International
oi-Sunitha B

ಜಗತ್ತಿನಾದ್ಯಂತ ಅಕ್ಕಿಯ ಬೆಲೆ ಏರಿಕೆಯಾಗುತ್ತಿರುವುದರಿಂದ ಏಷ್ಯಾ ಮತ್ತು ಆಫ್ರಿಕಾದ ಹಲವಾರು ದೇಶಗಳು ಶೀಘ್ರದಲ್ಲೇ ಇದರ ಹೊಡೆತಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಈ ಎರಡು ದೇಶಗಳು ಅಕ್ಕಿಯ ಕೊರತೆಯನ್ನು ಎದುರಿಸುವ ಲಕ್ಷಣಗಳು ದಟ್ಟವಾಗಿದೆ.
ಅಕ್ಕಿ ಬೆಲೆ ಈಗಾಗಲೇ 11 ವರ್ಷಗಳ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಇದು ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸುವ ಕ್ರಮದ ನಂತರ ಭಾರತದಲ್ಲಿ ಮತ್ತಷ್ಟು ಏರಿಕೆಯಾಗಲಿದೆ.

ಎಲ್ ನಿನೊ ಮಳೆಯ ಪ್ರಭಾವದಿಂದ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಭತ್ತದ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾರುಕಟ್ಟೆಯ ಪರಿಸ್ಥಿತಿಗಳು ಸೂಚಿಸುತ್ತವೆ. ಭಾರತದಲ್ಲಿ ಈಗಾಗಲೇ ಟೊಮೆಟೊ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೇಳೆಕಾಳುಗಳ ಬೆಲೆಗಳು ಹೆಚ್ಚಾಗಿದ್ದು, ಅಕ್ಕಿ ಕೂಡ ಬೆಲೆ ಏರಿಕೆಯ ಪಟ್ಟಿಯಲ್ಲಿದೆ.
ಅಂತಾರಾಷ್ಟ್ರೀಯ ಅಕ್ಕಿ ರಫ್ತಿನ ಶೇಕಡ 40ಕ್ಕಿಂತ ಹೆಚ್ಚು ಪಾಲನ್ನು ಭಾರತ ಮಾತ್ರ ಹೊಂದಿದೆ. ಆದರೆ ದೇಶೀಯವಾಗಿ ಬೆಲೆ ನಿಯಂತ್ರಿಸಲು ಸರಕಾರ ರಫ್ತಿನ ಮೇಲೆ ನಿರ್ಬಂಧ ಹೇರಿದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಸಾಕಷ್ಟು ಏರಿಕೆಯಾಗಲಿದೆ.

ಅಧ್ಯಯನಗಳ ಪ್ರಕಾರ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಅಸಮಾನ ಹವಾಮಾನ ಮತ್ತು ಮಾನ್ಸೂನ್ ಮಳೆಯಿಂದ ಅಕ್ಕಿ ಬೆಲೆಗಳು ಈಗಾಗಲೇ ಪ್ರಭಾವ ಬೀರಿದೆ. ಇದರಿಂದಾಗಿ ವಿಶ್ವದ ಹಲವಾರು ದೇಶಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಅಂತಾರಾಷ್ಟ್ರೀಯ ರಫ್ತು ಮಾರುಕಟ್ಟೆಯಲ್ಲಿ ಭಾರತದ ಅಕ್ಕಿ ಅತ್ಯಂತ ಅಗ್ಗದ ಅಕ್ಕಿಯಾಗಿದೆ ಎಂದು ಅಕ್ಕಿ ರಫ್ತು ಸಂಸ್ಥೆಯ ಅಧ್ಯಕ್ಷ ಪಿ.ವಿ.ಕೃಷ್ಣರಾವ್ ಹೇಳಿದರು. ಈ ಅಕ್ಕಿಯು ಏಷ್ಯಾದ ಹೆಚ್ಚಿನ ಜನರ ಮುಖ್ಯ ಮತ್ತು ದೈನಂದಿನ ಆಹಾರವಾಗಿದೆ. ಎಲ್ ನಿನೋ ಸಮಸ್ಯೆಯಿಂದಾಗಿ ಬಾಂಗ್ಲಾದೇಶ, ಚೀನಾ, ಭಾರತ, ಇಂಡೋನೇಷ್ಯಾ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಕುಸಿತದ ಮುನ್ಸೂಚನೆಯ ಪರಿಣಾಮವೇ ಬೆಲೆ ಏರಿಕೆಯ ಭೀತಿ ಹೆಚ್ಚಾಗಿದೆ.
ಬಾಸ್ಮತಿ ತಳಿಯ ಅಕ್ಕಿಗೆ ಒಂದು ತಿಂಗಳ ಹಿಂದೆ ಕೆಜಿಗೆ 95 ರೂ. ದರ ಇತ್ತು. ಇದೀಗ ದಾಖಲೆಯ ಗರಿಷ್ಠ 110 ರೂ. ದರದಲ್ಲಿ ಮಾರಾಟವಾಗುತ್ತಿದೆ. ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರವಾಹವು ದೇಶದ ಭತ್ತದ ಬೆಳೆಯನ್ನು ಹಾನಿಗೊಳಿಸಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಅಕ್ಕಿ ಗಿರಣಿದಾರರು ದಾಸ್ತಾನು ಹೆಚ್ಚಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಖಾರಿಫ್ ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆಯಲ್ಲಿ ನಿರೀಕ್ಷಿತ ಕುಸಿತ ದಾಖಲಾಗುವ ಮುನ್ಸೂಚನೆ ಹಾಗೂ ನೇಪಾಳಕ್ಕೆ ಸುಂಕ ರಹಿತ ಭತ್ತ ರಫ್ತು ನೀತಿಯಿಂದಾಗಿ ಬಾಸ್ಮತಿ ಹೊರತಾದ ಅಕ್ಕಿಯ ತಳಿಗಳ ಬೆಲೆಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ. 2022-23ರಲ್ಲಿ ಖಾರಿಫ್ ಅಕ್ಕಿ ಉತ್ಪಾದನೆಯು 104.99 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಇದು 2021-22ರಲ್ಲಿ ಉತ್ಪಾದನೆಯಾಗಿದ್ದ 111.76 ಟನ್‌ಗಳಿಗಿಂತ 6.77 ಮಿಲಿಯನ್ ಟನ್ ಕಡಿಮೆಯಾಗಿದೆ.
English summary
Many countries in Asia and Africa are likely to get hit soon as rice prices rise across the world.
Story first published: Friday, July 7, 2023, 12:03 [IST]