12 ಸಾವಿರ ಪೊಲೀಸರು, 9 ಚಾರ್ಟರ್​ ಫ್ಲೈಟ್ ನಿಯೋಜನೆ; ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಬಿಗಿ ಭದ್ರತೆ

12 ಸಾವಿರ ಪೊಲೀಸರು, 9 ಚಾರ್ಟರ್​ ಫ್ಲೈಟ್ ನಿಯೋಜನೆ

ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಮೈದಾನಗಳಲ್ಲಿ ಜರುಗುವ ಪಂದ್ಯಗಳಿಗೆ ಪಂಜಾಬ್ ಪೊಲೀಸರು 12,000 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ 18 ಹಿರಿಯ ಅಧಿಕಾರಿಗಳು, 54 ಡಿಎಸ್​ಪಿಗಳು, 135 ಇನ್​ಪೆಕ್ಟರ್​​ಗಳು, 1,200 ಉನ್ನತ ಅಧೀನ ಅಧಿಕಾರಿಗಳು, 10,556 ಕಾನ್​ಸ್ಟೇಬಲ್​​ಗಳು ಮತ್ತು 200 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ಜರುಗದಂತೆ ಮುಂಜಾಗ್ರತೆ ವಹಿಸಲಾಗಿದೆ.

Source link