Partner Content
oi-Mallika P
ಬೆಂಗಳೂರು, ಜೂನ್ 19: ಹಣಕಾಸು ಅಗತ್ಯವಿದ್ದಾಗ ಪರ್ಸನಲ್ ಲೋನ್ ಒಂದು ಪರಿಹಾರವಾಗಿ ಲಭ್ಯವಾಗುತ್ತವೆ. ಆದರೆ, ಸಮಯ ಮುಖ್ಯವಾಗಿದ್ದಾಗ ಎಲ್ಲ ಕಠಿಣ ಅರ್ಜಿ ಪ್ರಕ್ರಿಯೆಯನ್ನು ಮಾಡುವುದು, ಅನುಮೋದನೆಗಾಗಿ ಮತ್ತು ನಂತರದಲ್ಲಿ ಬಟವಾಡೆಗಾಗಿ ಕಾಯುತ್ತ ಕುಳಿತುಕೊಳ್ಳುವುದು ಸೂಕ್ತವಲ್ಲದಿರಬಹುದು.
ಈ ಸಮಯದಲ್ಲಿ ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ನೀವು ಈಗಾಗಲೇ ಪ್ರೀ ಅಪ್ರೂವ್ಡ್ ಅನ್ನು ಒಂದು ಮೊತ್ತಕ್ಕೆ ಪಡೆದುಕೊಂಡಿದ್ದರೆ, ಅರ್ಜಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಬಹುದು.
ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್‌ಗಳು ಅಲ್ಪಾವಧಿ ಸಾಲಗಳಾಗಿದ್ದು, ಇವನ್ನು ಸಾಮಾನ್ಯವಾಗಿ ಆಯ್ದ ಗ್ರಾಹಕರಿಗೆ, ತಮ್ಮ ಕ್ರೆಡಿಟ್ ಇತಿಹಾಸ ಮತ್ತು ಪ್ರಸ್ತುತ ಸಾಲದಾತರ ಜೊತೆಗಿನ ಸಂಬಂಧಗಳನ್ನು ಆಧರಿಸಿ ನೀಡಲಾಗುತ್ತದೆ. ಪ್ರೀ ಅಪ್ರೂವ್ಡ್ ಲೋನ್ ಕೊಡುಗೆಗಳನ್ನು ಒದಗಿಸುವುದಕ್ಕೂ ಮೊದಲು ಗ್ರಾಹಕರ ಸಾಲ ಅರ್ಹತೆಯನ್ನು ಸಾಲದಾತರು ನಡೆಸಿರುತ್ತಾರೆ.
ಎನ್‌ಬಿಎಫ್‌ಸಿಗಳು ಮತ್ತು ಬ್ಯಾಂಕ್‌ಗಳು ಪ್ರೀ ಅಪ್ರೂವ್ಡ್ ಲೋನ್‌ಗಳನ್ನು ನೀಡುತ್ತವೆ. ಪ್ರಮುಖ ಎನ್‌ಬಿಎಫ್‌ಸಿ ಆಗಿರುವ ಬಜಾಜ್ ಫೈನಾನ್ಸ್ ತಮ್ಮ ಇನ್‌ಸ್ಟಾ ಪರ್ಸನಲ್ ಲೋನ್ ಮೂಲಕ ಪ್ರೀ ಅಪ್ರೂವ್ಡ್ ಲೋನ್‌ಗಳನ್ನು ನೀಡುತ್ತದೆ. ಈ ಲೋನ್‌ಗಳನ್ನು ತಮ್ಮ ಪ್ರಸ್ತುತ ಗ್ರಾಹಕರಿಗೆ ನೀಡುವುದಲ್ಲದೆ, ಸಂಸ್ಥೆಗೆ ಹೊಸದಾಗಿ ಗ್ರಾಹಕರಾದವರಿಗೂ ನೀಡಲಾಗುತ್ತದೆ.
ನೀವು ಮಾಡಬೇಕಾದ್ದಿಷ್ಟೇ, ಮೊಬೈಲ್ ನಂಬರ್ ನಮೂದಿಸಿ ಮತ್ತು ಒಟಿಪಿ ಹಾಕಿ, ನಿಮ್ಮ ಪ್ರೀ ಅಪ್ರೂವ್ಡ್ ಆಫರ್ ಅನ್ನು ನೋಡಿದರೆ ಸಾಕು. ಪ್ರೀ ಅಪ್ರೂವ್ಡ್ ಲೋನ್ ಆಫರ್ ಅನ್ನು ಮೌಲ್ಯೀಕರಿಸಿದ ನಂತರ, ನೀವು ಸಮ್ಮತಿಸಬಹುದು ಅಥವಾ ಕಡಿಮೆ ಮೊತ್ತವನ್ನು ಆಯ್ಕೆ ಮಾಡಿಕೊಂಡು, ಅರ್ಜಿ ಪ್ರಕ್ರಿಯೆಯೊಂದಿಗೆ ಮುಂದುವರಿಯಬಹುದು. ಇನ್‌ಸ್ಟಾ ಪರ್ಸನಲ್ ಲೋನ್‌ನ ಅತಿದೊಡ್ಡ ಅನುಕೂಲವೆಂದರೆ, 30 ನಿಮಿಷಗಳಿಂದ 4 ಗಂಟೆಗಳೊಳಗೆ ನಿಮ್ಮ ಖಾತೆಗೆ ಹಣವನ್ನು ನೀವು ಪಡೆದುಕೊಳ್ಳಬಹುದು. ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್ ಅನ್ನು ಪಡೆಯುವುದು ಏಕೆ ಅನುಕೂಲಕರ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:
ರೂ. 20,000 ಇಂದ ರೂ. 10 ಲಕ್ಷ
ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್‌ಗಳ ಒಂದು ಪ್ರಮುಖ ಪ್ರಯೋಜನವೆಂದರೆ ಹಲವು ರೀತಿಯ ಆಫರ್‌ಗಳು ಇದರಲ್ಲಿವೆ. ಸಾಲದಾತರು ನಿಮಗೆ ನೀಡಿದ ಪ್ರೀ ಅಪ್ರೂವ್ಡ್ ಸಾಲ ಮೊತ್ತವನ್ನು ನೀವು ಒಪ್ಪಿಕೊಳ್ಳಬಹುದು ಅಥವಾ ಅದಕ್ಕೂ ಕಡಿಮೆ ಮೊತ್ತವನ್ನು ಆಯ್ಕೆ ಮಾಡಬಹುದು. ಸಾಲದಾತರು ಮತ್ತು ಸಾಲಗಾರರ ಸಾಲ ಅರ್ಹತೆಯನ್ನು ಆಧರಿಸಿ, ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್‌ಗಳ ಸಾಲ ಮೊತ್ತವು ಕೆಲವು ಸಾವಿರದಿಂದ ಲಕ್ಷಗಳವರೆಗೂ ಬದಲಾಗಬಹುದು. ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್‌ಗಳು ವಿವಿಧ ವೆಚ್ಚಗಳನ್ನು ಪೂರೈಸುವುದಕ್ಕಾಗಿ ರೂ. 10 ಲಕ್ಷದವರೆಗೆ ಇರಬಹುದು.
ಮರುಪಾವತಿಯಲ್ಲಿ ಅನುಕೂಲ
ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್‌ನಲ್ಲಿ ಫ್ಲೆಕ್ಸಿಬಲ್ ಪೇಬ್ಯಾಕ್ ಟರ್ಮ್‌ಗಳೂ ಕೂಡ ಇದ್ದು, ಸಾಲ ಪಾವತಿ ಮಾಡುವುದು ಇದರಿಂದಾಗಿ ಅರ್ಜಿದಾರರಿಗೆ ಸುಲಭವಾಗುತ್ತದೆ. ನಿಮ್ಮ ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್ ಮರುಪಾವತಿ ಮಾಡುವ ವಿಚಾರಕ್ಕೆ ಬಂದಾಗ, 6 ರಿಂದ 60 ತಿಂಗಳುಗಳವರೆಗಿನ ಅವಧಿಯನ್ನು ಬಜಾಜ್ ಫೈನಾನ್ಸ್ ನಿಮಗೆ ನೀಡುತ್ತದೆ. ಹೆಚ್ಚು ದೀರ್ಘ ಅವಧಿ ಇದ್ದಷ್ಟೂ ಒಟ್ಟಾರೆ ಬಡ್ಡಿ ಮೊತ್ತ ಹೆಚ್ಚಳವಾಗುತ್ತದೆ. ಆದರೆ, ಮಾಸಿಕ ಪಾವತಿ ಕಡಿಮೆ ಇರುತ್ತದೆ. ನಿಮ್ಮ ಇನ್‌ಸ್ಟಂಟ್ ಸಾಲವನ್ನು ಬೇಗ ಚುಕ್ತಾ ಮಾಡಲು ನೀವು ಬಯಸಿದರೆ, ನಿಮ್ಮ ಇಎಂಐ ಹೆಚ್ಚಿರುತ್ತದೆ. ಆದರೆ, ಒಟ್ಟಾರೆ ಬಡ್ಡಿ ಮೊತ್ತ ಕಡಿಮೆಯಾಗಿರುತ್ತದೆ.
ತ್ವರಿತ ಪ್ರಕ್ರಿಯೆ ಮತ್ತು ತಕ್ಷಣ ಬಟವಾಡೆ
ಸಾಲದಾತರು ನಿಮ್ಮ ಸಾಲ ಅರ್ಹತೆಯನ್ನು ಈಗಾಗಲೇ ಮೌಲ್ಯೀಕರಿಸಿರುವುದರಿಂದ, ನಿಮ್ಮ ಅರ್ಜಿ ಅನುಮೋದನೆಗೆ ನೀವು ಕಾಯಬೇಕಿಲ್ಲ. ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್ ಅರ್ಜಿಯನ್ನು ತ್ವರಿತವಾಗಿ ಪ್ರೋಸೆಸ್ ಮಾಡಬಹುದು. ಬಜಾಜ್ ಫೈನಾನ್ಸ್ ಇನ್‌ಸ್ಟಾ ಪರ್ಸನಲ್ ಲೋನ್ ವಿಷಯದಲ್ಲಿ, 30 ನಿಮಿಷಗಳಿಂದ* 4 ಗಂಟೆಗಳವರೆಗೆ ಅಪ್ರೂವ್ಡ್ ಸಾಲ ಮೊತ್ತವನ್ನು ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪಡೆಯಬಹುದು.
ಅತ್ಯಂತ ಕಡಿಮೆ ಕಾಗದಪತ್ರ
ಕಾಗದಪತ್ರದ ವಿಷಯದಲ್ಲಿ ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್‌ಗೆ ಏನೂ ಬೇಕಿರುವುದಿಲ್ಲ. ಏಕೆಂದರೆ, ಸಾಲದಾತರು ಈಗಾಗಲೇ ಸಾಲಗಾರರ ಸಾಲ ಅರ್ಹತೆಯನ್ನು ವಿಶ್ಲೇಷಣೆ ಮಾಡಿರುತ್ತಾರೆ. ಬಜಾಜ್ ಫೈನಾನ್ಸ್‌ನ ಕೆಲವು ಗ್ರಾಹಕರು ಯಾವುದೇ ಕಾಗದಪತ್ರವನ್ನು ಸಲ್ಲಿಸುವ ಅಗತ್ಯವೇ ಇರುವುದಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ, ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್‌ಗಳು ಮತ್ತು ಗುರುತಿನ ದಾಖಲೆಯಂತಹ ಕೆಲವು ದಾಖಲೆಗಳನ್ನು ಹಂಚಿಕೊಳ್ಳಬೇಕಾಗಬಹುದು. ಈ ಪ್ರಕ್ರಿಯೆ ಸಾಮಾನ್ಯವಾಗಿ ನೇರವಾಗಿರುತ್ತದೆ. ಏಕೆಂದರೆ, ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.
ನಿಮ್ಮ ತುರ್ತು ಹಣಕಾಸು ಅಗತ್ಯಗಳಿಗಾಗಿ ಉಪಯುಕ್ತ ಮತ್ತು ತಕ್ಷಣದ ಹಣದ ಆಯ್ಕೆಯಾಗಿ ಪ್ರೀ ಅಪ್ರೂವ್ಡ್ ಪರ್ಸನಲ್ ಲೋನ್ ಅನ್ನು ನೀವು ಬಳಸಬಹುದು. ನಿಮ್ಮ ಬಜೆಟ್‌ಗೆ ಹೊಂದುವ ಸರಿಯಾದ ಸಾಲ ಮೊತ್ತವನ್ನು ಆಯ್ಕೆ ಮಾಡಲು ಇನ್‌ಸ್ಟಾ ಪರ್ಸನಲ್ ಲೋನ್ ಇಎಂಐ ಕ್ಯಾಲಕ್ಯುಲೇಟರ್ ಅನ್ನು ಕೂಡಾ ನೀವು ಬಳಸಬಹುದು. ನಿಮ್ಮ ಇಎಂಐ ಎಷ್ಟಿರುತ್ತದೆ ಎಂಬುದನ್ನು ನೋಡಲು ಸಾಲ ಮೊತ್ತ, ಅವಧಿ ಮತ್ತು ಬಡ್ಡಿದರದಂತಹ ಪ್ರಾಥಮಿಕ ವಿವರಗಳನ್ನು ಕೂಡಾ ನೀವು ನಮೂದಿಸಬಹುದು. ನೀವು ಮಾಸಿಕ ಪಾವತಿ ಮತ್ತು ಸಾಲ ಅವಧಿಯನ್ನು ಹೊಂದಿಸಿಕೊಂಡು, ನಿಮಗೆ ಹೊಂದುವ ಸಾಲ ಮೊತ್ತವನ್ನು ನಿಗದಿಸಿಕೊಳ್ಳಬಹುದು.
ಇಂದೇ ನಿಮ್ಮ ಪ್ರೀ ಅಪ್ರೂವ್ಡ್ ಆಫರ್ ಪರಿಶೀಲಿಸಲು ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದು ಆಯ್ದ ಗ್ರಾಹಕರಿಗೆ ಅನ್ವಯಿಸುತ್ತದೆ.
English summary
Here is the more information about How to get pre-approved personal loan in just 30 minutes..?