Bollywood
oi-Narayana M
ಮದುವೆ,
ಮಗು
ನಂತರ
ಕೂಡ
ನಟಿ
ಕಾಜಲ್
ಅಗರ್ವಾಲ್
ಚಿತ್ರರಂಗದಲ್ಲಿ
ಬ್ಯುಸಿಯಾಗಿದ್ದಾರೆ.
ಮಗನ
ಲಾಲಾನೆ
ಪಾಲನೆ
ಜೊತೆಗೆ
ದೊಡ್ಡ
ದೊಡ್ಡ
ಸಿನಿಮಾಗಳಲ್ಲಿ
ನಟಿಸ್ತಿದ್ದಾರೆ.
‘ಮಗಧೀರ’,
‘ಡಾರ್ಲಿಂಗ್’,
‘ಸಿಂಗಂ’
ರೀತಿಯ
ಹಿಟ್
ಸಿನಿಮಾಗಳಲ್ಲಿ
ಮಿಂಚಿದ
ಚೆಲುವೆ
ಕೈಯಲ್ಲಿ
ಈಗ
4
ಸಿನಿಮಾಗಳಿವೆ.
ನಾನು
ಕೂಡ
ಜೀವನದಲ್ಲಿ
ಒಮ್ಮೆ
ಖಿನ್ನತೆಗೆ
ಒಳಗಾಗಿದ್ದೆ
ಎಂದು
ಕಾಜಲ್
ಹೇಳಿದ್ದಾರೆ.
ಉದ್ಯಮಿ
ಗೌತಮ್
ಕಿಚ್ಲು
ಜೊತೆ
ಮದುವೆ
ನಂತರ
ಚಿತ್ರರಂಗದಿಂದ
ಕೊಂಚ
ಬ್ರೇಕ್
ತೆಗೆದುಕೊಂಡಿದ್ದ
ಚೆಲುವೆ
ಮತ್ತೆ
ಸಿನಿಮಾಗಳಲ್ಲಿ
ನಟಿಸ್ತಿದ್ದಾರೆ.
ಇತ್ತೀಚೆಗೆ
ಅಭಿಮಾನಿಗಳ
ಜೊತೆ
ಸೋಶಿಯಲ್
ಮೀಡಿಯಾದಲ್ಲಿ
ಲೈವ್
ಚಾಟ್ನಲ್ಲಿ
ಕಾಜಲ್
ಭಾಗಿ
ಆಗಿದ್ದರು.
ಈ
ವೇಳೆ
ಅಭಿಮಾನಿಗಳ
ಪ್ರಶ್ನೆಗಳಿಗೆ
ಇಂಟ್ರೆಸ್ಟಿಂಗ್
ಉತ್ತರ
ಕೊಟ್ಟಿದ್ದಾರೆ.
ಇನ್ನು
ಜೀವನದಲ್ಲಿ
ಎದುರಿಸಿದ
ಮಾನಸಿಕ
ಸಮಸ್ಯೆ,
ಸೇರಿದಂತೆ
ವೈಯಕ್ತಿಕ
ವಿಚಾರಗಳ
ಬಗ್ಗೆ
ನಟಿ
ಮಾತನಾಡಿದ್ದಾರೆ.
ಇನ್ನು
ಲೈವ್
ಚಾಟ್
ವೇಳೆ
ಅಭಿಮಾನಿಯೊಬ್ಬರು
ನಟಿಗೆ
ಪ್ರಪೋಸ್
ಕೂಡ
ಮಾಡಿದ್ದಾರೆ.
ಅದಕ್ಕೆ
ಆಕೆ
ಇಂಟ್ರೆಸ್ಟಿಂಗ್
ಉತ್ತರ
ಕೊಟ್ಟಿದ್ದಾರೆ.
2004ರಲ್ಲಿ
‘ಕ್ಯೂ
ಹೋ
ಗಯಾ
ನಾ’
ಚಿತ್ರದಲ್ಲಿ
ಪುಟ್ಟ
ಪಾತ್ರದಲ್ಲಿ
ನಟಿಸಿದ
ಮುಂಬೈ
ಬೆಡಗಿ
ನಂತರ
ಸೌತ್
ಸಿನಿಮಾಗಳಲ್ಲಿ
ನಟಿಸಿ
ಗೆದ್ದರು.
‘ಮಗಧೀರ’
ಚಿತ್ರದಲ್ಲಿ
ಮಿತ್ರಾವಿಂದಾ
ಆಗಿ
ಮೋಡಿ
ಮಾಡಿ
ಕಾಜಲ್
ಮತ್ತೆ
ಹಿಂತಿರುಗಿ
ನೋಡಲಿಲ್ಲ.
ಹೆರಿಗೆಯ
ನಂತರ
ಖಿನ್ನತೆಗೆ
ಜಾರಿದ್ದೆ
ಇನ್ಸ್ಟಾ
ಚಾಟ್
ವೇಳೆ
ನಟಿ
ಕಾಜಲ್
ಅಗರ್ವಾಲ್
“ಹೆರಿಗೆಯ
ನಂತರ
ನಾನು
ಕೂಡ
ಖಿನ್ನತೆಗೆ
ಒಳಗಾಗಿದ್ದೆ.
ಮಹಿಳೆಯರು
ಯಾರೇ
ಆದರೂ
ಪೋಸ್ಟ್ಮಾರ್ಟಂ
ಡಿಪ್ರೆಷನ್ಗೆ
ಒಳಗಾದಾಗ
ಕುಟುಂಬಸ್ಥರು
ಜೊತೆಗೆ
ನಿಲ್ಲಬೇಕು.
ಮಹಿಳೆಯರು
ಸಹ
ಮಕ್ಕಳು
ಹುಟ್ಟಿದ
ಮೇಲೆ
ತಮಗಂತ
ಒಂದಷ್ಟು
ಸಮಯ
ಬಿಡುವು
ಮಾಡಿಕೊಳ್ಳಬೇಕು.
ವರ್ಕೌಟ್
ಮಾಡಬೇಕು,
ಇಷ್ಟದ
ವ್ಯಕ್ತಿ
ಜೊತೆ
ಕಾಲ
ಕಳೆಯಬೇಕು.
ಈ
ರೀತಿ
ಮಾಡುವುದರಿಂದ
ಡಿಪ್ರೆಷನ್ನಿಂದ
ಹೊರ
ಬರಲು
ಸಹಕಾರಿ
ಆಗುತ್ತದೆ.
ನನಗೆ
ನನ್ನ
ಕುಟುಂಬ
ಬೆಂಬಲವಾಗಿ
ಇತ್ತು.
ನನ್ನಿಂದ
ನನ್ನ
ಪತಿ
ಸಾಕಷ್ಟು
ಸಮಸ್ಯೆ
ಎದುರಿಸುವಂತಾಯಿತು”
ಎಂದಿದ್ದಾರೆ.
ಅಭಿಮಾನಿಯ
ಮದುವೆ
ಪ್ರಪೋಸ್
ಇನ್ನು
ಚಾಟ್
ವೇಳೆ
ಅಭಿಮಾನಿಯೊಬ್ಬ
ನನ್ನನ್ನು
ಮದುವೆ
ಆಗ್ತೀರಾ
ಎಂದು
ಕೇಳಿ
ಶಾಕ್
ಕೊಟ್ಟಿದ್ದಾನೆ.
ಕೂಡಲೇ
ಉತ್ತರಿಸಿದ
ಕಾಜಲ್,
2
ವರ್ಷದ
ಹಿಂದೆ
ಆ
ಅದೃಷ್ಟ
ಮತ್ತೊಬ್ಬರ
ಪಾಲಾಯಿತು
ಎಂದು
ಸಿಂಪಲ್
ಉತ್ತರ
ಕೊಟ್ಟಿದ್ದಾರೆ.
ಸದ್ಯ
ಕಾಜಲ್
ಉತ್ತರ
ಕೊಟ್ಟ
ಈ
ವಿಡಿಯೋ
ಸೋಶಿಯಲ್
ಮೀಡಿಯಾದಲ್ಲಿ
ಫುಲ್
ವೈರಲ್
ಆಗ್ತಿದೆ.
ಇಂಟ್ರೆಸ್ಟಿಂಗ್
ಪ್ರಶ್ನೆಗಳಿಗೆ
ಉತ್ತರ
ಅಲ್ಲು
ಅರ್ಜುನ್
ಬಗ್ಗೆ
ಹೇಳಿ
ಎನ್ನುವ
ಅಭಿಮಾನಿ
ಪ್ರಶ್ನೆಗೆ
“ನನಗೆ
ಗೊತ್ತಿರುವ
ಒಳ್ಳೆ
ವ್ಯಕ್ತಿಗಳಲ್ಲಿ
ಬನ್ನಿ
ಕೂಡ
ಒಬ್ಬರು.
ಅವರ
ಎನರ್ಜಿ
ಬಹಳ
ಇಷ್ಟ.
ಅದೇ
ಕಾರಣಕ್ಕೆ
ಅವರೊಟ್ಟಿಗೆ
ನಟಿಸೋಕೆ
ಎಲ್ಲರೂ
ಇಷ್ಟಪಡುತ್ತಾರೆ
ಎಂದಿದ್ದಾರೆ.
ಇನ್ನು
ನಿನ್ನೆ
ರಾತ್ರಿ
‘ಲಸ್ಟ್
ಸ್ಟೋರಿಸ್’-
2
ವೆಬ್
ಸೀರಿಸ್
ನೋಡ್ದೆ.
ತಮನ್ನಾ
ಬಹಳ
ಚೆನ್ನಾಗಿ
ನಟಿಸಿದ್ದಾರೆ,
ಆಕೆ
ನನಗೆ
ನನಗೆ
ಭಯ
ತಂದಿತ್ತು
ಎಂದಿದ್ದಾರೆ.
ಸೆಕೆಂಡ್
ಇನ್ನಿಂಗ್ಸ್ನಲ್ಲಿ
ಬ್ಯುಸಿ
ಸದ್ಯ
ಕಾಜಲ್
ಅಗರ್ವಾಲ್
‘ಇಂಡಿಯನ್-
2’
ಚಿತ್ರದಲ್ಲಿ
ಕಮಲ್
ಹಾಸನ್
ಜೊತೆ
ನಟಿಸ್ತಿದ್ದಾರೆ.
ಭಗವಂತ್
ಕೇಸರಿ
ಚಿತ್ರದಲ್ಲಿ
ಬಾಲಯ್ಯಗೆ
ಜೋಡಿಯಾಗಿದ್ದು
‘ಉಮಾ’,
‘ಸತ್ಯಭಾಮ’
ಎನ್ನುವ
2
ಬಾಲಿವುಡ್
ಸಿನಿಮಾಗಳಲ್ಲಿ
ಬಣ್ಣ
ಹಚ್ಚಿದ್ದಾರೆ.
ಮದುವೆ,
ಮಗು
ಅಂತ
ಬಹಳ
ದಿನ
ಬ್ರೇಕ್
ತೆಗೆದುಕೊಳ್ಳದೇ
ಬಹಳ
ಬೇಗ
ಬಣ್ಣದಲೋಕಕ್ಕೆ
ವಾಪಸ್
ಆಗಿದ್ದಾರೆ.
English summary
Fan proposes to Kajal Aggarwal in live chat, actress’s response goes viral. after marriage also Kajal acting in few films. know more.
Sunday, July 2, 2023, 9:14