Bollywood
oi-Srinivasa A
ಕಳೆದ
ಶುಕ್ರವಾರ
(
ಜೂನ್
16
)
ಬಿಡುಗಡೆಗೊಂಡ
ಆದಿಪುರುಷ್
ಸದ್ಯ
ಸಾಮಾಜಿಕ
ಜಾಲತಾಣದಲ್ಲಿ
ಸಿಕ್ಕಾಪಟ್ಟೆ
ಸದ್ದು
ಮಾಡುತ್ತಿದೆ.
ಪಾಸಿಟಿವ್
ಅಂಶಗಳಿಗಿಂತ
ಹೆಚ್ಚಾಗಿ
ನೆಗೆಟಿವ್
ಅಂಶಗಳಿಂದಲೇ
ಸುದ್ದಿಗೀಡಾಗಿರುವ
ಆದಿಪುರುಷ್
ಚಿತ್ರ
ರಸಿಕರಿಂದ
ಮಿಶ್ರ
ಪ್ರತಿಕ್ರಿಯೆ
ಪಡೆದುಕೊಳ್ತಿದೆ.
ಇದು
ಪ್ರಭಾಸ್
ನಟನೆಯ
ಮೊದಲ
ಬಾಲಿವುಡ್
ಸಿನಿಮಾವಾಗಿದ್ದು
ರಾಮನ
ಪಾತ್ರದಲ್ಲಿ
ನಟಿಸಿದ್ದರೆ,
ಕೃತಿ
ಸೆನನ್
ಸೀತೆಯ
ರೋಲ್‌ನಲ್ಲಿ
ಮಿಂಚಿದ್ದಾರೆ
ಹಾಗೂ
ರಾವಣನ
ಪಾತ್ರದಲ್ಲಿ
ಸೈಫ್
ಅಲಿ
ಖಾನ್
ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ
ಓಂ
ರಾವತ್
ನಿರ್ದೇಶನವಿದೆ.
ಇನ್ನು
ಈ
ಚಿತ್ರ
ಬಿಡುಗಡೆಗೂ
ಮುನ್ನವೇ
ಟೀಸರ್‌ನಲ್ಲಿ
ಕೆಟ್ಟ
ವಿಎಫ್ಎಕ್ಸ್
ಹೊಂದಿದ್ದ
ಕಾರಣದಿಂದಾಗಿ
ಕಳಪೆ
ಪ್ರತಿಕ್ರಿಯೆನ್ನು
ಪಡೆದುಕೊಂಡು
ಟ್ರೋಲ್
ಆಗಿತ್ತು.
ಅದೇ
ತರಹ
ಈಗಲೂ
ಸಹ
ಚಿತ್ರದಲ್ಲಿ
ಕಳಪೆ
ವಿಎಫ್ಎಕ್ಸ್,
ಪಾತ್ರಗಳ
ವೇಷಭೂಷಣ
ಇಲ್ಲದಿರುವುದು,
ವಿವಾದಾತ್ಮಕ
ಸಂಭಾಷಣೆ
ಇರುವ
ಅಂಶಗಳಿಂದಾಗಿ
ಆದಿಪುರುಷ್
ಸಿನಿ
ರಸಿಕರಿಂದ
ಮಿಶ್ರ
ಪ್ರತಿಕ್ರಿಯೆ
ಪಡೆದುಕೊಂಡಿದೆ.
ಹೀಗೆ
ಮಿಶ್ರ
ಪ್ರತಿಕ್ರಿಯೆ
ಎಂಬ
ಹಿನ್ನಡೆ
ಒಂದೆಡೆಯಾದರೆ,
ಮತ್ತೊಂದೆಡೆ
ಚಿತ್ರದ
ವಿವಾದಗಳು
ಹಲವರ
ಮೇಲೆ
ಪರಿಣಾಮ
ಬೀರಿದ್ದು
ಬ್ಯಾನ್
ವಿರೋಧ
ಪಡೆದುಕೊಳ್ಳುವಷ್ಟು
ಹಿನ್ನಡೆ
ಅನುಭವಿಸಿದೆ.
ಇಷ್ಟೆಲ್ಲಾ
ಚಟುವಟಿಕೆಗಳು
ಸಾಮಾಜಿಕ
ಜಾಲತಾಣದಲ್ಲಿ
ಜರುಗುತ್ತಿದ್ದರೆ
ಅತ್ತ
ಆಫ್‌ಲೈನ್‌ನಲ್ಲಿ
ಆದಿಪುರುಷ್
ಚಿತ್ರ
ಸತತ
ಮೂರು
ದಿನಗಳ
ಕಾಲ
ನೂರು
ಕೋಟಿ
ಕ್ಲಬ್
ಸೇರಿ
ಸಮಾಧಾನಕರ
ಗಳಿಕೆ
ಮಾಡಿದೆ.
ಚಿತ್ರ
ನಿನ್ನೆಗೆ
(
ಜೂನ್
19
)
ನಾಲ್ಕು
ದಿನಗಳ
ಪ್ರದರ್ಶನವನ್ನು
ಪೂರೈಸಿದ್ದು
ವಿಶ್ವ
ಬಾಕ್ಸ್
ಆಫೀಸ್‌ನಲ್ಲಿ
375
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.
ಮೊದಲ
ದಿನ
140
ಕೋಟಿ
ಗಳಿಸಿದ್ದ
ಆದಿಪುರುಷ್
ಎರಡನೇ
ದಿನ
100,
ಮೂರನೇ
ದಿನವೂ
ಸಹ
100
ಕೋಟಿ
ಗಲ್ಲಾಪೆಟ್ಟಿಗೆ
ಸೇರಿತು
ಹಾಗೂ
ನಾಲ್ಕನೇ
ದಿನ
35
ಕೋಟಿ
ರೂಪಾಯಿ
ಗ್ರಾಸ್
ಕಲೆಕ್ಷನ್
ಮಾಡಿದೆ.
ಹೀಗೆ
ನಾಲ್ಕನೇ
ದಿನಕ್ಕೆ
ಆದಿಪುರುಷ್
ಕಲೆಕ್ಷನ್
ತೀವ್ರ
ಕುಸಿತ
ಕಂಡಿದ್ದು,
ನೆಟ್ಟಿಗರು
ಈ
ಚಿತ್ರ
ಲಾಭದ
ಗೆರೆಯನ್ನು
ದಾಟುವುದೂ
ಕೂಡ
ಕಷ್ಟ
ಎಂದು
ಮತ್ತೊಮ್ಮೆ
ಟ್ರೋಲ್
ಮಾಡಿದರು.
ಹಾಗಾದರೆ
ಆದಿಪುರುಷ್
ಲಾಭ
ಗಳಿಸಲು
ಎಷ್ಟು
ಬೇಕು
ಎಂಬ
ಮಾಹಿತಿ
ಈ
ಕೆಳಕಂಡಂತಿದೆ..
ಆದಿಪುರುಷ್
ಚಿತ್ರ
500
ಕೋಟಿ
ರೂಪಾಯಿ
ಬಜೆಟ್‌ನೊಂದಿಗೆ
ತಯಾರಾಗಿದ್ದು,
ನಾಲ್ಕು
ದಿನಗಳಲ್ಲಿ
375
ಕೋಟಿ
ಗ್ರಾಸ್
ಕಲೆಕ್ಷನ್
ಮಾಡಿದ್ದು,
ಇದರಲ್ಲಿ
170
ಕೋಟಿ
ಶೇರ್
ಕಲೆಕ್ಷನ್
ಇದೆ.
ಚಿತ್ರ
ಬ್ರೇಕ್
ಈವನ್
ಸಾಧಿಸಿ
ಲಾಭ
ಗಳಿಸಲಾರಂಭಿಸಲು
242
ಗಳಿಸಬೇಕಿದ್ದು,
ಇನ್ನೂ
72
ಕೋಟಿ
ಶೇರ್
ಕಲೆಕ್ಷನ್
ಮಾಡಬೇಕಿದೆ.
ನಾಲ್ಕನೇ
ದಿನ
ಆದಿಪುರುಷ್
ಕೇವಲ
18
ಕೋಟಿ
ಶೇರ್
ಕಲೆಕ್ಷನ್
ಮಾಡಿದೆ.
ನಾಲ್ಕನೇ
ದಿನದ
ಕಲೆಕ್ಷನ್
ಮೊದಲ
ಮೂರು
ದಿನಗಳ
ಕಲೆಕ್ಷನ್‌ಗಿಂತ
ತೀರ
ಕೆಳಮಟ್ಟದಲ್ಲಿದ್ದು
ಆದಿಪುರುಷ್
ಬ್ರೇಕ್
ಈವನ್
ತಲುಪುವುದರಲ್ಲಿ
ಸಣ್ಣ
ಪ್ರಮಾಣದ
ಅನುಮಾನ
ಹುಟ್ಟಿಸಿದೆ.
English summary
How much share amount Adipurush needs to collect for reaching breakeven point? Take a look
Tuesday, June 20, 2023, 21:41