Andhra Pradesh: ಮುಂದಿನ ಮೂರು ದಿನದ ಹವಾಮಾನ ವರದಿ, ಭಾರಿ ಮಳೆ ಸಂಭವ | Andhra Pradesh Rain: IMD Predicts Heavy Rain Next 3 Days for Several Districts

India

oi-Shankrappa Parangi

|

Google Oneindia Kannada News

ವಿಜಯವಾಡ, ಜುಲೈ 03: ಹವಾಮಾನದಲ್ಲಿ ಉಂಟಾದ ತೀವ್ರತರ ಬದಲಾವಣೆಗಳಿಂದಾಗಿ ಆಂಧ್ರ ಪ್ರದೇಶದಲ್ಲೂ ಮುಂಗಾರು ಮಳೆ ತೀವ್ರಗೊಂಡಿದೆ. ಕೆಲವು ದಿನಗಳಿಂದ ಮಳೆ ಕೊರತೆ ಕಂಡಿದ್ದ ಆಂಧ್ರ ಪ್ರದೇಶ ರಾಜ್ಯದಲ್ಲಿ ಮುಂದಿನ ಮೂರು ದಿನ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಭಾನುವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ನೈಋತ್ಯ ಮುಂಗಾರು ಮಳೆ ಕರಾವಳಿ ಆಂಧ್ರ ಪ್ರದೇಶದಲ್ಲಿ ದುರ್ಬಲವಾಗಿತ್ತು. ರಾಯಲಸೀಮೆಯಲ್ಲಿ ಸಾಮಾನ್ಯವಾದ ಮಳೆ ದಾಖಲಾಗಿತ್ತು.

Andhra Pradesh Rain

ವಿಜಯನಗರ ಜಿಲ್ಲೆಯ ತೆರ್ಲಂನಲ್ಲಿ ಅತೀ ಹೆಚ್ಚು ಅಂದರೆ 5 ಸೆಂಟಿ ಮೀಟರ್ ಮಳೆ ದಾಖಲಾಗಿದೆ. ಇತ್ತ ಅದೇ ಜಿಲ್ಲೆಯ ವೇಪಾಡು ಮತ್ತು ಕರ್ನೂಲಿನ ಯೆಮ್ಮಿಗನೂರಿನಲ್ಲಿ 3 ಸೆಂಟಿ ಮೀಟರ್ ಮಳೆ ಬಿದ್ದಿದೆ. ಇದರ ಹೊರತು ಬೇರೆಲ್ಲೂ ಅಷ್ಟಾಗಿ ಹೇಳಿಕೊಳ್ಳುವಂತಹ ಮಳೆ ಬಂದಿರಲಿಲ್ಲ.

ಮಳೆ ಕೊರತೆ ಕಂಡ ರಾಜ್ಯಗಳ ಪೈಕಿ ಆಂಧ್ರಪ್ರದೇಶವು ಒಂದು. ಈ ರಾಜ್ಯದ್ಲಲಿ ಸೋಮವಾರದಿಂದ ಮುಂದಿನ ಮೂರು ದಿನಗಳವರೆಗೆ ರಾಜ್ಯದಾದ್ಯಂತ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಆಂಧ್ರದ ಕರಾವಳಿ ಹಾಗೂ ರಾಯಲಸೀಮಾ ಜಿಲ್ಲೆಗಳ ವಿವಿಧ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ವರುಣ ಅಬ್ಬರಿಸಲಿದ್ದಾರೆ.

India Monsoon Report: ನಿರೀಕ್ಷೆಗೂ ಮೊದಲೇ ಶೇ.100ರಷ್ಟು ಆವರಿಸಿದ ಮುಂಗಾರು, ಈ ರಾಜ್ಯಗಳಿಗೆ ಭಾರೀ ಮಳೆ: ಐಎಂಡಿIndia Monsoon Report: ನಿರೀಕ್ಷೆಗೂ ಮೊದಲೇ ಶೇ.100ರಷ್ಟು ಆವರಿಸಿದ ಮುಂಗಾರು, ಈ ರಾಜ್ಯಗಳಿಗೆ ಭಾರೀ ಮಳೆ: ಐಎಂಡಿ

ಇದರೊಂದಿಗೆ ಗುರುವಾರದವರೆ ರಾಜ್ಯದಾದ್ಯಂತ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯು ವೇಗ ಹೆಚ್ಚಾಗಲಿದೆ. ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಬಲವಾಗಿ ಬೀಸುವ ನಿರೀಕ್ಷೆ ಇದೆ. ಈ ಸಂಬಂಧ ಮೀನುಗಾರರಿಗೆ ಸಮುದ್ರಕ್ಕೆ ಮೀನುಗಾರಿಕೆಗಾಗಿ ಇಯದಂತೆ ಐಎಂಡಿ ಎಚ್ಚರಿಕೆ ನೀಡಿದೆ.

Andhra Pradesh Rain

ವಿಪತ್ತು ನಿರ್ವಹಣಾ ಪ್ರಾಧಿಕಾರದ ಎಚ್ಚರಿಕೆ ಏನು?

ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (APSDMA) ವ್ಯವಸ್ಥಾಪಕ ನಿರ್ದೇಶಕ ಡಾ. ಅಂಬೇಡ್ಕರ್ ಅವರು, ಸೋಮವಾರ ಪರವತಿಪುರಂ-ಮಾನ್ಯಂ, ಗುಂಟೂರು, ಪಲ್ನಾಡು, ಬಾಪಟ್ಲಾ, ಅಲ್ಲೂರಿ ಸಿತ್ರಾಮರಾಜು, ಕೃಷ್ಣ, ನೆಲ್ಲೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಾರಿ ಮಳೆ ಬರಲಿರುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಇದಲ್ಲದೇ ಪಶ್ಚಿಮ ಗೋದಾವರಿ, ಏಲೂರು, ಕೃಷ್ಣಾ, ಎನ್‌ಟಿಆರ್, ಪರವತೀಪುರಂ-ಮಾನ್ಯಂ, ಗುಂಟೂರು, ಪಲ್ನಾಡು, ಬಾಪಟ್ಲಾ, ಪ್ರಕಾಶಂ, ನೆಲ್ಲೂರು, ವೈಎಸ್‌ಆರ್,ಅನಕಪಲ್ಲಿ, ಅನಂತಪುರ, ಕರ್ನೂಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರಿ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಲಕ್ಷಣಗಳು ಇವೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯುವ ನಿರೀಕ್ಷೆ ಇದೆ. ಹಠಾತ್ ಸಿಡಿಲು ಬಡಿತದ ಬಗ್ಗೆ ಇಲಾಖೆ ಎಚ್ಚರಿಕೆ ನೀಡಿದ್ದಲ್ಲದೇ, ಸಾರ್ವಜನಿಕರು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ತಜ್ಞರು ಸೂಚಿಸಿದ್ದಾರೆ.

English summary

Andhra Pradesh Rain: IMD predicts heavy rain next 3 days for several districts of Andhra Pradesh

Story first published: Monday, July 3, 2023, 19:18 [IST]

Source link