ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಹಣ್ಣು, ತರಕಾರಿ ಬೆಲೆ: ಮಾಂಸಾಹಾರಿಗಳಿಗೂ ಬೆಲೆ ಏರಿಕೆ ಬಿಸಿ | Supply Disruptions Cause Surge in Vegetable Prices in Bengaluru

Karnataka

oi-Naveen Kumar N

|

Google Oneindia Kannada News

ಬೆಂಗಳೂರು, ಜೂನ್ 19: ಅತಿಯಾದ ಬಿಸಿಲು, ಅನಿಶ್ಚಿತ ಮಳೆಯ ಕಾರಣ ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಉತ್ಪಾದನೆಯಲ್ಲಿ ಕುಂಠಿತವಾಗಿದೆ. ತರಕಾರಿ, ಹಣ್ಣುಗಳ ಪೂರೈಕೆ ಕಡಿಮೆಯಾದ ಕಾರಣ ಬೇಡಿಕೆ ಜೊತೆ ಬೆಲೆ ಕೂಡ ಬಾರಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಕಳೆದ 15 ದಿನಗಳಿಂದ ತರಕಾರಿ, ಹಣ್ಣಿನ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಇದರ ಜೊತೆಯಲ್ಲಿ ಮಾಂಸಾಹಾರಿಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಕೋಳಿ ಮಾಂಸ, ಮಟನ್, ಕೋಳಿ ಮೊಟ್ಟೆ ಬೆಲೆ ಕೂಡ ಹೆಚ್ಚಾಗಿದೆ.

Vegetable Prices in Bengaluru

ಅದರಲ್ಲೂ ಬೀನ್ಸ್ ದರವಂತೂ ಗಗನಕ್ಕೇರಿದೆ, ಒಂದು ಕೆಜಿ ಬೀನ್ಸ್ ದರ ಸದ್ಯ 100 ರೂಪಾಯಿ ಆಸುಪಾಸಿನಲ್ಲಿದೆ. ಎಲೆಕೋಸು ಕೆ.ಜಿ. 35-40 ರುಪಾಯಿ, ಹೂ ಕೋಸು 35-40 ರುಪಾಯಿ, ಸಿಹಿ ಕುಂಬಳ 40 ರುಪಾಯಿ, ಟೊಮಾಟೊ 35-40 ರುಪಾಯಿ, ಹೀರೇಕಾಯಿ 50-60 ರುಪಾಯಿ, ಪಡವಲಕಾಯಿ 40-50 ರುಪಾಯಿ, ಆಲೂಗಡ್ಡೆ 35-40 ರುಪಾಯಿ, ಬೀಟ್‌ರೂಟ್ 50-55 ರೂಪಾಯಿ, ನವಿಲು ಕೋಸು 45-50 ರುಪಾಯಿ, ನುಗ್ಗೆಕಾಯಿ 120-130 ರುಪಾಯಿ, ಕ್ಯಾರೆಟ್ 70-80 ರುಪಾಯಿ, ಹಸಿರು ಮೆಣಸಿನ ಕಾಯಿ 65-70 ರು., ಬೆಂಡೆಕಾಯಿ 40-45 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

ವಿದ್ಯುತ್ ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಹೋಟೆಲ್ ಮಾಲೀಕರು: ಸರ್ಕಾರಕ್ಕೆ ಮನವಿ ಏನು? ವಿದ್ಯುತ್ ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಹೋಟೆಲ್ ಮಾಲೀಕರು: ಸರ್ಕಾರಕ್ಕೆ ಮನವಿ ಏನು?

ಇನ್ನು ಸೊಪ್ಪಿನ ದರ ಕೂಡ ಹೆಚ್ಚಳವಾಗಿದ್ದು, ಕಳೆದ 10-15 ದಿನಗಳಿಗೆ ಹೋಲಿಕೆ ಮಾಡಿದರೆ ದುಪ್ಪಟ್ಟಾಗಿದೆ. ಕೊತ್ತಮರಿ, ದಂಟು, ಅರಿವೆ, ಪಾಲಕ್, ಮೆಂತ್ಯ ಸೊಪ್ಪಿನ ದರದಲ್ಲಿ ಭಾರಿ ಏರಿಕೆಯಾಗಿದೆ. ಹಣ್ಣಿನ ಬೆಲೆಗಳು ಕೂಡ ದುಬಾರಿಯಾಗಿವೆ. ಸಪೋಟಾ 90 ರೂಪಾಯಿ, ಪಪ್ಪಾಯ 60 ರುಪಾಯಿ, ಮೋಸಂಬಿ 60 ರು., ದ್ರಾಕ್ಷಿ 80 ರು., ಸೇಬು 220, ಅನಾನಸ್ 90 ರೂಪಾಯಿ ಪ್ರತಿ ಕೆ.ಜಿ. ಗೆ ಮಾರಾಟವಾಗುತ್ತಿದೆ.

ತರಕಾರಿ ದರ ಹೆಚ್ಚಳಕ್ಕೆ ಇದೇ ಕಾರಣ

ಬೆಂಗಳೂರು ಮಾತ್ರವಲ್ಲದ ರಾಜ್ಯಾದ್ಯಂತ ತರಕಾರಿ, ಹಣ್ಣುಗಳ ದರ ಏರಿಕೆಯಾಗಿದೆ. ಅತಿಯಾದ ತಾಪಮಾನ ಮತ್ತು ಅನಿಶ್ಚಿತ ಮಳೆ ಬೆಲೆ ಏರಿಕೆಗೆ ಕಾರಣವಾಗಿದೆ. ಭಾರಿ ಬಿಸಿಲಿನ ಕಾರಣ ಬೆಳೆಗಳಿಗೆ ಹಲವು ರೋಗಗಳು ಕಾಡಿದ್ದವು, ಇನ್ನೂ ಕೆಲವು ಕಡೆ ನೀರಿನ ಅಭಾವದಿಂದ ತರಕಾರಿ ಬೆಳೆಯಲು ಕೂಡ ರೈತರು ಮುಂದಾಗಿಲ್ಲ, ಇನ್ನು ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು ಪೂರೈಕೆ ಕಡಿಮೆಯಾದ ಕಾರಣ ಬೆಲೆ ಹೆಚ್ಚಳವಾಗಿದೆ. ಈಗ ಮದುವೆ, ಜಾತ್ರೆಗಳ ಸಮಯವಾಗಿದ್ದು ಬೇಡಿಕೆ ಹೆಚ್ಚಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.

Vegetable Prices in Bengaluru

ಚಿಕನ್, ಮಟನ್, ಮೊಟ್ಟೆ ದುಬಾರಿ

ತರಕಾರಿ, ಹಣ್ಣು, ಸೊಪ್ಪು ಮಾತ್ರವಲ್ಲದೆ ಚಿಕನ್, ಮಟನ್, ಮೊಟ್ಟೆ ದರ ಕೂಡ ದುಬಾರಿಯಾಗಿದೆ. ಸಾಮಾನ್ಯವಾಗಿ ಒಂದು ಕೆಜಿ ರೆಡಿ ಚಿಕನ್ ಬೆಲೆ 160-180 ರೂಪಾಯಿ ಇರುತ್ತದೆ ಆದರೆ ಈಗ ಅದು 300 ರೂಪಾಯಿಗೆ ಏರಿಕೆಯಾಗಿದೆ. ಮೊಟ್ಟೆ ದರ ಕೂಡ ಹೆಚ್ಚಾಗಿದ್ದು 5.5 ರೂಪಾಯಿಗಳಿಂದ 7-8 ರುಪಾಯಿಗೆ ಏರಿಕೆಯಾಗಿದೆ. 500-600 ರೂಪಾಯಿ ಇದ್ದ ಮಟನ್ ಬೆಲೆ 700-800 ರೂಪಾಯಿಗೆ ಹೆಚ್ಚಾಗಿದೆ.

ಬೇಸಿಗೆ ಕಾಲದಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕಡಿಮೆಯಾದ ಕಾರಣ, ಬೆಲೆ ಕಡಿಮೆಯಾಗಿತ್ತು ಇದರಿಂದಾಗಿ ಕೋಳಿ ಉದ್ಯಮಿಗಳು ಸಾಕಾಣಿಕೆ ಕಡಿಮೆ ಮಾಡಿದ್ದರು. ಭಾರಿ ಬೇಸಿಗೆ, ನೀರು, ಮೇವಿನ ಕೊರತೆಯಿಂದಾಗಿ ಕುರಿ-ಮೇಕೆ ಸಾಕಾಣಿಕೆ ಕೂಡ ಕಡಿಮೆಯಾಗಿದೆ. ಸದ್ಯ ಮದುವೆ ಸೀಜನ್ ಶುರುವಾಗಿದ್ದು, ಮಳೆಗಾಲ ಶುರುವಾದ ಕಾರಣ ಬೇಡಿಕೆ ಹೆಚ್ಚಾಗಿದ್ದರಿಂದ ಪೂರೈಕೆ ವ್ಯತ್ಯಯವಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

English summary

Bengaluru witnesses a notable surge in chicken and mutton prices, alongside an escalation in the costs of vegetables and fruits, attributed to disruptions in the supply chain.

Story first published: Monday, June 19, 2023, 11:36 [IST]

Source link