Karnataka
oi-Gururaj S

ಬೆಂಗಳೂರು, ಜುಲೈ 09; ಹೊಸನಗರದ ರಾಮಚಂದ್ರಾಪುರ ಮಠದ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು 5 ಕೋಟಿ ರೂ. ಬೇಡಿಕೆಯಿಟ್ಟ ಆರೋಪ ಸಂಬಂಧ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಹಾಗಾಗಿ ಅವರು ವಿಚಾರಣೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. 5 ಆರೋಪಿಗಳು ಇದೀಗ ಬೆಂಗಳೂರಿನ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಿ, ಕೋರ್ಟ್ ಆದೇಶ ನೀಡಿದರಷ್ಟೇ ಆರೋಪ ಮುಕ್ತರಾಗಬಹುದು, ಇಲ್ಲವೇ ಶಿಕ್ಷೆ ಎದುರಿಸಲೇಬೇಕಾದ ಪ್ರಮೇಯ ಎದುರಾಗಿದೆ.
ರಾಘವೇಶ್ವರ ಭಾರತೀ ಶ್ರೀ ವಿರುದ್ಧ ಸಲ್ಲಿಸಿದ್ದ ತೀರ್ಪು ಮರುಪರಿಶೀಲನೆ ಅರ್ಜಿ ವಜಾ

ತಮ್ಮ ವಿರುದ್ಧ ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರು 2014ರಲ್ಲಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಮತ್ತು ಆ ಕುರಿತ 32ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಉತ್ತರ ಕನ್ನಡ ಜಿಲ್ಲೆಯ ಕುಮುಟ ತಾಲೂಕಿನ ಗೋಪಾಲ ಸದಾಶಿವ ಗಾಯತ್ರಿ, ರಾಜಗೋಪಾಲ ಅಡಿ, ಶೇಷಾನಂದ ವಿಶ್ವೇಶ್ವರ ಅಡಿ, ಅಮಿತ್ ನಾಡಕರ್ಣಿ ಮತ್ತು ಗಣಪತಿ ಗಜಾನನ ಹಿರೇ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್ಮೇಲ್: ಆರೋಪಿಗಳ ಅರ್ಜಿ ವಜಾ
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಮೊದಲ ಆರೋಪಿಯು ವಕೀಲರಾಗಿದ್ದಾರೆ. ದಾಖಲೆಗಳ ಪ್ರಕಾರ ಅಸ್ತ್ರ ಮತ್ತು ಗೋಕರ್ಣ ಹಿತರಕ್ಷಣಾ ಸಮಿತಿ ಎಂಬ ಎರಡು ಸಂಘಟನೆಗಳ ಮೂಲಕ ಹೈಕೋರ್ಟ್ಗೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ಹಿಂಪಡೆಯಲು 10 ಲಕ್ಷ ರೂ. ಪಡೆಯುತ್ತಿರುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ.
ರಾಘವೇಶ್ವರ ಶ್ರೀಗಳ ನಕಲಿ ಅಶ್ಲೀಲ ಸಿಡಿ ಪ್ರಕರಣ: ನ್ಯಾಯಾಲಯದ ಮಹತ್ವದ ಆದೇಶ
ಆರೋಪಿಗಳು ಸಂಪರ್ಕದಲ್ಲಿದ್ದರು; ಅಸ್ತ್ರ ಸಂಘಟನೆಯನ್ನು ಎರಡನೇ ಆರೋಪಿ ಚಂದನ್, ಗೋಕರ್ಣ ಹಿತರಕ್ಷಣಾ ಸಮಿತಿಯನ್ನು 7ನೇ ಆರೋಪಿ ಗಣಪತಿ ಗಜಾನನ ಹಿರೇ (ಐದನೇ ಅರ್ಜಿದಾರ) ಪ್ರತಿನಿಧಿಸುತ್ತಾರೆ. ತನಿಖಾಧಿಕಾರಿ ಸಂಗ್ರಹಿಸಿದ್ದ ದೂರವಾಣಿ ಕರೆ ಸಂಭಾಷಣೆಯಿಂದ ಎಲ್ಲಾ ಆರೋಪಿಗಳು ಪ್ರಕರಣದ ಒಂದು, ಎರಡು ಮತ್ತು ಏಳನೇ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಸ್ಪರ ಚರ್ಚಿಸುತ್ತಿದ್ದರು ಎಂಬ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಅಲ್ಲದೆ, ಎರಡೂ ಸಂಘಟನೆಗಳು ಪಿಐಎಲ್ ಸಲ್ಲಿಸಿದ್ದು, ಅದನ್ನು ಹಿಂಪಡೆಯಲು ಸದಸ್ಯರ ಒಪ್ಪಿಗೆ ಪಡೆಯುವುದು ಅಗತ್ಯವಾಗಿರುತ್ತದೆ. ಒಂದನೇ ಆರೋಪಿಯು ಮಧ್ಯವರ್ತಿಯಾಗಿದ್ದು, ದೂರುದಾರರನ್ನು ಸಂಪರ್ಕಿಸಿದ್ದರು. ಮಠದ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳುವ ವಕೀಲ ಅರುಣ್ ಶ್ಯಾಮ್ ಅವರು 10 ಲಕ್ಷ ರೂ. ಸ್ವೀಕರಿಸುವಾಗ ಮೊದಲನೆ ಮತ್ತು ಎರಡನೇ ಆರೋಪಿಯನ್ನು ಪ್ರತ್ಯಕ್ಷವಾಗಿ ಬಲೆಗೆ ಬೀಳಿಸಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ 25 ಮತ್ತು 26ನೇ ಸಾಕ್ಷಿಗಳು ಗೋಕರ್ಣ ದೇವಸ್ಥಾನದ ವಿರುದ್ಧ ಪಿತೂರಿ ನಡೆದಿತ್ತು ಎಂಬುದಾಗಿ ಪೊಲೀಸರ ಮುಂದೆ ನುಡಿದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಈ ಎಲ್ಲಾ ಸತ್ಯಾಂಶ ಮತ್ತು ಸನ್ನಿವೇಶಗಳನ್ನು ಪರಿಗಣಿಸಿದರೆ ಆರೋಪಿಗಳು ಪಿಐಎಲ್ ಹಿಂಪಡೆಯಲು 5 ಕೋಟಿ ರೂ. ಬೇಡಿಕೆಯಿಟ್ಟ ಮತ್ತು 10 ಲಕ್ಷ ರೂ. ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಬಲೆಗೆ ಬಿದ್ದಿರುವುದನ್ನು ಹಗುರವಾಗಿ ಪರಿಗಣಿಸಲಾಗದು. ಪೊಲೀಸರು ಸಂಪೂರ್ಣ ಹಾಗೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಬಹುದಾಗಿದೆ. ಆದ್ದರಿಂದ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶಿಸಿ
ಅಸ್ತ್ರ ಮತ್ತು ಗೋಕರ್ಣ ಹಿತರಕ್ಷಣಾ ಸಮಿತಿಯು ರಾಮಚಂದ್ರಪುರದ ಮಠದ ವಿರುದ್ಧ ಆರ್ಥಿಕ ಅವ್ಯವಹಾರ ಆರೋಪ ಮಾಡಿ 2014ರ ಫೆಬ್ರವರಿಯಲ್ಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು. ಆ ಅರ್ಜಿಯನ್ನು ಹಿಂಪಡೆಯಲು ಆರೋಪಿಗಳು ಮಠಕ್ಕೆ 5 ಕೋಟಿ ರು. ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮಠದ ಸಿಇಒ ಕೃಷ್ಣ ಗಣೇಶ್ ಭಟ್ ಗಿರಿನಗರ ಠಾಣೆಗೆ 2014ರ ಮಾ.21ರಂದು ದೂರು ನೀಡಿದ್ದರು.
English summary
Public Interest litigation (PIL) against Hosanagara Ramachandra Pura Mutt. Karnataka high court declined to quash proceeding’s against 5 accused.