ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್; ಒಂದು ತಂಡಕ್ಕೆ ಇದೇ ನಾಕೌಟ್‌ ಮ್ಯಾಚ್; ನಾಳಿನ ಐಪಿಎಲ್ ಪಂದ್ಯದ 10 ಅಂಶಗಳು

ಐಪಿಎಲ್ 2025ರ ಪಂದ್ಯಾವಳಿಯು ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಈಗಾಗಲೇ 3 ತಂಡಗಳು ಪ್ಲೇಆಫ್‌ ಸ್ಥಾನ ಭದ್ರಪಡಿಸಿದೆ. ಇನ್ನೊಂದು ತಂಡವಷ್ಟೇ ಅಂತಿಮವಾಗಬೇಕಿದೆ. ಹೀಗಾಗಿ ಮೇ 21ರ ಬುಧವಾರ ಐಪಿಎಲ್‌ 18ನೇ ಆವೃತ್ತಿಯಲ್ಲಿ ವಿಶೇಷ ದಿನವಾಗಲಿದೆ. ಏಕೆಂದರೆ, ಬಹುತೇಕ ಈ ಪಂದ್ಯವು ಪ್ಲೇಆಫ್‌ಗೆ ಹೋಗುವ ನಾಲ್ಕನೇ ತಂಡವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದ್ದು, ಎರಡೂ ತಂಡಗಳಿಗೆ ನಿರ್ಣಾಯಕ ಎನಿಸಿದೆ. ಪಂದ್ಯಕ್ಕೆ ಸಂಬಂಧಿಸಿದಂತೆ 10 ಪ್ರಮುಖ ಅಂಶಗಳನ್ನು ನೋಡೋಣ.

Source link