Travel
oi-Gururaj S
ಮಂಗಳೂರು, ಜುಲೈ 03: ಭಾರತೀಯ ರೈಲ್ವೆ ಗಣೇಶ ಚತುರ್ಥಿ 2023ರಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಓಡಿಸಲಿದೆ. ಇದಕ್ಕಾಗಿ ವಲಯವಾರು ರೈಲುಗಳ ಪಟ್ಟಿಯನ್ನು ಈಗಲೇ ತಯಾರು ಮಾಡಿ ಪ್ರಕಟಿಸಲಾಗುತ್ತಿದೆ.
ಸೆಂಟ್ರಲ್ ರೈಲ್ವೆಯ ಸಹಯೋಗದಲ್ಲಿ ಮುಂಬೈ ಮತ್ತು ಕರ್ನಾಟಕದ ಕರಾವಳಿ ಮಂಗಳೂರು ನಡುವೆ ಗಣೇಶ ಚತುರ್ಥಿ 2023ಕ್ಕಾಗಿಯೇ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ರೈಲು ಓಡುವ ಸಮಯ, ದಿನಾಂಕ, ಬೋಗಿಗಳ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಮಂಗಳೂರು ಜಂಕ್ಷನ್ಗೆ ಈ ವಿಶೇಷ ಹೆಚ್ಚುವರಿ ರೈಲು ಓಡಲಿದೆ. ಗಣೇಶ ಚತುರ್ಥಿ 2023ರಲ್ಲಿ ಸಂಚಾರ ನಡೆಸುವ ಯೋಜನೆ ರೂಪಿಸುತ್ತಿರುವ ಜನರು ಈಗಲೇ ರೈಲುಗಳ ವೇಳಾಪಟ್ಟಿ ಗಮನಿಸಿ ರೈಲು ಬುಕ್ ಮಾಡಬಹುದಾಗಿದೆ.
ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 18ರ ಸೋಮವಾರವಿದೆ. ಶನಿವಾರ, ಭಾನುವಾರ ಎರಡು ರಜೆ ಒಟ್ಟಿಗೆ ಸಿಗುವುದಿಂದ ಬೇರೆ-ಬೇರೆ ಊರುಗಳಿಗೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಲಿದೆ. ವಿಶೇಷ ರೈಲಿನ ವೇಳಾಪಟ್ಟಿ ಹೀಗಿದೆ.
ವೇಳಾಪಟ್ಟಿ; ಲೋಕಮಾನ್ಯ ತಿಲಕ್ ಟರ್ಮಿನಲ್, ಮುಂಬೈ ಮತ್ತು ಮಂಗಳೂರು ಜಂಕ್ಷನ್ ನಡುವೆ ರೈಲು ನಂಬರ್ 01165 ಮತ್ತು 01166 ಸಂಚಾರ ನಡೆಸಲಿದೆ.
ಈ ರೈಲುಗಳು 20 ಬೋಗಿಗಳನ್ನು ಒಳಗೊಂಡಿವೆ. 2 ಟೈರ್ ಎಸಿ 1, 3 ಟೈರ್ ಎಸಿ 2, 10 ಸ್ಲೀಪರ್ ಕೋಚ್ಗಳು, 5 ಸಾಮಾನ್ಯ ಬೋಗಿಯನ್ನು ರೈಲು ಹೊಂದಿರಲಿದೆ.
ರೈಲು ನಂಬರ್ 01165 ಲೋಕಮಾನ್ಯ ತಿಲಕ್ ಟರ್ಮಿನಲ್- ಮಂಗಳೂರು ಜಂಕ್ಷನ್ ರೈಲು ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಸೆಪ್ಟೆಂಬರ್ 15, 16, 17, 18, 22, 23, 29 ಮತ್ತು 30ರಂದು ರಾತ್ರಿ 10.15ಕ್ಕೆ ಹೊರಡಲಿದೆ. ಮಂಗಳೂರು ಜಂಕ್ಷನ್ಗೆ ಮರು ದಿನ 5.20ಕ್ಕೆ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
ರೈಲು ನಂಬರ್ 01166 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಟರ್ಮಿನಲ್ ರೈಲು ಮಂಗಳೂರು ಜಂಕ್ಷನ್ನಿಂದ ಸೆಪ್ಟೆಂಬರ್ 16, 17, 18, 19, 23, 24, 30 ಮತ್ತು 1/10/2023ರಂದು 6.40ಕ್ಕೆ ಹೊರಡಲಿದೆ. ಮರುದಿನ 1.35ಕ್ಕೆ ಮುಂಬೈ ತಲುಪಲಿದೆ.
ಈ ವಿಶೇಷ ಹೆಚ್ಚುವರಿ ರೈಲು ಥಾಣೆ, ಪಾನ್ವೆಲ್, ರೋಹ, ಖೇಡ್, ಸಂಗಮೇಶ್ವರ ರೋಡ್, ರತ್ನಗಿರಿ, ಅಡಾವಳಿ, ರಾಜ್ಪುರ್ ರೋಡ್, ವೈಭವವಾಡಿ ರೋಡ್, ಕನಕವಾಲಿ, ಸಿಂಧುದುರ್ಗ, ಕುಡಾಲ್, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕ ರಸ್ತೆ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ, ಸುರತ್ಕಲ್ ಮೂಲಕ ಸಂಚಾರ ನಡೆಸಲಿದೆ.
English summary
Indian railways will run special train between Mumbai and Mangaluru for Ganesh Chaturthi 2023. Here are the schedule.
Story first published: Monday, July 3, 2023, 12:21 [IST]