Burkha Ban: ಶಾಲೆಗಳಲ್ಲಿ ಬುರ್ಖಾ ಬ್ಯಾನ್! ಇಟಲಿ ಪ್ರಧಾನಿ ವಿರುದ್ಧ ಮುಸ್ಲಿಂ ನಾಯಕ ಕಿಡಿಕಿಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇಟಲಿ ಪ್ರಧಾನಿ ವಿರುದ್ಧ ಟೀಕೆ


Last Updated:

Burkha Ban: ಎಐಎಂಐಎಂ ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಜಾರ್ಜಿಯಾ ಮೆಲೋನಿ ವಿರುದ್ಧ ಟೀಕಿಸಿದ್ದಾರೆ. ಜಾರ್ಜಿಯಾ ಮೆಲೋನಿ ಅವರು ಇಟಲಿಯ ಶಾಲೆಗಳಲ್ಲಿ ಬುರ್ಖಾ ಮತ್ತು ನಿಖಾಬ್ ನಿಷೇಧ ಪ್ರಸ್ತಾವನೆ ಮಾಡಿದ್ದಾರೆ. ಯಾಕೆಂದ್ರೆ ಮೆಲೋನಿ ಅವರು ಮಹಿಳೆಯರು ಬ್ರಾ, ಪ್ಯಾಂಟೀಸ್ ಮತ್ತು ಬಿಕಿನಿ ಹೊರಗೆ ಧರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ ಅಂತ ಟೀಕಿಸಿದ್ದಾರೆ!

ಇಟಲಿ ಪ್ರಧಾನಿ ವಿರುದ್ಧ ಟೀಕೆ
ಇಟಲಿ ಪ್ರಧಾನಿ ವಿರುದ್ಧ ಟೀಕೆ

ಹೈದರಾಬಾದ್: ಇಟಲಿಯ ಶಾಲೆ, ಕಾಲೇಜ್‌ಗಳಲ್ಲಿ ಬುರ್ಖಾ (Burkha), ನಿಕಾಬ್ ಧರಿಸೋದನ್ನು ಬ್ಯಾನ್ ಮಾಡೋದಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಮುಂದಾಗಿದ್ದಾರೆ. ಈ ನಿರ್ಧಾರವೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಎಐಎಂಐಎಂ (AIMIM) ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ (Waris Pathan) ಜಾರ್ಜಿಯಾ ಮೆಲೋನಿ ವಿರುದ್ಧ ಟೀಕಿಸಿದ್ದಾರೆ. ಜಾರ್ಜಿಯಾ ಮೆಲೋನಿ ಅವರು ಇಟಲಿಯ ಶಾಲೆಗಳಲ್ಲಿ ಬುರ್ಖಾ ಮತ್ತು ನಿಖಾಬ್ ನಿಷೇಧ ಪ್ರಸ್ತಾವನೆ ಮಾಡಿದ್ದಾರೆ. ಯಾಕೆಂದ್ರೆ ಮೆಲೋನಿ ಅವರು ಮಹಿಳೆಯರು ಬ್ರಾ, ಪ್ಯಾಂಟೀಸ್ ಮತ್ತು ಬಿಕಿನಿ ಹೊರಗೆ ಧರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ ಅಂತ ಟೀಕಿಸಿದ್ದಾರೆ!

ಜಾರ್ಜಿಯಾ ಅವರು ಮೋದಿಯಂತೆಯೇ ಆಗಿದ್ದಾರೆ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತ ಸರ್ಕಾರದ ಮುಸ್ಲಿಮರ ಬಗೆಗಿನ ವಿಧಾನವನ್ನು ಅನುಸರಿಸಿದ್ದಾರೆ ಎಂದು ವಾರಿಸ್ ಪಠಾಣ್ ಆರೋಪಿಸಿದರು. ಅವರು ಪ್ರಧಾನಿ ಮೋದಿಯ ಸ್ನೇಹಿತರು. ಅವರು ಅವರಂತೆಯೇ ಆಗಿದ್ದಾರೆ ಎಂದು ಎಐಎಂಐಎಂ ನಾಯಕ ಟೀಕಿಸಿದ್ದಾರೆ.

ಮಹಿಳೆಯರು ಪ್ಯಾಂಟಿ ಧರಿಸೋದನ್ನು ಇಷ್ಟಪಡ್ತಾರೆ

ದಿ ಪ್ರಿಂಟ್‌ ಮಾತನಾಡಿದ ವಾರಿಸ್ ಪಠಾಣ್, ಜಾರ್ಜಿಯಾ ಮೆಲೋನಿ ಅವರು ಸಂಪ್ರದಾಯಬದ್ಧವಾಗಿ ಉಡುಪು ಧರಿಸುವ ಮಹಿಳೆಯರನ್ನು ಇಷ್ಟಪಡುವುದಿಲ್ಲ. ಮೆಲೋನಿ ಮಹಿಳೆಯರು ಬ್ರಾ ಮತ್ತು ಪ್ಯಾಂಟಿ ಹೊರಗೆ ಧರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಬಿಕಿನಿ ಧರಿಸುವುದನ್ನು ಬಯಸುತ್ತಾರೆ ಅಂತ ಟೀಕಿಸಿದ್ದಾರೆ.

ಗೌರವದ ಉಡುಪು ಧರಿಸಿದ್ರೆ ಅವ್ರು ಇಷ್ಟಪಡಲ್ಲ

ಜಾರ್ಜಿಯಾ ಮೆಲೋನಿ ಬುರ್ಖಾ ಮತ್ತು ನಿಖಾಬ್ ಅನ್ನು ದ್ವೇಷಿಸುತ್ತಾರೆ. ಅವರು ಬಹುಶಃ ಬ್ರಾ ಮತ್ತು ಬಿಕಿನಿಯನ್ನು ಇಷ್ಟಪಡುತ್ತಾರೆ. ಮಹಿಳೆಯರು ಸಾರ್ವಜನಿಕವಾಗಿ ಬ್ರಾ, ಪ್ಯಾಂಟೀಸ್ ಮತ್ತು ಬಿಕಿನಿ ಧರಿಸುವುದನ್ನು ಅವರು ಬಯಸುತ್ತಾರೆ. ಮಹಿಳೆ ಮುಚ್ಚಿಕೊಂಡು ಗೌರವದಿಂದ ಉಡುಪು ಧರಿಸಿದರೆ ಅವರಿಗೆ ಇಷ್ಟವಿಲ್ಲ. ಇದು ಸಂಪೂರ್ಣ ನಾಚಿಕೆಗೇಡಿನ ಮಾತು ಅಂತ ವಾರಿಸ್ ಪಠಾಣ್ ಕಿಡಿಕಾರಿದ್ದಾರೆ.

ಇಟಲಿ ಶಾಲೆಗಳಲ್ಲಿ ಬುರ್ಖಾ ನಿಷೇಧಿಸಲು ಚಿಂತನೆ

ಇಟಲಿಯಲ್ಲಿ ಇದು ಈಗಾಗಲೇ ಜಾರಿಯಲ್ಲಿರುವ ಪೂರ್ಣ ಕಾನೂನು ಅಲ್ಲ. ಸೆಪ್ಟೆಂಬರ್ 20, 2026ರಂದು ಪ್ರಧಾನಿ ಜಾರ್ಜಿಯಾ ಮೆಲೋನಿ ಘೋಷಿಸಿದ ಪ್ರಸ್ತಾವಿತ ಕ್ರಮ. ಇದು ಮೊದಲು ಕ್ಯಾಬಿನೆಟ್‌ಗೆ ಹೋಗುತ್ತದೆ, ನಂತರ 60 ದಿನಗಳೊಳಗೆ ಸಂಸತ್ತಿನ ಅನುಮೋದನೆ ಬೇಕು. ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಉಡುಪುಗಳು ಅಂದರೆ ಬುರ್ಖಾ – ಕಣ್ಣುಗಳ ಮೇಲೆ ಜಾಲಿಯೊಂದಿಗೆ ಸಂಪೂರ್ಣ ದೇಹ ಮುಚ್ಚುವುದು; ನಿಖಾಬ್ – ಕಣ್ಣುಗಳನ್ನು ಬಿಟ್ಟು ಮುಖ ಮುಚ್ಚುವುದು ಇತ್ಯಾದಿ ಉಡುಪುಗಳಿಗೆ ಶಾಲೆಗಳಲ್ಲಿ ನಿಷೇಧ ಹೇರಲು ಮುಂದಾಗಿದ್ದಾರೆ. ಹಿಜಾಬ್ ಅಂದರೆ ಕೂದಲು ಮತ್ತು ಕುತ್ತಿಗೆ ಮುಚ್ಚಿ ಮುಖ ತೆರೆದಿರುವುದು ಇದರಲ್ಲಿ ಸೇರಿಲ್ಲ.

ಜಾರ್ಜಿಯಾ ಮೆಲೋನಿ ಹೇಳಿದ್ದೇನು?

“ಶಾಲೆಗೆ ಮುಖ ತೆರೆದು ಹೋಗಬೇಕು. ಇಟಲಿಯಲ್ಲಿ ಯಾರೂ ಸಂಪ್ರದಾಯದ ಹೆಸರಿನಲ್ಲಿ ಯುವತಿ ಮುಖ ಮುಚ್ಚಿಕೊಳ್ಳಬೇಕೆಂದು ನಿರ್ಧರಿಸುವಂತಿಲ್ಲ” ಅಂತ ಜಾರ್ಜಿಯಾ ಮೆಲೋನಿ ಹೇಳಿದ್ದರು. ಇನ್ನು ಇಟಲಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರಲಾಗಿತ್ತು. ಪ್ರತಿ ತರಗತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆ ಕಾನೂನುಬದ್ಧವಾಗಿ ನಿಗದಿ. ಈಗಾಗಲೇ 2010ರ ಸುತ್ತೋಲೆಯಲ್ಲಿ 30% ಮಿತಿ ಇದೆ, ಆದರೆ ಅನೇಕ ಕಡೆ ಅನುಷ್ಠಾನವಾಗಿಲ್ಲ. ಹೊಸ ಕ್ರಮದಲ್ಲಿ ಇದನ್ನು ಕಠಿಣಗೊಳಿಸಲು ಉದ್ದೇಶಿಸಲಾಗಿತ್ತು.

ಪೋಷಕರಿಗೆ ಇಟಾಲಿಯನ್ ಕಡ್ಡಾಯ

ಶಾಲಾ ಏಕೀಕರಣದಲ್ಲಿ ಗಂಭೀರ ತೊಂದರೆ ಇರುವ ವಿದೇಶಿ ವಿದ್ಯಾರ್ಥಿಗಳ ಪೋಷಕರು ಇಟಾಲಿಯನ್ ಭಾಷೆ ಕಲಿಯಬೇಕು ಎಂಬ ಚಿಂತನೆ ನಡೆಸಲಾಗಿತ್ತು. ಇಟಲಿಯಲ್ಲಿ ರಾಷ್ಟ್ರವ್ಯಾಪಿ ಬುರ್ಖಾ/ನಿಖಾಬ್ ನಿಷೇಧ ಇಲ್ಲ. 1975ರ ಕಾನೂನು ಗುರುತಿಸಲು ಕಷ್ಟವಾಗುವಂತೆ ಮುಖ ಮುಚ್ಚುವ ಉಡುಪು/ಹೆಲ್ಮೆಟ್‌ಗೆ ನಿರ್ಬಂಧ ಹಾಕುತ್ತದೆ (ಸಮರ್ಥನೀಯ ಕಾರಣವಿಲ್ಲದಿದ್ದರೆ ಧಾರ್ಮಿಕ/ಸಾಂಸ್ಕೃತಿಕ ಕಾರಣಕ್ಕೆ ಮುಖ ಮುಚ್ಚಬಹುದು, ಆದರೆ ಗುರುತು ಪರಿಶೀಲನೆಯ ಸಮಯದಲ್ಲಿ ಮುಖ ತೋರಿಸಬೇಕು ಎಂಬ ನಿಯಮ ಇತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed