France Riots: ಹೊತ್ತಿ ಉರಿಯುತ್ತಿದೆ ಫ್ರಾನ್ಸ್, ಸಿಕ್ಕಸಿಕ್ಕಲ್ಲಿ ದೊಂಬಿ, ಗಲಭೆ, ಲೂಟಿ, ಕಂಡಕಂಡಲ್ಲಿ ಬೆಂಕಿ- ಕಾರಣ ಗೊತ್ತೇ? | France Riots: Why is country burning? Violence spread beyond Paris- Here’s what led to unrest

International

oi-Ravindra Gangal

|

Google Oneindia Kannada News

ಪ್ಯಾರಿಸ್‌, ಜುಲೈ 01: ಗಲಭೆ, ಪ್ರತಿಭಟನೆ ಮತ್ತು ಲೂಟಿ ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳು ಫ್ರಾನ್ಸ್‌ನಾದ್ಯಂತ ಸಂಭವಿಸುತ್ತಿವೆ. ಜನರು ಬೀದಿಗಿಳಿದು ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ದೃಶ್ಯಗಳು ನೋಡುವುದಕ್ಕೇ ಭಯಾನಕವಾಗಿವೆ. ಉದ್ರಿಕ್ತರ ಗುಂಪು ನಾಲ್ಕನೇ ದಿನವೂ ಲೂಟಿಗಿಳಿದಿದೆ.

ಪೊಲೀಸರೊಂದಿಗೆ ಬಡಿದಾಟ, ಅಂಗಡಿ, ಶಾಪಿಂಗ್‌ ಮಾಲ್‌ಗಳಿಗೆ ಬೆಂಕಿ ಹಚ್ಚುವುದು ಸರ್ವೇಸಾಮಾನ್ಯವಾಗಿದೆ. ಪ್ರೇಮನಗರಿ ಪ್ಯಾರಿಸ್‌ನಲ್ಲಿ ಅಶಾಂತಿ ಹರಡಿಕೊಂಡಿದೆ. ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ. ಪ್ರತಿದಿನ ಪರಿಸ್ಥಿತಿ ಹದಗೆಡುತ್ತಲೇ ಇದೆ. ಇದು ಈಗಿನ ಫ್ರಾನ್ಸ್‌ ಪರಿಸ್ಥಿತಿ.

France Riots: Why is country burning? Violence spread beyond Paris- Here’s what led to unrest

ಮಾಧ್ಯಮ ವರದಿಗಳ ಪ್ರಕಾರ, ಪ್ರತಿಭಟನೆಗಳು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಡಳಿತದ ವಿರುದ್ಧ ನಡೆಯುತ್ತಿದೆ. ಇದು ಹೊಸ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಮ್ಯಾಕ್ರನ್ ಅವರು ಮಂತ್ರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ಹಾಗಾದರೆ, ಫ್ರಾನ್ಸ್‌ನಲ್ಲಿ ಅಶಾಂತಿಗೆ ಕಾರಣವೇನು? ಇದು ವರ್ಣಭೇದ ನೀತಿಯ ಪರಿಣಾಮವೇ ಅಥವಾ ಪೊಲೀಸ್ ದೌರ್ಜನ್ಯವೇ ಫಲಿತಾಂಶವೇ? ಎಂಬುದರ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

France Riots: Why is country burning? Violence spread beyond Paris- Here’s what led to unrest

ಫ್ರಾನ್ಸ್‌ ಅಶಾಂತಿಗೆ ಕಾರಣವಾದ ಘಟನೆ ಯಾವುದು?

ಪ್ಯಾರಿಸ್ ಬಳಿ ನಹೆಲ್ ಎಂಬ 17 ವರ್ಷದ ಯುವಕನ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ. ಮಂಗಳವಾರ ಬೆಳಗ್ಗೆ ನೆಲ್ಸನ್ ಮಂಡೇಲಾ ಸ್ಕ್ವೇರ್ ಬಳಿಯ ಟ್ರಾಫಿಕ್ ಸ್ಟಾಪ್‌ನಲ್ಲಿ ನಹೆಲ್ ಕಾರನ್ನು ಓಡಿಸುತ್ತಿದ್ದಾಗ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್‌ ಅಧಿಕಾರಿ ಹಾರಿಸಿದ ಗುಂಡಿನ ದಾಳಿಯಲ್ಲಿ ನಹೆಲ್‌ ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಆತನನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಆದರೂ, ಆತ ಕೊನೆಯುಸಿರು ಎಳೆದಿದ್ದಾನೆ.

France Riots: Why is country burning? Violence spread beyond Paris- Here’s what led to unrest

ಮುಸ್ಲಿಂ ಸಮುದಾಯದಕ್ಕೆ ಸೇರಿರುವ ನಹೆಲ್‌ನ ಧರ್ಮವೇ ಆತನ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶಗೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪೊಲೀಸ್ ತಾರತಮ್ಯದ ಬಗ್ಗೆ ಆತನ ಹತ್ಯೆ ತಿಳಿಸಿಕೊಡುತ್ತದೆ ಎಂದು ಹೇಳುತ್ತಿದ್ದಾರೆ.

ಯುಎಸ್‌ನಲ್ಲಿ ಕಪ್ಪು ಸಮುದಾಯಕ್ಕೆ ಸೇರಿರುವ ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ನಹೆಲ್‌ ಹತ್ಯೆಗೆ ಹೋಲಿಸಲಾಗಿದೆ. ವ್ಯವಸ್ಥಿತ ವರ್ಣಭೇದ ನೀತಿ ಮತ್ತು ಪೊಲೀಸ್ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಉದ್ರಿಕ್ತರು ಹೇಳಿಕೆ ನೀಡಿದ್ದಾರೆ.

ಟ್ರಾಫಿಕ್ ನಿಲ್ದಾಣದಲ್ಲಿ ನಿಖರವಾಗಿ ಏನಾಯಿತು?

ಹೊರವಲಯದಲ್ಲಿ ಬೆಳಿಗ್ಗೆ 7:55 ಕ್ಕೆ ಬಸ್ ಲೇನ್‌ನಲ್ಲಿ ನೆಹಾಲ್ ಯದ್ವಾತದ್ವಾ ಮರ್ಸಿಡಿಸ್ ಕಾರನ್ನು ಅನ್ನು ಓಡಿಸುತ್ತಿರುವುದನ್ನು ಫ್ರೆಂಚ್ ಪೊಲೀಸರು ಗುರುತಿಸಿದ್ದಾರೆ. ಅವರು ಸೈರನ್ ಮತ್ತು ಲೈಟ್‌ಗಳ ಸಹಾಯದಿಂದ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ನೆಹಾಲ್‌ ಪಾದಚಾರಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾನೆಂದು ಭಾವಿಸಿ ಪೊಲೀಸ್‌ ಅಧಿಕಾರಿ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲಿ ನೆಹಲ್ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ.

France Riots: Why is country burning? Violence spread beyond Paris- Here’s what led to unrest

ನೆಹಲ್‌ ಸಾವಿನ ಬಳಿಕ ಭುಗಿಲೆದ್ದ ಹಿಂಸಾಚಾರ

ನೆಹಲ್‌ ಸಾವಿನ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ. ಮಾರ್ಸಿಲ್ಲೆ, ಲಿಯಾನ್, ಟೌಲೌಸ್, ಸ್ಟ್ರಾಸ್‌ಬರ್ಗ್, ಲಿಲ್ಲೆ ಮತ್ತು ಪ್ಯಾರಿಸ್‌ನಂತಹ ನಗರಗಳಿಗೆ ಹಿಂಸಾಚಾರ ಹರಡಿದೆ. ಶನಿವಾರ ಸುಮಾರು 45,000 ಪೊಲೀಸ್ ಅಧಿಕಾರಿಗಳು ಮತ್ತು ಕೆಲವು ಶಸ್ತ್ರಸಜ್ಜಿತ ವಾಹನಗಳನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ.

ಶುಕ್ರವಾರ 270 ಜನರನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಬಹಿರಂಗಪಡಿಸಿದ್ದಾರೆ. ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಒಟ್ಟು 1,100 ಕ್ಕಿಂತ ಹೆಚ್ಚು ಜನರ ಬಂಧನವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಾರ್ಸಿಲ್ಲೆ ಮೇಯರ್ ಬೆನೈಟ್ ಪಯಾನ್ ಅವರು ಹೆಚ್ಚುವರಿ ಪಡೆಗಳನ್ನು ತಕ್ಷಣವೇ ಕಳುಹಿಸಲು ಸರ್ಕಾರಕ್ಕೆ ಕರೆ ನೀಡಿದ್ದಾರೆ.

English summary

France Riots: A number of violent incidents including riots, protests and looting are occurring across France. Know the reason for this.

Story first published: Saturday, July 1, 2023, 14:13 [IST]

Source link