ಬ್ಯಾಡ್ಮಿಂಟನ್ ಜೋಡಿಗೆ ಅಚ್ಚರಿಯ ಸೋಲು
ಗ್ರೂಪ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಸ್ಟಾರ್ ಜೋಡಿಯಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕ್ವಾರ್ಟರ್ ಫೈನಲ್ನಲ್ಲಿ ಅಚ್ಚರಿಯ ಸೋಲು ಕಂಡಿದ್ದಾರೆ. ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ಅವರ ವಿರುದ್ಧ 21-13, 14-21, 16-21 ಸೆಟ್ಗಳ ಅಂತರದಿಂದ ಸೋತು ಅಭಿಯಾನ ಅಂತ್ಯಗೊಳಿಸಿದ್ದಾರೆ. ಮೊದಲ ಸೆಟ್ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತದ ಜೋಡಿ, ಆ ನಂತರದ ಎರಡು ಸೆಟ್ಗಳಲ್ಲೂ ಮುಗ್ಗರಿಸಿದರು. ಖಡಕ್ ಹೊಡೆತಗಳೊಂದಿಗೆ ಅಮೋಘ ಆಟ ಪ್ರದರ್ಶಿಸಿದ ಮಲೇಷ್ಯಾ ಮುಂದಿನ ಹಂತ ಪ್ರವೇಶಿಸಿತು.