Tamil
oi-Muralidhar S
ಚಿತ್ರರಂಗದಲ್ಲಿ
ಮಹಿಳಾ
ಕಲಾವಿದರ
ಮೇಲೆ
ದೌಜನ್ಯ
ನಡೆಯುತ್ತಿದೆ
ಅನ್ನೋ
ಮಾತು
ಹಲವು
ದಿನಗಳಿಂದಲೂ
ಕೇಳಿ
ಬರುತ್ತಿದೆ.
ಸಿನಿಮಾದಲ್ಲಿ
ಕೆಲಸ
ಮಾಡುವ
ಮಹಿಳಾ
ಕಲಾವಿದರನ್ನು
ಮಾನಸಿಕವಾಗಿ
ಹಾಗೂ
ಲೈಂಗಿಕವಾಗಿ
ಕಿರುಕುಳ
ನೀಡಲಾಗುತ್ತಿದೆ
ಎಂಬ
ಆರೋಪವಿದೆ.
ಇತ್ತೀಚೆಗೆ
‘ಮೀಟೂ’
ಅಭಿಯಾನ
ಆರಂಭ
ಆದಾಗ
ನಟಿಯರು,
ಗಾಯಕಿಯರು
ಸೇರಿದಂತೆ
ಹಲವರು
ಗಂಭೀರ
ಆರೋಪ
ಮಾಡಿದ್ದರು.
ಇದು
ಇಡೀ
ದೇಶಾದ್ಯಂತ
ದೊಡ್ಡ
ಸಂಚಲವನ್ನೇ
ಸೃಷ್ಟಿಸಿತ್ತು.
ಆ
ವೇಳೆ
ಕೊಂಚ
ಮಟ್ಟಿಗೆ
ಸುಧಾರಣೆಯಾಗಬಹುದು
ಎಂದು
ನಿರೀಕ್ಷೆ
ಮಾಡಲಾಗಿತ್ತು.
ಆದರೂ,
ಸರಿಹೋದಂತೆ
ಕಾಣುತ್ತಿಲ್ಲ.
ಈಗ
ಮತ್ತೊಬ್ಬ
ನಟಿ
ಚಿತ್ರರಂಗದಲ್ಲಿರುವ
ಅಡ್ಜಸ್ಟ್‌ಮೆಂಟ್
ಬಗ್ಗೆ
ಬಾಯ್ಬಿಟ್ಟಿದ್ದಾರೆ.
“ಚಿತ್ರರಂಗದಲ್ಲಿ
ಅಡ್ಜೆಸ್ಟ್‌ಮೆಂಟ್
ಮಾಡಿಕೊಂಡಿದ್ದರೆ,
ದಳಪತಿ
ವಿಜಯ್
ಹಾಗೂ
ಪ್ರಶಾಂತ್‌ಗೆ
ನಾಯಕಿಯಾಗಬಹುದಿತ್ತು”
ಎಂದು
ಬಾಲಾಂಬಿಕ
ಎಂಬ
ಶಾಕಿಂಗ್
ಹೇಳಿಕೆ
ಕೊಟ್ಟಿದ್ದಾರೆ.
ತಮಿಳುನಾಡಿನಾದ್ಯಂತ
ಈ
ಹೇಳಿಕೆ
ವೈರಲ್
ಆಗುತ್ತಿದೆ.
ದಳಪತಿ
ವಿಜಯ್
68ನೇ
ಸಿನಿಮಾಗೆ
ವೆಂಕಟ್
ಪ್ರಭು
ಆಕ್ಷನ್
ಕಟ್:
“ಸುದೀಪ್
ಮನೆಗೆ
ಬಂದೋಗಿದ್ದೇಕೆ?”
ನೆಟ್ಟಿಗರ
ಪ್ರಶ್ನೆ
ತಮಿಳುನಟಿಯ
ಓಪನ್
ಟಾಕ್
ಚಿತ್ರರಂಗದಲ್ಲಿ
ನಟಿಯರು
ತಮ್ಮ
ಮೇಲಾಗುತ್ತಿರುವ
ದೌರ್ಜನ್ಯದ
ಬಗ್ಗೆ
ಮಾತಾಡೋದು
ತೀರಾ
ಅಪರೂಪ.
ಮೀಟೂ
ಬಳಿಕ
ಮುಕ್ತವಾಗಿ
ಮಾತಾಡುವ
ಧೈರ್ಯ
ಮಾಡುತ್ತಿದ್ದಾರೆ.
ಹಾಗೇ
ಮಾತಾಡಿದವರು
ಈಗ
ಕೆಲಸ
ಸಿಗುತ್ತಿಲ್ಲ
ಅಂತ
ಬೇಸರವನ್ನೂ
ವ್ಯಕ್ತಪಡಿಸುತ್ತಿದ್ದಾರೆ.
ಸ್ಟಾರ್
ನಟಿಯರೇ
ತಮಗಾದ
ಕಹಿ
ಅನುಭವನ್ನು
ಹಂಚಿಕೊಳ್ಳುತ್ತಲೇ
ಇದ್ದಾರೆ.
ಈಗ
ಅವಕಾಶ
ವಂಚಿತ
ನಟಿ
ಬಾಲಾಂಬಿಕೆ
ಕೂಡ
ಅದೇ
ಆರೋಪ
ಮಾಡಿದ್ದಾರೆ.
ಬಾಲಾಂಬಿಕೆ
ಯಾರು?
ವಿಜಯ್
ಹಾಗೂ
ಪ್ರಶಾಂತ್
ಸಿನಿಮಾಗಳಿಗೆ
ನಾಯಕಿಯಾಗಬಹುದಿತ್ತು
ಅಂತ
ಹೇಳಿಕೆ
ನೀಡುವ
ಮೂಲಕ
ಸಂಚಲನ
ಸೃಷ್ಟಿಸಿರೋ
ಬಾಲಾಂಬಿಕೆ
ಯಾರು?
ಈ
ಪ್ರಶ್ನೆಗೆ
ಉತ್ತರ
ಇಲ್ಲಿದೆ.
ಜನಪ್ರಿಯರ
ನಿರ್ದೇಶಕ
ಕೆ.ಎಸ್.ಗೋಪಾಲಕೃಷ್ಣನ್
ಬಳಿ
ಸಹಾಯಕರಾಗಿದ್ದ
ರಾಮಸ್ವಾಮಿ
ಎಂಬುವವರ
ಪುತ್ರಿ
ಬಾಲಾಂಬಿಕಾ.
ತಂದೆಗೆ
ಮಗಳನ್ನು
ಹೇಗಾದರೂ
ಮಾಡಿ
ದೊಡ್ಡ
ಹೀರೊಯಿನ್
ಮಾಡಬೇಕೆಂಬ
ಆಸೆ.
1990ರಲ್ಲಿ
ಮುರಳಿ
ನಾಯಕನಾಗಿ
ನಟಿಸಿದ್ದ
‘ಪಾಲಂ’
ಸಿನಿಮಾದಲ್ಲಿ
ತಂಗಿಯ
ಪಾತ್ರ
ಸಿಕ್ಕಿತ್ತು.
ಹಾಗೇ
‘ನಾಡಿಗನ್’,
‘ಪಾಟುಕ್ಕು
ಒರು
ತಲೈವನ್’
ಅಂತಹ
ಸಿನಿಮಾಗಳಲ್ಲೂ
ತಂಗಿಯಾಗಿಯೇ
ನಟಿಸಿದ್ದರು.
ನಟಿಗೆ
ಅವಕಾಶ
ಸಿಗಲಿಲ್ಲ
ತಂಗಿಯಾಗಿ
ನಟಿಸಿದ್ದ
ಬಾಲಾಂಬಿಕಾ
ಐದು
ಸಿನಿಮಾಗಳಲ್ಲಿ
ನಾಯಕಿಯಾಗಿ
ನಟಿಸಿದ್ದರು.
ಅವಕಾಶಗಳು
ಕಡಿಮೆ
ಆದಾಗ
ಧಾರಾವಾಹಿಗಳ
ಕಡೆಗೆ
ಮುಖ
ಮಾಡಿದ್ದಾರೆ.
ಇತ್ತೀಚೆಗೆ
ಬಾಲಾಂಬಿಕಾ
ನೀಡಿದ
ಸಂದರ್ಶನದಲ್ಲಿ
“ಅಡ್ಜೆಸ್ಟ್‌ಮೆಂಟ್
ಮಾಡಿಕೊಂಡಿದ್ದರೆ,
ದಳಪತಿ
ವಿಜಯ್,
ಪ್ರಶಾಂತ್
ಸೇರಿದಂತೆ
ಹಲವರ
ಜೊತೆ
ನಾಯಕಿಯಾಗಿ
ನಟಿಸಬಹುದಿತ್ತು.
ಆದರೆ,
ಒಪ್ಪಲಿಲ್ಲ.
ಅಂದು
ವಿಜಯ್
ಜೊತೆ
ನಟಿಸಿದ್ದರೆ,
ನನ್ನ
ಬದುಕೇ
ಬದಲಾಗುತ್ತಿತ್ತು”
ಎಂದಿದ್ದಾರೆ
ಬಾಲಾಂಬಿಕಾ.
ಸತ್ಯರಾಜ್
ಸಹಾಯ
ಒಂದು
ಕಾಲದಲ್ಲಿ
ಬಾಲಾಂಬಿಕಾ
ಸಂಪಾದನೆ
ಉತ್ತಮವಾಗಿಯೇ
ಇತ್ತು.
ಆದರೆ,
ಸ್ವಲ್ಪ
ದೂರ
ಸರಿಯುತ್ತಿದ್ದಂತೆ
ಎಲ್ಲವೂ
ತಲೆಕೆಳಗಾಯ್ತು.
ದಾಂಪತ್ಯ
ಬದುಕೂ
ಚೆನ್ನಾಗಿಲ್ಲ.
ಕುಡುಕ
ಗಂಡನಿಂದ
ದೂರವೇ
ಇದ್ದಾರೆ.
ಕೊರೊನಾ
ಸಮಯದಲ್ಲಿ
ಸಂಕಷ್ಟಕ್ಕೆ
ಸಿಲುಕಿದ್ದರು.
ಆ
ಬಳಿಕ
ಸತ್ಯರಾಜ್
ಅವರನ್ನು
ಸಹಾಯ
ಕೇಳಿದ್ದರು.
ಆ
ವೇಳೆ
ಸತ್ಯರಾಜ್
ಈಕೆಯನ್ನು
ಮನೆಗೆ
ಕರೆಸಿ
20
ಸಾವಿರ
ನೀಡಿದ್ದರು
ಎಂದಿದ್ದಾರೆ.
English summary
Tamil actress Balambika said if she agreed to adjustment may act as heroine for Thalapathy Vijay and Prasanth, know more.
Sunday, June 18, 2023, 16:03
Story first published: Sunday, June 18, 2023, 16:03 [IST]