ಅಂತಿಮ ಅಥವಾ 14ನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಡಿಂಗ್ ಲಿರೆನ್ ಅವರಿಗೆ ಆಘಾತ ನೀಡಿದ ಗುಕೇಶ್ ಇತಿಹಾಸದ ಪುಟಗಳಲ್ಲಿ ತನ್ನದೆಯಾದ ಪುಟವೊಂದನ್ನು ತೆರೆದಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ಶಿಪ್ಗೆ ಮುತ್ತಿಕ್ಕಿದ ಭಾರತದ ಎರಡನೇ 2ನೇ ಆಟಗಾರ. 18ನೇ ವಯಸ್ಸಿಗೆ ಚಾಂಪಿಯನ್ ಆಗಿರುವ ಗುಕೇಶ್, ವಿಶ್ವ ಚೆಸ್ನಲ್ಲಿ ಈ ಸಾಧನೆಗೈದ ಅತ್ಯಂತ ಕಿರಿಯ ಆಟಗಾರ ಎಂಬ ನೂತನ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ.