ಉತ್ತರಾಖಾಂಡ್​​ ಟು ಬೆಂಗಳೂರು ಟು ಪ್ಯಾರಿಸ್; ಸೋತು ಗೆದ್ದ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ರೋಚಕ ಹಾದಿ

ವಿಶ್ವ ಚಾಂಪಿಯನ್​ಶಿಪ್​-ಬೆಳ್ಳಿ, ಥಾಮಸ್ ಕಪ್-ಚಿನ್ನ, ಕಾಮನ್​ವೆಲ್ತ್​ ಗೇಮ್ಸ್- ಚಿನ್ನ ಮತ್ತು ಬೆಳ್ಳಿ, ಏಷ್ಯನ್ ಗೇಮ್ಸ್- ಬೆಳ್ಳಿ, ಏಷ್ಯಾ ಜ್ಯೂನಿಯರ್ ಚಾಂಪಿಯನ್​ಶಿಪ್​-ಚಿನ್ನ, ಯೂತ್ ಒಲಿಂಪಿಕ್ಸ್ ಗೇಮ್ಸ್–ಚಿನ್ನ. ಕಳೆದ 12 ವರ್ಷಗಳಲ್ಲಿ ಲಕ್ಷ್ಯ ಸೇನ್ ಮೂಡಿಸಿದ ಹೆಜ್ಜೆ ಗುರುತುಗಳಿವು. ಈಗ ಒಲಿಂಪಿಕ್ಸ್ ಸೆಮಿಫೈನಲ್​​ನಲ್ಲೂ ಪದಕದ ಭರವಸೆ ಮೂಡಿಸಿದ್ದರು. ಅದೀಗ ಕನಸಾಗಿಯೇ ಉಳಿದುಕೊಂಡಿತು. ಒಲಿಂಪಿಕ್ಸ್​ ಇತಿಹಾಸದಲ್ಲಿ ಭಾರತದ ಪುರುಷ ಬ್ಯಾಡ್ಮಿಂಟನ್​ವೊಬ್ಬರು ಸೆಮೀಸ್​ಗೇರಿದ್ದೇ ದೊಡ್ಡ ಸಾಧನೆ.

Source link