Last Updated:
ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಮತ್ತೆ ಒಂದಾಗಿದ್ದಾರೆ. ಹೀಗೆ ಒಂದಾದರೆ ನಾವು ಹಿಟ್ ಅಂತಲೂ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಇವರ ಕ್ರೇಜಿ ಬ್ರಹ್ಮ ಕಾನ್ಸರ್ಟ್ ಬಗ್ಗೆ ಸ್ವತಃ ರವಿಚಂದ್ರನ್ ಸಾಕಷ್ಟು ಮಾತನಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಒಂದು ಮಾತು ಹೇಳಿದ್ದಾರೆ. ಹಂಸಲೇಖ (Hamsalekha) ಮತ್ತು ನಾನು ಬಂದ್ರೆ ಆಯಿತು. ಹಿಟ್ ಗ್ಯಾರಂಟಿನೇ ಬಿಡಿ. ನಮ್ಮ ಜೋಡಿಯ ಹಾಡುಗಳನ್ನ ಜನ ಮೆಚ್ಚಿದ್ದಾರೆ. ಇಷ್ಟು ವರ್ಷ ಆದ್ಮೇಲೂ ಇವುಗಳನ್ನ ಕೇಳ್ತಾರೆ. ನಾವು ಮಾಡಿರೋ ಹಾಡುಗಳ (Songs) ರೀತಿ ಯಾರೂ ಮಾಡಲೇ ಇಲ್ಲ. ನಮಗೆ ಹೊಸದನ್ನ ಮಾಡ್ಬೇಕು ಅನ್ನುವ ಹುಚ್ಚಿತ್ತು. ಆ ಹುಚ್ಚಿನಲ್ಲಿಯೇ ಕೆಲಸ ಮಾಡಿದ್ದೇವೆ. ಪ್ರೇಮಲೋಕದಿಂದ ಹಿಡಿದು ಏಕಾಂಗಿ ವರೆಗಿನ ಜರ್ನಿ ಅದ್ಭುತವಾಗಿದೆ. ಆದರೆ, ನಮ್ಮ ಈ ಕಾನ್ಸರ್ಟ್ (Concert) ಅಲ್ಲಿ ಕೇವಲ ಹಾಡುಗಳೇ ಇರೋದಿಲ್ಲ. ಒಂದು ಹಾಡು ಹೇಗೆಲ್ಲ ಆಯಿತು. ಆ ಹಾಡಿನ ಹಿಂದಿನ ರೋಚಕ ಕತೆ ಏನು ಅನ್ನೋದನ್ನ ಹಂಚಿಕೊಳ್ಳುತ್ತೇವೆ. ನಾನು ನಿಮ್ಮನ್ನ ಬನ್ನಿ ಅಂತ ಕರೆಯೋದಿಲ್ಲ. ನೀವು ಬರ್ತೀರಾ ಅಂತ ನಂಬಿದ್ದೇನೆ ಅಂತಲೆ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ನಾನು ಕರೆಯೋದಿಲ್ಲ..
ಆ ರೀತಿಯ ಹಾಡುಗಳನ್ನ ಈಗ ಯಾರೂ ಮಾಡೋಕೆ ಆಗೋದೇ ಇಲ್ಲ. ಆದರೆ, ಒಂದು ಹುಚ್ಚಿನಲ್ಲಿಯೇ ಹಂಸಲೇಖ ಮತ್ತು ರವಿಚಂದ್ರನ್ ಹಾಡುಗಳನ್ನ ಮಾಡಿದ್ದಾರೆ.
ರವಿಚಂದ್ರನ್ ಈ ಮಾತು ಹೇಳಿಕೊಂಡಿದ್ದಾರೆ. ನಾವು ಒಟ್ಟಿಗೆ ಬಂದರೆ ಹಿಟ್ ಗ್ಯಾರಂಟಿ ನೋಡಿ. ಇದು ನನಗೆ ಅರ್ಥ ಆಗಿದೆ. ಇದೀಗ ನಮ್ಮ 16 ವರ್ಷದ ಜರ್ನಿಯನ್ನ ಹಂಚಿಕೊಳ್ಳಲು ಒಟ್ಟಿಗೆ ಬರ್ತಿದ್ದೇವೆ.
ನಮ್ಮ ಈ ಜರ್ನಿಯಲ್ಲಿ ಒಳ್ಳೆ ಹಾಡುಗಳನ್ನ ಕೊಟ್ಟಿದ್ದೇವೆ. ಈ ಹಾಡುಗಳನ್ನ ಈ ಕಾನ್ಸರ್ಟ್ ಅಲ್ಲಿ ಕೇಳಬಹುದು. ಆದರೆ, ಈ ಹಾಡುಗಳ ನಡುವೆ ನಮ್ಮಿಬ್ಬರ ಅನುಭವದ ಮಾತುಗಳು ಇರುತ್ತವೆ.
ನಮ್ಮ ನಡುವೆ ಕೋಪ ಇತ್ತು. ಆದರೆ, ನಾವು ತೋರಿಸಿಕೊಳ್ಳಲಿಲ್ಲ. ಇಬ್ಬರಿಗೂ ಆ ಧೈರ್ಯ ಇರಲಿಲ್ಲ. ಕಾರಣ, ಇಬ್ಬರಲ್ಲಿದ್ದ ಆ ಸ್ನೇಹ ಇದನ್ನ ಮಾಡೋಕೆ ಬಿಡಲಿಲ್ಲ.
ನಾವು ಜಗಳ ಆಡಿಲ್ಲ. ಕೋಪವನ್ನು ತೋರಿಸಿಲ್ಲ. ನಮ್ಮ ಜರ್ನಿಯಲ್ಲಿ ಎಲ್ಲವನ್ನೂ ನೋಡಿದ್ದೇವೆ. ಆದರೆ, ನಮ್ಮ ಸಂಗೀತ ಇಂಡಸ್ಟ್ರಿಗೆ ಒಂದು ಪಾಠವೇ ಆಗಿದೆ ಅಂತಲೂ ರವಿಚಂದ್ರನ್ ಹೇಳಿಕೊಂಡಿದ್ದಾರೆ.
ನಾವು ಬಂದರೆ ಹಿಟ್ ಪಕ್ಕಾ ನೋಡಿ
ನಾನು ನಿಮ್ಮನ್ನ ಕರೆಯೋದಿಲ್ಲ. ಆದರೆ, ನೀವು ಬರ್ತೀರಿ ಅಂತ ನಂಬಿದ್ದೇನೆ ಅಂತಲೇ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಕ್ರೇಜಿ ಬ್ರಹ್ಮ ಕಾನ್ಸರ್ಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್ ಅಲ್ಲಿಯೇ ರವಿಚಂದ್ರನ್ ಈ ವಿಷಯ ಹೇಳಿಕೊಂಡಿದ್ದಾರೆ.
ಇದನ್ನ ಹೇಳುವಾಗ ಪಕ್ಕದಲ್ಲಿ ಹಂಸಲೇಖ ಅವರೂ ಇದ್ದರು. ಇವರ ಜೋಡಿಯ ಈ ಒಂದು ಕಾನ್ಸರ್ಟ್ ಈ ತಿಂಗಳ ಮೇ-30 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಕ್ರೇಜಿ ಬ್ರಹ್ಮ ಕಾನ್ಸರ್ಟ್ ಬೆಂಗಳೂರಿನ ಜೆ.ಕೆ.ಗ್ರ್ಯಾಂಡ್ ಅರೆನಾ ರೆಸಾರ್ಟ್ ಅಲ್ಲಿಯೇ ಪ್ಲಾನ್ ಆಗಿದೆ. ಮೇ-30 ರಂದು ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ರವಿಚಂದ್ರನ್ ಮತ್ತು ಹಂಸಲೇಖ ಅವರ ಹಾಡುಗಳ ಗಾಯನ ಇರುತ್ತದೆ. ಇದರೊಟ್ಟಿಗೆ ಹಂಸಲೇಖ ಹಾಗೂ ರವಿಚಂದ್ರನ್ ಅವರ ಅನುಭವದ ಮಾತುಗಳೂ ಇರುತ್ತವೆ. ಡ್ಯಾನ್ಸ್ ಕೂಡ ಇರುತ್ತವೆ ಅಂತ ಹೇಳಬಹುದು.
Bangalore [Bangalore],Bangalore,Karnataka













