Astrology
oi-Mallika P
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯು ಮಹತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಶನಿ ದೇವ ಎಂದು ಕರೆಯಲ್ಪಡುವ ಶನಿಯು ಕರ್ಮ ಮತ್ತು ಪ್ರತಿಫಲಗಳ ನೀಡುವವ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಉಂಟಾದಾಗ, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಜೂನ್ 17, 2023 ರಂದು, ಶನಿಯು ಕುಂಭ ರಾಶಿಯಿಂದ ಹಿಮ್ಮುಖ ಚಲನೆ ಪ್ರಾರಂಭಿಸಿದ್ದಾನೆ. ಈಗ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿರುವ ಶನಿಯು ನವೆಂಬರ್ 4, 2023 ರಂದು ನೇರವಾಗಿ ತಿರುಗುತ್ತದೆ. ಹೀಗಾಗಿ ಶನಿಯ ಹಿಮ್ಮುಖ ಚಲನೆಯ 140 ದಿನಗಳಲ್ಲಿ, ಈ ಐದು ರಾಶಿಯವರ ಭವಿಷ್ಯವು ಪ್ರಕಾಶಮಾನವಾಗಿರುತ್ತದೆ. ಶನಿಯ ಹಿಮ್ಮುಖ ಚಲನೆಯಯಿಂದ ಅದೃಷ್ಟ ಹಾಗೂ ಸಮೃದ್ಧಿ ಈ ಐದು ರಾಶಿಯವರ ಪಾಲಾಗಿರುತ್ತದೆ.
ಮೇಷ ರಾಶಿ
ಶನಿಯ ಹಿಮ್ಮುಖ ಚಲನೆಯಿಂದ ಮೇಷ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅನುಕೂಲಕರವಾಗಿರುತ್ತದೆ. ಅವರ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಮಾಡುವ ಕೆಲಸಗಳು ಪ್ರಗತಿಯತ್ತ ಸಾಗುತ್ತವೆ. ಉನ್ನತ ಶ್ರೇಣಿಯ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾರೆ.
ವೃಷಭ ರಾಶಿ
ಶನಿಯ ಹಿಮ್ಮುಖ ಚಲನೆಯಿಂದ ವೃಷಭ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವೃತ್ತಿಜೀವನದ ಬೆಳವಣಿಗೆ ಹೊಂದುತ್ತಾರೆ. ಹಠಾತ್ ಆರ್ಥಿಕ ಲಾಭಗಳು ಸಂಭವಿಸುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳ ಇರುತ್ತದೆ. ಇದರ ನಡುವೆ ಕೆಲಸದ ಒತ್ತಡದಿಂದ ಕೆಲವು ಸಣ್ಣ ಸವಾಲುಗಳನ್ನು ಎದುರಿಸುವ ಸಂದರ್ಭ ಬರಬಹುದು ಆದರೆ ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆ ಹರಿಯುತ್ತದೆ.
ಮಿಥುನ ರಾಶಿ
ಶನಿಯ ಹಿಮ್ಮುಖ ಚಲನೆಯಿಂದಾಗಿ ಮಿಥುನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಿದೇಶದಲ್ಲಿ ವಾಸಿಸುವ ಅಥವಾ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡುವ ಕನಸು ನನಸಾಗುತ್ತದೆ. ಉದ್ಯೋಗ ಅಥವಾ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಇದು ಅನುಕೂಲಕರ ಸಮಯವಾಗಿರುತ್ತದೆ.
ಕನ್ಯಾ ರಾಶಿ
ಶನಿಯ ಹಿಮ್ಮುಖ ಚಲನೆಯು ಕನ್ಯಾರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ವಿಶೇಷವಾದ ಅವಕಾಶ ಹಾಗೂ ಪ್ರಗತಿಯನ್ನು ನೀಡುತ್ತದೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಪ್ರತಿ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತಾರೆ. ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಒಂದು ಪ್ರಮುಖ ಕಾರ್ಯಕ್ಕಾಗಿ ಸಾಲವನ್ನು ಸಹ ಮಾಡುವ ಸಂದರ್ಭಗಳು ಬರಬಹುದು.
ಧನು ರಾಶಿ
ಶನಿಯ ಹಿಮ್ಮುಖ ಚಲನೆಯು ಧನು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಗಣನೀಯ ಪ್ರಯೋಜನಗಳನ್ನು ತರುತ್ತದೆ. ಧನು ರಾಶಿಯವರ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ವಿದೇಶ ಪ್ರವಾಸಕ್ಕೆ ತೆರಳಲು ಅವಕಾಶಗಳಿರುತ್ತದೆ.
English summary
Saturn Retrograde (Shani Vakri) 2023: 5 Zodiac Signs to Flourish in upcoming 4 – 5 months. Know more.
Story first published: Tuesday, June 20, 2023, 17:22 [IST]