ಮನುಷ್ಯನಾ ಇಲ್ಲ ಪಕ್ಷಿನಾ? ಚೆಂಗನೆ ಜಿಗಿದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಗ್ಲೆನ್ ಫಿಲಿಪ್ಸ್, ಕ್ರಿಕೆಟ್​ ಜಗತ್ತು ಬೆರಗು!

ನ್ಯೂಜಿಲೆಂಡ್​ ತಂಡದ ಗ್ಲೆನ್ ಫಿಲಿಪ್ಸ್ (Glenn Phillips).. ಕ್ರಿಕೆಟ್ ಲೋಕದ ಫ್ಲೈಯಿಂಗ್ ಬರ್ಡ್. ಇದರಲ್ಲಿ ಯಾವುದೇ ಅನುಮಾನ ಇಲ್ಲ! ಕ್ರಿಕೆಟ್​ ಜಗತ್ತಿನಲ್ಲಿ ಅದೆಷ್ಟೋ ಅದ್ಭುತ, ಅಮೋಘ, ಸ್ಟನ್ನಿಂಗ್​ ಕ್ಯಾಚ್​ಗಳಿರಬಹುದು. ಆದರೆ ಫಿಲಿಫ್ಸ್ ಹಿಡಿದ ಕ್ಯಾಚ್​​ಗಳು ಯಾವಾಗಲೂ ಅಗ್ರಸ್ಥಾನದಲ್ಲಿ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭೂತಪೂರ್ವ ಕ್ಯಾಚ್​​ಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫಿಲಿಪ್ಸ್ ಪಡೆದ ಕ್ಯಾಚ್​ ಎಂತಹವರನ್ನೂ ಬೆರಗುಗೊಳಿಸುತ್ತದೆ.

Source link