ಹಿಂದೆಯೂ ಧೋನಿ ಅಭಿಮಾನಿ, ಈಗಲೂ ಅಭಿಮಾನಿ, ಮುಂದೆಯೂ ಅಭಿಮಾನಿ; ಟೀಕಾಕಾರರಿಗೆ ಅಂಬಾಟಿ ರಾಯುಡು ತಿರುಗೇಟು

ಐಪಿಎಲ್​ನಲ್ಲಿ (IPL 2025) ಧೋನಿ ಮತ್ತು ಸಿಎಸ್​ಕೆ ತಂಡಕ್ಕೆ ಅಪಾರ ಬೆಂಬಲ ನೀಡುತ್ತಿರುವ ರಾಯುಡುಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಕೆಟ್ಟ ಮೆಸೇಜ್​ಗಳು ಬರುತ್ತಿವೆ. ದ್ವೇಷದ ಮೆಸೇಜ್​ಗಳು ಬರುತ್ತಿವೆ. ಈ ಬಗ್ಗೆ ತುಟಿ ಬಿಚ್ಚಿರುವ ಅಂಬಾಟಿ, ಟೀಕಿಸಿದವರಿಗೆ ತಿರುಗೇಟು ಕೊಟ್ಟಿದ್ದು, ಪಿಆರ್​ಗಳಿಗೆ ಹಣಕೊಟ್ಟು ತಂದಿಕ್ಕುವ ಕೆಲಸ ಮಾಡುವ ಬದಲಿಗೆ ಆ ದುಡ್ಡನ್ನು ದಾನ ಮಾಡಿ ಎಂದಿದ್ದಾರೆ. ನಾನು ಹಿಂದೆಯೂ ಧೋನಿ ಅಭಿಮಾನಿಯಾಗಿದ್ದೆ, ಈಗಲೂ ಆಗಿದ್ದೇನೆ, ಮುಂದೆ ಕೂಡ ಧೋನಿ ಅಭಿಮಾನಿ ಎಂದು ಹೇಳಿಕೆ ನೀಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

Source link