Vijay Raghvendr: ಆಟೋ ಡ್ರೈವರ್ ಆದ ಚಿನ್ನಾರಿ ಮುತ್ತ! ‘ನಗು ನಗುತ’ ಸಂದೇಶ ಕೊಟ್ಟ ವಿಜಯ್ ರಾಘವೇಂದ್ರ | | ACTPnews

Vijay Raghavendra Nagu Nagutha Short Film Latest Updates


ನಗು ನಗುತ ಸಿನಿಮಾ

‘ನಗು ನಗುತ’ ಒಂದು ಕಿರುಚಿತ್ರವೇ ಆಗಿದೆ. ಈ ಪುಟ್ಟ ಚಿತ್ರದಲ್ಲಿ ಕಾಳಜಿ ಇದೆ. ಆಟೋ ಡ್ರೈವರ್‌ ಗಳನ್ನ ಎಚ್ಚರಿಸುವ ಮಾತುಗಳು ಇವೆ.

ನಗು ನಗುತ ಸಿನಿಮಾ

(ಚಿತ್ರ ಕೃಪೆ: ನಗು ನಗುತ ಸಿನಿಮಾ ಟೀಮ್)

ಜವಾಬ್ದಾರಿ ಅಂತಲೇ ಕೆಲಸ ಮಾಡ್ತಾನೆ ಇರೋ ಡ್ರೈವರ್‌ಗಳು ಆರೋಗ್ಯದ ಕಡೆಗೂ ಗಮನ ಕೊಡಬೇಕಿದೆ. ಈ ವಿಚಾರವನ್ನ ಈ ಚಿತ್ರದಲ್ಲಿ ತೋರಲಾಗಿದೆ.

ಆಟೋ ಡ್ರೈವರ್

ಈ ನಗು ನುಗುತ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಆಟೋ ಡ್ರೈವರ್ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರದಲ್ಲಿ ವಿಷಯ ಇದೆ ಅಂತಲೇ ವಿಜಯ್ ರಾಘವೇಂದ್ರ ಈ ಚಿತ್ರ ಮಾಡಿದ್ದಾರೆ.

ಡೈರೆಕ್ಟರ್ ಶಿವು ಜಮಖಂಡಿ

ಈ ಚಿತ್ರವನ್ನ ಶಿವು ಜಮಖಂಡಿ ಡೈರೆಕ್ಷನ್ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಷನ್ ಕೂಡ ಇವರೇ ಮಾಡಿದ್ದಾರೆ. ಈ ಪುಟ್ಟ ಚಿತ್ರದಲ್ಲಿ ಅತಿ ದೊಡ್ಡ ಸಂದೇಶ ಇದೆ.

ನಿರ್ಮಾಪಕರು ಬಂದು ನಿರ್ದೇಶಕ ಶಿವು ಜಮಖಂಡಿ ಅವರಿಗೆ ಕಥೆ ಹೇಳಿದ್ದಾರೆ. ಕಥೆ ಕೇಳಿದ್ಮೇಲೆ ಇಷ್ಟ ಆಗಿದೆ. ಡೈರೆಕ್ಷನ್ ಮಾಡ್ಬೇಕು ಅನಿಸಿದೆ.

ಹಾಗಾಗಿಯೇ ಈ ಚಿತ್ರ ಮಾಡ್ಬೇಕು ಅನಿಸಿಯೇ ಈ ಸಿನಿಮಾ ಮಾಡಿದ್ದೇನೆ ಅಂತ ಶಿವು ಜಮಖಂಡಿ ಹೇಳಿಕೊಂಡಿದ್ದಾರೆ.

Vijay Raghavendra Nagu Nagutha Short Film Latest Updates

ಚಿತ್ರದ ನಾಯಕಿ ಯಾರು

(ಚಿತ್ರ ಕೃಪೆ: ನಗು ನಗುತ ಸಿನಿಮಾ ಟೀಮ್)

ಚಿನ್ನಾರಿ ಮುತ್ತನ ಮಾತು

ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಒಳ್ಳೆ ಸಂದೇಶ ಕೊಟ್ಟಿದ್ದಾರೆ. ಕಿರು ಚಿತ್ರದ ಕುರಿತು ಮಾತನಾಡಿದ್ದಾರೆ. ಅವರ ಮಾತುಗಳು ಈ ರೀತಿ ಇವೆ.

‘ಈ ಕಿರುಚಿತ್ರಕ್ಕೆ ಆಟೋ ಚಾಲಕರು ದೊಡ್ಡ ಮಟ್ಟದಲ್ಲಿ ಪ್ರೊತ್ಸಾಹಿಸಿದ್ದಾರೆ. ಆಟೋ ಚಾಲಕರು ಅವರ ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚು ಗಮನ ಹರಿಸಲಿ ಎನ್ನುವ ಕಾರಣಕ್ಕೆ ಈ ಕಿರುಚಿತ್ರವನ್ನು ಮಾಡಿದ್ದೇವೆ.

ಇದನ್ನೂ ಓದಿ: Yogaraj Bhat: ಯೋಗರಾಜ್ ಭಟ್ರ ಎಣ್ಣೆ ಹಾಡು ಜೊತೆ ಬ್ರೇಕಪ್ ಮೂಡ್

ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಶೀತದ ರೀತಿನೇ ಆಗಿ ಹೋಗಿದೆ. ಆದರೆ ಅದರ ಪರಿಣಾಮ ತೀವ್ರವಾಗಿದೆ. ಸಾಕಷ್ಟು ಕಾರಣಗಳು ಇರುತ್ತವೆ. ಆದರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಲಿ’ ಎಂದು ಆಟೋ ಚಾಲಕರಿಗೆ ಎಚ್ಚರಿಕೆಯ ಕಿವಿಮಾತನ್ನು ಹೇಳಿದ್ದಾರೆ.

ಚಿತ್ರದ ನಾಯಕಿ ಯಾರು

ಈ ಚಿತ್ರದಲ್ಲಿ ನಾಯಕಿನೂ ಇದ್ದಾರೆ. ವರ್ಷಿತಾ ರಾಮ್ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಇದು ಕಿರುಚಿತ್ರವೇ ಆಗಿದೆ. ಆದರೆ, ದೊಡ್ಡ ಸಿನಿಮಾ ಮಾಡಿದಷ್ಟೆ ಖುಷಿ ಆಗಿದೆ.

ನನ್ನ ಮೇಲೆ ಇಡೀ ತಂಡ ನಂಬಿಕೆ ಇಟ್ಟಿತ್ತು. ಈ ಒಂದು ಅವಕಾಶವನ್ನು ಕೊಟ್ಟಿತ್ತು. ಈ ಒಂದು ಅವಕಾಶಕ್ಕಾಗಿಯೇ ನಾನು ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಅಂತಲೇ ವರ್ಷಿತಾ ರಾಮ್ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed