Karnataka
oi-Malathesha M
ಬೆಂಗಳೂರು: ನಂದಿನಿ.. ಇದು ಕನ್ನಡಿಗರ ಬ್ರ್ಯಾಂಡ್.. ಕನ್ನಡ ನೆಲದ ಸೊಗಡನ್ನ ಇಡೀ ಜಗತ್ತಿಗೆ ಹರಡುತ್ತಿರುವ ನಂದಿನಿ ಕನ್ನಡ ನಾಡಿನ ಹೆಮ್ಮೆ. ಆದ್ರೆ ಕೆಲ ತಿಂಗಳಿಂದ ನಂದಿನಿ ಬ್ರ್ಯಾಂಡ್ ಟಾರ್ಗೆಟ್ ಆಗುತ್ತಿದೆಯಾ? ಅನ್ನೋ ಅನುಮಾನ ಮೂಡಿದೆ. ಇದಕ್ಕೆಲ್ಲಾ ಕಾರಣ ಸಾಲು ಸಾಲು ವಿವಾದ. ಅತ್ತ ಅಮುಲ್ ವಿಚಾರದಲ್ಲಿ ನಂದಿನಿ ಟಾರ್ಗೆಟ್ ಆಗಿದೆ ಅಂತಾ ಕನ್ನಡಿಗರು ರೊಚ್ಚಿಗೆದ್ದಿದ್ದರು, ಈಗ ಕೇರಳ ಕೂಡ ಜಗಳಕ್ಕೆ ನಿಂತಿದೆ!
2 ತಿಂಗಳ ಹಿಂದೆ ಕರ್ನಾಟಕದಲ್ಲಿ ನಂದಿನಿ ವರ್ಸಸ್ ಅಮುಲ್ (Nandini vs Amul) ವಿವಾದ ಭುಗಿಲೆದ್ದು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಆಗ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ನಡುವೆ ಕರ್ನಾಟಕಕ್ಕೆ ಗುಜರಾತ್ ಮೂಲದ ಅಮುಲ್ ಉತ್ಪನ್ನಗಳು ಲಗ್ಗೆ ಇಡುತ್ತಿರುವುದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಸುಮ್ಮನೆ ಇರದೆ ನೆರೆ ರಾಜ್ಯ ಕೇರಳ ಕೂಡ ಇದೇ ವಿವಾದ ಇಟ್ಟುಕೊಂಡು ಜಗಳಕ್ಕೆ ಬಂದಿದೆ. ಹೀಗಾಗಿ ನಂದಿನಿ & ಕೇರಳದ ಮಿಲ್ಮಾ ವಿವಾದ (Nandini vs Milma) ಭುಗಿಲೆದ್ದಿದೆ. ಹಾಗಾದರೆ ಈ ಯುದ್ಧದಲ್ಲಿ ಗೆಲ್ಲೋದು ಯಾರು? ಮುಂದೆ ಓದಿ.
ಹಾಲು ಉತ್ಪನ್ನಕ್ಕೆ ಮತ್ತೊಂದು ಹೆಸರು ಕರ್ನಾಟಕ!
ಹೌದು, ಈ ಮಾತನ್ನ ಹೇಳಿದರೆ ಅತಿಶಯೋಕ್ತಿ ಅನ್ನಿಸುವುದಿಲ್ಲ. ಏಕೆಂದರೆ ಕನ್ನಡಗರ ನೆಲ ಹಾಲು ಉತ್ಪಾದನೆ ವಿಚಾರದಲ್ಲಿ ಬಹುದೊಡ್ಡ ಸಾಧನೆ ಮಾಡುತ್ತಿದೆ. ರಾಜ್ಯದ ರೈತ ತನ್ನ ಹೊಟ್ಟೆ ತುಂಬಿಸಿಕೊಳ್ಳಲು, ಬರಗಾಲದಲ್ಲೂ ನೆಮ್ಮದಿಯಾಗಿ ಜೀವನ ನಡೆಸೋದಕ್ಕೆ ಇದೇ ನಂದಿನಿ ಅನ್ನೋ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕಾರಣ. ಆದರೆ ಪದೇ ಪದೆ ಈ ನಂದಿನಿ ಬ್ರ್ಯಾಂಡ್ ಅನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇದೆಲ್ಲಾ ಎಷ್ಟೇ ನಡೆದರೂ ಶಕ್ತಿ ಮಾತ್ರ ಕುಂದುತ್ತಿಲ್ಲ. ಹಾಲು ಉತ್ಪಾದನೆ ವಿಚಾರದಲ್ಲಿ ಕೇರಳಕ್ಕೆ ಹೋಲಿಸಿದರೆ ಕರ್ನಾಟಕ ಸಾವಿರ ಪಟ್ಟು ಉತ್ತಮವಾಗಿದೆ!
ಕೇರಳ ಹಾಲು ಉತ್ಪಾದಿಸಲು ಪರದಾಡುತ್ತಿದೆ!
ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಎನ್ನುವ ಹಾಗೆ, ಕೇರಳದಲ್ಲಿ ಹಾಲಿನ ಉತ್ಪಾದನೆ ತೀರಾ ಕಡಿಮೆ ಇದೆ. ಆದರೂ ಕರ್ನಾಟಕದ ನಂದಿನಿ ಬ್ರ್ಯಾಂಡ್ ಮಾರಾಟಕ್ಕೆ ಕೇರಳ ವಿರೋಧ ಮಾಡುತ್ತಿದೆ. ಕಳೆದ 20 ವರ್ಷದಲ್ಲಿ ಕರ್ನಾಟಕದ ಹಾಲು ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದ್ದರೆ, ಕೇರಳದ ಹಾಲು ಉತ್ಪಾದನೆ ಕುಸಿಯುತ್ತಾ ಹೋಗಿದೆ. ಆ ಹಿನ್ನೆಲೆಯಲ್ಲಿ ನೋಡುವುದಾದರೆ, 2001-02ರಲ್ಲಿ ಕರ್ನಾಟಕದಲ್ಲಿನ ಹಾಲು ಉತ್ಪಾದನೆ ಸಾಮರ್ಥ್ಯ 4,797 ಟನ್ ಇತ್ತು. ಆದರೆ 2021-22ರಲ್ಲಿ ಇದು ಬರೋಬ್ಬರಿ 11,796 ಟನ್ ಅಂದರೆ 3 ಪಟ್ಟು ಹೆಚ್ಚಾಗಿದೆ. ಆದರೆ ಕೇರಳದ ಪರಿಸ್ಥಿತಿ ಮಾತ್ರ ಇನ್ನೂ ಹೀನಾಯವಾಗಿ ಸಾಗುತ್ತಲೇ ಇದೆ.
ಕರ್ನಾಟಕದ ಕಾಲು ಭಾಗ ಹಾಲು ಉತ್ಪಾದಿಸಲ್ಲ ಕೇರಳ!
ಅಷ್ಟಕ್ಕೂ ಈ ಮಾತು ನಂಬಲು ಕಷ್ಟವಾದರೂ ಕಟುಸತ್ಯ, 20 ವರ್ಷದಲ್ಲಿ ಕರ್ನಾಟಕದ ಹಾಲು ಉತ್ಪಾದನೆ ಮೂರು ಪಟ್ಟು ಹೆಚ್ಚಾಗಿದ್ದರೆ, ಕೇರಳದ ಹಾಲು ಉತ್ಪಾದನೆ ಮಾತ್ರ ಪಾತಾಳ ಸೇರುತ್ತಿದೆ. 2001-02ರಲ್ಲಿ ಕೇರಳ ಹಾಲು ಉತ್ಪಾದನೆ ಸಾಮರ್ಥ್ಯ 2,718 ಟನ್ ಇತ್ತು. ಆದರೆ ಕೇರಳದ ಹಾಲು ಉತ್ಪಾದನೆ 2021-22ರ ಹೊತ್ತಿಗೆ 2,532 ಟನ್ಗೆ ಕುಸಿತ ಕಂಡಿದೆ. ಅಂದರೆ ನೀವೆ ಲೆಕ್ಕ ಹಾಕಿ, ಕರ್ನಾಟಕದ ಹಾಲು ಉತ್ಪಾದನೆ ಮೂರು ಪಟ್ಟು ಅಭಿವೃದ್ಧಿ ಹೊಂದಿದೆ. ಆದರೆ ಕೇಳರದಲ್ಲಿ ಹಾಲಿನ ಉತ್ಪಾದನೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆ ನಂದಿನಿಗೆ ಕೇರಳ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗಿರುವಾಗ ಫೈಟ್ ಶುರುವಾಗಿದೆ. ಅದರ ಸಂಪೂರ್ಣ ಮಾಹಿತಿ ಚಿತ್ರಣ ಇಲ್ಲಿದೆ ತಿಳಿಯಿರಿ.
ಹೀಗೆ ಕೇರಳದ ರಾಜಕಾರಣಿಗಳು ಕನ್ನಡಿಗರ ಬ್ರ್ಯಾಂಡ್ ವಿರುದ್ಧ ಸಮರ ಸಾರಿದ್ದರೆ, ಇಲ್ಲಿ ಕೂಡ ಅದೇ ರೀತಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ನಾಡಿಗೆ ಬರುವ ಕೇರಳ ವಸ್ತುಗಳೇ ಟಾರ್ಗೆಟ್ ಆಗುವ ಸಾಧ್ಯತೆ ಇದೆ. ಸಾಕಷ್ಟು ಕೃಷಿ ಉತ್ಪನ್ನ ಹಾಗೂ ಇತರ ಉತ್ಪನ್ನಗಳನ್ನ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಸಾಗಿಸಲಾಗುತ್ತಿದೆ. ಈಗ ಕರ್ನಾಟಕದ ಹಾಲಿನ ಉತ್ಪನ್ನ ಟಾರ್ಗೆಟ್ ಮಾಡಿರುವ ಕೇರಳದ ರಾಜಕಾರಣಿಗಳಿಗೆ ಈ ಮೂಲಕ ಹೊಸ ಪಾಠ ಕಲಿಸುವ ಸಾಧ್ಯತೆ ದಟ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ಕುರಿತು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.
English summary
Karnataka and Kerala Milk production difference in last 20 years analysis.
Story first published: Monday, June 19, 2023, 13:16 [IST]