿದೆ.

ಇನ್ನು ಕೆಮ್ಮಣ್ಣುಗುಂಡಿಗೆ ತರೀಕೆರೆ ತಾಲೂಕು ಲಿಂಗದಹಳ್ಳಿ ಮಾರ್ಗವಾಗಿ ಸಾಗಬೇಕು. ಪವರ್ತಗಳ ಸಾಲು, ಕಾಡಿನ ರಸ್ತೆಯಲ್ಲಿ ಸಾಗಿದರೆ ಈ ಗಿರಿಧಾಮ ಸಿಗುತ್ತದೆ. ತರೀಕೆರೆ ಪಟ್ಟಣದಿಂದ ಈ ಪ್ರವಾಸಿ ತಾಣ 38 ಕಿಲೋ ಮೀಟರ್‌ ದೂರದಲ್ಲಿದೆ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಇದನ್ನು ತಮ್ಮ ಬೇಸಿಗೆ ಧಾಮವನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ಕೆ.ಆರ್.ಗಿರಿಧಾಮ ಅಂತಲೂ ಕರೆಯಲಾಗುತ್ತದೆ.

ಇಲ್ಲಿ ವರ್ಷವಿಡೀ ತಂಪಾದ ಹವಾಗುಣ, ಸುತ್ತಲು ಚಂದ್ರದ್ರೊಣ ಪರ್ವತ ಸಾಲುಗಳು ಸಾಥ್‌ ನೀಡುತ್ತವೆ. ರಾಜಭವನ ಮತ್ತು ಸೂರ್ಯಾಸ್ತದ ದೃಶ್ಯ, ಝೆಡ್ ಪಾಯಿಂಟ್ ಇಲ್ಲಿಯ ವಿಶೇಷ ಆಕರ್ಷಣೆ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ಬೆಟ್ಟ ಅತ್ಯಂತ ಆಕರ್ಷಣಿಯ ಸ್ಥಳವಾಗಿದೆ. ಪ್ರತೀ ವರ್ಷ ದೀಪಾವಳಿಯ ಹಿಂದಿನ ದಿನದಂದು ರಾತ್ರಿ ಇಲ್ಲಿ ದೀಪೋತ್ಸವ ನಡೆಯುತ್ತದೆ.

ಕಡಿದಾದ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ದೇವಿಯ ದರ್ಶನ ಮತ್ತು ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿಗೆ ವರ್ಷಕ್ಕೊಮ್ಮೆ ಮಾತ್ರ ಭೇಟಿ ನೀಡಲು ಸಾಧ್ಯ. ಬೇರೆ ದಿನಗಳಲ್ಲಿ ಬೆಟ್ಟದ ಬುಡದಲ್ಲಿರುವ ದೇವಿರಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ.

ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಯಲ್ಲಿಯೇ ಮುಂದೆ ಸಾಗಿದರೆ ಇನಾಂ ದತ್ತತ್ರೇಯ ಬಾಬಾಬುಡನ್ ಗಿರಿ ಸಿಗುತ್ತದೆ. ಈ ಗಿರಿಪ್ರದೇಶ ಅನಾದಿ ಕಾಲದಿಂದಲ್ಲೂ ಪ್ರಸಿದ್ಧಿ ಹೊಂದಿದೆ. ಎತ್ತರದ ಶಿಖರವನ್ನು ಹೊಂದಿದ್ದು, ನೂರಾರು ವರ್ಷಗಳ ಹಿಂದೆ ಬಾಬಾ ಬುಡನ್ ಇಲ್ಲಿದ್ದರೆಂದು ನಂಬಿಕೆ ಇದೆ. ಮುಸ್ಲಿಮರು, ಗುರು ದತ್ತಾತ್ರೇಯ ಸ್ವಾಮಿ ಇಲ್ಲಿ ಇದ್ದರೆಂದು ಹಿಂದೂಗಳ ನಂಬಿಕೆ ಆಗಿದೆ.

English summary

Tourists Dance near world famous Tourist spot Jog Falls of Shivmogga district

Story first published: Sunday, July 9, 2023, 15:13 [IST]

Source link