ಪರ್ದೀಪ್ ನರ್ವಾಲ್ ಮೊದಲ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಪಿಕೆಎಲ್ ಆಡಿದರು. ಆದರೆ, ಆ ಸಂದರ್ಭ ಇವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆ ಸಮಯದಲ್ಲಿ ಅವರು ಗಳಿಸಿದ್ದು ಕೇವಲ 9 ಅಂಕಗಳು. ಇದರ ನಂತರ, ಅವರು 11 ನೇ ಸೀಸನ್ನಲ್ಲಿ ಬೆಂಗಳೂರು ಬುಲ್ಸ್ ಪರ ಮತ್ತೆ ಆಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ, ಪರ್ದೀಪ್ ಎರಡೂ ಸೀಸನ್ಗಳ ಅಂಕಗಳನ್ನು ಸೇರಿಸಿದರೆ 100 ಅಂಕಗಳನ್ನು ಕೂಡ ಪೂರ್ಣಗೊಳಿಸಿಲ್ಲ. ಈ ಋತು ಅಂತ್ಯವಾಗುವ ಮುನ್ನವಾದರೂ ಈ ಸಾಧನೆ ಮಾಡುತ್ತಾರಾ ನೋಡಬೇಕು.