ಗುವಾಹಟಿಯ ಬರ್ಸಾಪಾರ ಸ್ಟೇಡಿಯಂನಲ್ಲಿ ಇಂದು (ಸೆಪ್ಟೆಂಬರ್ 30, ಬುಧವಾರ) ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡದ ಮೂವರು ಬ್ಯಾಟರ್‌ಗಳು ಶತಕ ಬಾರಿಸಿ ಅಬ್ಬರಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್ಬೆಲ್ (68 ಎಸೆತ, 9 ಬೌಂಡರಿ, 5 ಸಿಕ್ಸರ್ಗಳ ಸಹಿತ 101 ರನ್), ನಾಯಕ ಶಾಯ್ ಹೋಪ್ ( 94 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 104 ರನ್) ಮತ್ತು ಅಮೀರ್ ಜಂಗೂ (77 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ಗಳ ಸಹಿತ 114 ರನ್) ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಈ ಸಾಧನೆ ಮಾಡಿದರು. ಇದರೊಂದಿಗೆ ವಿಂಡೀಸ್ ಪಡೆ 50 ಓವರ್‌ಗಳಲ್ಲಿ 405/7 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ 400ರ ಗಡಿ ದಾಟಿದ ದಾಖಲೆ ಬರೆಯಿತು.
2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (109), ಫಾಫ್ ಡು ಪ್ಲೆಸಿಸ್ (133*) ಮತ್ತು ಎಬಿ ಡಿ ವಿಲಿಯರ್ಸ್ (119) ಭಾರತದ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ದಕ್ಷಿಣ ಆಫ್ರಿಕಾ ತಂಡ 438 ರನ್ಗಳಿಸಿದರೆ, ಭಾರತ ಕೇವಲ 224 ರನ್ಗಳಿಗೆ ಆಲೌಟ್ ಆಗಿ 214 ರನ್‌ಗಳ ಹೀನಾಯ ಸೋಲು ಕಂಡಿತ್ತು.
ಇನ್ನು ಒಟ್ಟಾರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಒಂದೆ ತಂಡದ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿರುವುದು ಇದು 6ನೇ ಬಾರಿ.
2015 ರಲ್ಲಿ ದಕ್ಷಿಣ ಆಫ್ರಿಕಾ (439/2) vs ವೆಸ್ಟ್ ಇಂಡೀಸ್: ಹಶೀಮ್ ಆಮ್ಲಾ (153*), ರೈಲಿ ರೊಸೊ (128), ಎಬಿ ಡಿ ವಿಲಿಯರ್ಸ್ (149)
2015ರಲ್ಲಿ ದಕ್ಷಿಣ ಆಫ್ರಿಕಾ (438/4) vs ಭಾರತ: ಕ್ವಿಂಟನ್ ಡಿ ಕಾಕ್ (109), ಫಾಫ್ ಡು ಪ್ಲೆಸಿಸ್ (133*), ಎಬಿ ಡಿ ವಿಲಿಯರ್ಸ್ (119)
2022ರಲ್ಲಿ ಇಂಗ್ಲೆಂಡ್ (498/4) vs ನೆದರ್ಲ್ಯಾಂಡ್ಸ್: ಫಿಲ್ ಸಾಲ್ಟ್ (122), ಡಾವಿಡ್ ಮಲಾನ್ (125), ಜೋಸ್ ಬಟ್ಲರ್ (162*)
2023ರಲ್ಲಿ ದಕ್ಷಿಣ ಆಫ್ರಿಕಾ (428/5) vs ಶ್ರೀಲಂಕಾ: ಕ್ವಿಂಟನ್ ಡಿ ಕಾಕ್ (100), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (108), ಐಡೆನ್ ಮಾರ್ಕ್ರಾಮ್ (106).
2025ರಲ್ಲಿ ಆಸ್ಟ್ರೇಲಿಯಾ (431/2) vs ಟ್ರಾವಿಸ್ ಹೆಡ್ (142), ಮಿಚೆಲ್ ಮಾರ್ಷ್ (100), ಕ್ಯಾಮೆರಾನ್ ಗ್ರೀನ್ (118)
2026ರಲ್ಲಿ ವೆಸ್ಟ್ ಇಂಡೀಸ್ (405/7) vs ಭಾರತ: ಜಾನ್ ಕ್ಯಾಂಪ್ಬೆಲ್ (101), ಶಾಯ್ ಹೋಪ್ (104), ಅಮೀರ್ ಜಂಗೂ (114)













