India
oi-Mamatha M
ಮುಂಬೈ, ಜುಲೈ. 03: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ಅವರನ್ನು ಉಚ್ಚಾಟನೆ ಮಾಡಿದ ನಂತರ, ಅಜಿತ್ ಪವಾರ್ ಬಣವು ಸುನೀಲ್ ತಟ್ಕರೆ ಅವರನ್ನು ಮಹಾರಾಷ್ಟ್ರ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದೆ.
ಸೋಮವಾರ ಸಂಜೆ, ಶರದ್ ಪವಾರ್ ಅವರು ತಮ್ಮ ಟ್ವೀಟ್ನಲ್ಲಿ, “ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಎನ್ಸಿಪಿ ಪಕ್ಷದ ಸದಸ್ಯರ ನೋಂದಣಿಯಿಂದ ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಅವರ ಹೆಸರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು ಈ ಮೂಲಕ ಉಚ್ಛಾಟನೆ ಮಾಡಲು ಆದೇಶಿಸುತ್ತೇನೆ” ಎಂದಿದ್ದಾರೆ.
ಈ ಟ್ವೀಟ್ನ ಕೆಲವೇ ಕ್ಷಣಗಳಲ್ಲಿ, ಎನ್ಸಿಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಪ್ರಫುಲ್ ಪಟೇಲ್ ಅವರು ತಮ್ಮ ಬಣ ಸುನೀಲ್ ತಟ್ಕರೆ ಅವರನ್ನು ಮಹಾರಾಷ್ಟ್ರದ ಹೊಸ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಘೋಷಿಸಿದ್ದಾರೆ. ಅಜಿತ್ ಪವಾರ್ ಅವರು ವಿಧಾನಸಭೆಯಲ್ಲಿ ಎನ್ಸಿಪಿ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದಲ್ಲಿ ಸಂಘಟನಾ ಬದಲಾವಣೆ ಮಾಡುವ ಅಧಿಕಾರ ಸುನೀಲ್ ತಟ್ಕರೆ ಅವರಿಗೆ ಇರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಫುಲ್ ಪಟೇಲ್ ಹೇಳಿದ್ದಾರೆ. ಭಾನುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್ಸಿಪಿ ನಾಯಕರಲ್ಲಿ ಸುನೀಲ್ ತಟ್ಕರೆ ಅವರ ಪುತ್ರಿ ಅದಿತಿ ತಟ್ಕರೆ ಕೂಡ ಸೇರಿದ್ದಾರೆ. ಸುನೀಲ್ ತಟ್ಕರೆ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶೀಘ್ರದಲ್ಲೇ ಸಿಎಂ ಶಿಂಧೆ ಜಾಗಕ್ಕೆ ಅಜಿತ್ ಪವಾರ್ ಎಂದು ಭವಿಷ್ಯ ನುಡಿದಿದ್ದೇಕೆ ಶಿವಸೇನಾ ನಾಯಕ ಸಂಜಯ್ ರಾವತ್?
“ಮಹಾರಾಷ್ಟ್ರದಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ. ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಎಲ್ಲಾ ಶಾಸಕರು ಮತ್ತು ಜಿಲ್ಲಾ ಪರಿಷತ್ ಮುಖಂಡರ ಸಭೆಯನ್ನೂ ಕರೆದಿದ್ದೇನೆ” ಎಂದು ಸುನೀಲ್ ತಟ್ಕರೆ ಹೇಳಿದ್ದಾರೆ.
I, as the National President, Nationalist Congress Party hereby order removal of the names of Shri Sunil Tatkare and Shri Praful Patel from the Register of Members of NCP Party for anti-party activities.@praful_patel @SunilTatkare
— Sharad Pawar (@PawarSpeaks) July 3, 2023
ಪಕ್ಷ ಮತ್ತು ಅದರ ಚಿಹ್ನೆ ಬಂಡಾಯ ಬಣಕ್ಕೆ ಸೇರಿದ್ದು, ಮಹಾರಾಷ್ಟ್ರದ ಒಳಿತಿಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಎನ್ಸಿಪಿಯ ಬಹುಪಾಲು ಶಾಸಕರು ತಮ್ಮೊಂದಿಗೆ ಇದ್ದಾರೆ, ಅದಕ್ಕಾಗಿಯೇ ನಾನು ಉಪ ಮುಖ್ಯಮಂತ್ರಿಯಾದೆ ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಶರದ್ ಪವಾರ್ ಎನ್ಸಿಪಿಯ ರಾಷ್ಟ್ರೀಯ ಅಧ್ಯಕ್ಷರೇ ಎಂದೂ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನಿಲ್ ಪಾಟೀಲ್ ಎನ್ಸಿಪಿಯ ವಿಪ್ ಆಗಿ ಮುಂದುವರಿಯಲಿದ್ದಾರೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ. ಪ್ರಫುಲ್ ಪಟೇಲ್ ಅವರನ್ನು ಶರದ್ ಪವಾರ್ ಅವರು ಎನ್ಸಿಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಇತ್ತೀಚೆಗೆ ನೇಮಿಸಿದ್ದರು. ಅವರು ಶೀಘ್ರದಲ್ಲೇ ದೆಹಲಿಯಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ವದಂತಿ ಇದೆ.
ಸೋಮವಾರ ಮುಂಜಾನೆ, ಎನ್ಸಿಪಿಯ ಸುಪ್ರಿಯಾ ಸುಳೆ ಅವರು ಭಾನುವಾರ ಸುನೀಲ್ ತಟ್ಕರೆ ಮತ್ತು ಪ್ರಫುಲ್ ಪಟೇಲ್ ಅವರು ಪಕ್ಷದ ಸಂವಿಧಾನ ಮತ್ತು ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ. ಇದು ಪಕ್ಷದ ಸದಸ್ಯತ್ವದಿಂದ ತೊರೆಯಲು ಮತ್ತು ಅನರ್ಹತೆಗೆ ಸಮಾನವಾಗಿದೆ ಎಂದು ಹೇಳಿದ್ದರು. “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ” ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟ್ಕರೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಅನರ್ಹತೆ ಅರ್ಜಿಯನ್ನು ಸಲ್ಲಿಸುವಂತೆ ಅವರು ತಮ್ಮ ತಂದೆ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಮನವಿ ಮಾಡಿದ್ದರು.
English summary
Maharashtra political crisis: Nationalist Congress Party (NCP) President Sharad Pawar removed Praful Patel and Sunil Tatkare for anti-party activities. know more.
Story first published: Monday, July 3, 2023, 19:23 [IST]