Astrology
oi-Sunitha B
ಪ್ರತಿಯೊಂದು ನವಗ್ರಹಗಳು ಸಂಚಾರದ ವೇಳೆ ರಾಶಿಯನ್ನು ಬದಲಾಯಿಸುತ್ತವೆ. ಪ್ರಸ್ತುತ ಮಿಥುನ ರಾಶಿಯಲ್ಲಿ ಬುಧ ಗ್ರಹ ಸಂಚರಿಸುತ್ತಿದೆ. ಜುಲೈ 8ರಂದು ಬುಧ ಗ್ರಹ ಚಂದ್ರನಿಂದ ಆಳಲ್ಪಟ್ಟ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತದೆ. ಬುಧನನ್ನು ನವಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ.
ಈ ಬುಧನು ಮಾತು, ವ್ಯವಹಾರ, ಅಧ್ಯಯನ, ಬುದ್ಧಿವಂತಿಕೆ ಮತ್ತು ಆರ್ಥಿಕತೆಯ ಅಂಶವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬುಧವು ರಾಶಿಯನ್ನು ಸಂಕ್ರಮಿಸಿದಾಗ ಜೀವನದ ಈ ಎಲ್ಲಾ ಅಂಶಗಳ ಮೇಲೆ ಅದರ ಪ್ರಭಾವ ಗೋಚರಿಸುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ 3 ರಾಶಿಗಳ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ.
ವಿಶೇಷವಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಈ 3 ರಾಶಿಯವರು ಉತ್ತಮ ಪ್ರಗತಿ ಮತ್ತು ಯಶಸ್ಸನ್ನು ಪಡೆಯಲಿದ್ದಾರೆ. ಹಾಗಾದರೆ ಕರ್ಕಾಟಕ ರಾಶಿಯಲ್ಲಿ ಬುಧ ಪ್ರವೇಶದಿಂದಾಗುವ ಲಾಭಗಳೇನು ಎಂದು ತಿಳಿಯೋಣ.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧನು ಈ ಸಂಚಾರದ ಸಮಯದಲ್ಲಿ 2ನೇ ಮನೆಗೆ ಚಲಿಸುತ್ತಾನೆ. ಮಿಥುನ ರಾಶಿಯವರಿಗೆ ಇದು ಒಳ್ಳೆಯ ಸಂಚಾರವಾಗಿದೆ. ಇದರಿಂದಾಗಿ ವಿಶೇಷವಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಮಿಥುನ ರಾಶಿಯವರು ಪಡೆಯಲಿದ್ದಾರೆ. ಅನಿರೀಕ್ಷಿತ ಸ್ಥಳಗಳಿಂದ ಹಣವನ್ನು ಪಡೆಯುವ ಸಾಧ್ಯತೆಯಿದೆ. ಜೊತೆಗೆ ಉತ್ತಮ ವಿತ್ತೀಯ ಲಾಭವನ್ನು ಪಡೆಯಬಹುದು. ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಮಾತಿನ ಮೂಲಕ ಅನೇಕ ವಿಷಯಗಳಲ್ಲಿ ಸಾಧನೆ ಮಾಡುತ್ತಾರೆ. ಈ ಅವಧಿಯಲ್ಲಿ ಆಸ್ತಿ ಅಥವಾ ವಾಹನ ಖರೀದಿಸಲು ಅವಕಾಶವಿರುತ್ತದೆ.
ಕನ್ಯಾ ರಾಶಿ
ಕನ್ಯಾರಾಶಿಯ 11ನೇ ಮನೆಯಲ್ಲಿ ಬುಧ ಸಂಕ್ರಮಿಸುತ್ತದೆ. ಈ ಬದಲಾವಣೆಯು ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ವಂಶಪಾರಂಪರ್ಯವಾಗಿ ವ್ಯಾಪಾರ ಮಾಡುವವರು ಉತ್ತಮ ಲಾಭ ಮತ್ತು ಯಶಸ್ಸನ್ನು ಪಡೆಯುತ್ತಾರೆ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ ಅದರಿಂದ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮಿಗಳು ಹೊಸ ಒಪ್ಪಂದಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಂಕ್ರಮಣ ಅವರಿಗೆ ಲಾಭವನ್ನು ನೀಡುತ್ತದೆ.
ಮಕರ ರಾಶಿ
ಬುಧ ಗ್ರಹ ಮಕರ ರಾಶಿಯ 7ನೇ ಮನೆಗೆ ಸಾಗುತ್ತದೆ. ಹೀಗಾಗಿ ಯಾವುದೇ ನ್ಯಾಯಾಲಯದ ಪ್ರಕರಣಗಳು ಬಾಕಿ ಉಳಿದಿದ್ದರೆ, ತೀರ್ಪುಗಳು ನಿಮಗೆ ಅನುಕೂಲಕರವಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಜೀವನ ಸಂಗಾತಿಯ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ನೀವು ಜಂಟಿ ಉದ್ಯಮವನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ, ಈ ಸಮಯದಲ್ಲಿ ನೀವು ಅದನ್ನು ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)
English summary
Due to transit of Mercury in Cancer sign, these 3 signs will get unexpected success. Learn about this Rashi in Kannada.
Story first published: Monday, July 3, 2023, 14:20 [IST]