ಐಪಿಎಲ್ ಇತಿಹಾಸದಲ್ಲಿ ರಿಟೈರ್ಡ್ ಔಟ್‌ ಆದ 4ನೇ ಆಟಗಾರ ಎನಿಸಿಕೊಂಡ ತಿಲಕ್ ವರ್ಮಾ; ಏನಿದರ ನಿಯಮ?

ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ಮುಂಬೈ ಮಾಡಿದ ತಂತ್ರ ಹೊರತಾಗಿಯೂ 12 ರನ್‌ಗಳ ಸೋಲು ಕಾಣಬೇಕಾಯ್ತು. ತಿಲಕ್ ವರ್ಮಾ ಅವರನ್ನು ಪಂದ್ಯದ ಕೊನೆಯ ಹಂತದಲ್ಲಿ ರಿಟೈರ್ಡ್ ಔಟ್ ಮಾಡಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಟಿ20 ಶತಕಗಳನ್ನು ಸಿಡಿಸಿರುವ ಎಡಗೈ ಆಟಗಾರ, ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿದು 23 ಎಸೆತಗಳಲ್ಲಿ 25 ರನ್ ಗಳಿಸಿದರು. ಆದರೆ, ತಂಡದ ಗೆಲುವಿಗೆ 204 ರನ್‌ಗಳ ಅಗತ್ಯವಿದ್ದುದರಿಂದ, 19ನೇ ಓವರ್‌ನಲ್ಲಿ ಅವರನ್ನು ಡಗೌಟ್‌ಗೆ ಕರೆಸಲಾಯ್ತು.

Source link