ಅಂದು ಗಂಭೀರ್ ಏನು ಹೇಳಿದ್ದರು?
ಅಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗಂಭೀರ್, ‘ಕೆಎಲ್ ರಾಹುಲ್ ಅವರೇ ನಮ್ಮ ಮೊದಲ ಆದ್ಯತೆಯ ವಿಕೆಟ್ ಕೀಪರ್. ರಿಷಭ್ ಪಂತ್ ಅವರಿಗೂ ಅವಕಾಶ ಸಿಗಲಿದೆ. ಆದರೆ ಒಂದು ಬಾರಿಗೆ ಇಬ್ಬರನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ತಂಡವನ್ನು ಪ್ರಕಟಿಸುವ ಅವಧಿಯಲ್ಲಿ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪಂತ್ ನಮ್ಮ ಮೊದಲ ಆಯ್ಕೆ ಎಂದಿದ್ದರು. ಆದರೆ ಗಂಭೀರ್, ಪಂತ್ ವಿರುದ್ಧ ಹೇಳಿಕೆ ನೀಡಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.