ಪಿಎಂಎವೈ ಫಲಾನುಭವಿಗಳಿಗೆ ಫ್ಲ್ಯಾಟ್‌ ಹಸ್ತಾಂತರಿಸಿದ ಸಿಎಂ ಯೋಗಿ ಆದಿತ್ಯನಾಥ್‌ | CM Yogi Adityanath hands over flats to PMAY beneficiaries

India

oi-Punith BU

|

Google Oneindia Kannada News

ಲಕ್ನೋ, ಜೂನ್ 30: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್‌ನಲ್ಲಿ ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹಮದ್‌ನಿಂದ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ 76 ಕೈಗೆಟುಕುವ ವಸತಿ ಘಟಕಗಳ ಫಲಾನುಭವಿಗಳಿಗೆ ಶುಕ್ರವಾರ ಕೀಗಳನ್ನು ಹಸ್ತಾಂತರಿಸಿದರು.

ಫಲಾನುಭವಿಗಳಿಗೆ ಹಸ್ತಾಂತರಿಸಿದ ಫ್ಲ್ಯಾಟ್‌ಗಳ ಸ್ಥಳದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಡವರಿಗಾಗಿ ಇರುವ ಫ್ಲ್ಯಾಟ್‌ಗಳನ್ನೂ ಪರಿಶೀಲಿಸಿದರು. ಫಲಾನುಭವಿಯೊಬ್ಬರು ಎಎನ್‌ಐಗೆ “ಇದು ಅದ್ಭುತವಾಗಿದೆ. ನನಗೆ ನನ್ನ ಸ್ವಂತ ಮನೆ ಸಿಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಈಗ ಯಾರೂ ನನ್ನನ್ನು ಇಲ್ಲಿಂದ ಹೋಗುವಂತೆ ಹೇಳುವುದಿಲ್ಲ ಎಂದು ಹೇಳಿದರು.

CM Yogi Adityanath

ಫಲಾನುಭವಿಗಳಿಗೆ 41 ಚದರ ಮೀಟರ್‌ನಲ್ಲಿ ನಿರ್ಮಿಸಲಾದ ಫ್ಲ್ಯಾಟ್ ಕೇವಲ 3.5 ಲಕ್ಷ ರೂ. ಎರಡು ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯದ ಸೌಲಭ್ಯವಿರುವ ಫ್ಲ್ಯಾಟ್‌ಗೆ 6 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕೊಲೆಯಾದ ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಅವರಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಬಡವರಿಗಾಗಿ ನಿರ್ಮಿಸಲಾದ 76 ಫ್ಲ್ಯಾಟ್‌ಗಳನ್ನು ಜೂನ್ 9 ರಂದು ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ.

ಅಲಹಾಬಾದ್ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಹಂಚಿಕೆಗಾಗಿ ಲಾಟರಿ ಡ್ರಾ ಮಾಡಲಾಗಿದೆ. 6,030 ಅರ್ಜಿದಾರರ ಪರಿಶೀಲನೆಯ ನಂತರ, 1,590 ಲಾಟರಿಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರದ (ಪಿಡಿಎ) ಉಪಾಧ್ಯಕ್ಷ ಅರವಿಂದ್ ಕುಮಾರ್ ಚೌಹಾಣ್ ಹೇಳಿದ್ದಾರೆ.

ಬಿಜೆಪಿ ಆಡಳಿತದಲ್ಲಿ ಕಬ್ಬು ಬೆಳೆದ ರೈತರಿಗೆ ಬೆಂಬಲ- ಯೋಗಿ ಆದಿತ್ಯನಾಥ್ ಹೆಮ್ಮೆಬಿಜೆಪಿ ಆಡಳಿತದಲ್ಲಿ ಕಬ್ಬು ಬೆಳೆದ ರೈತರಿಗೆ ಬೆಂಬಲ- ಯೋಗಿ ಆದಿತ್ಯನಾಥ್ ಹೆಮ್ಮೆ

ಸಿಎಂ ಯೋಗಿ ಅವರು ಡಿಸೆಂಬರ್ 26, 2021 ರಂದು ಪ್ರಯಾಗ್‌ರಾಜ್‌ನ ಲುಕರ್‌ಗಂಜ್ ಪ್ರದೇಶದಲ್ಲಿ ಅತೀಕ್ ಸ್ವಾಧೀನದಿಂದ ಮುಕ್ತವಾದ ನಂತರ 1,731 ಚದರ ಮೀಟರ್ ಭೂಮಿಯಲ್ಲಿ ಈ ಕೈಗೆಟುಕುವ ವಸತಿ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಈ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು (DUDA) ಕೈಗೆತ್ತಿಕೊಂಡಿದ್ದು, ಎರಡು ಬ್ಲಾಕ್‌ಗಳಲ್ಲಿ 76 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅತೀಕ್ ಅಹ್ಮದ್ 2005 ರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಅವರ ಹತ್ಯೆಯಲ್ಲಿ ಆರೋಪಿಯಾಗಿದ್ದರು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರ ಹತ್ಯೆಯಲ್ಲೂ ಆರೋಪಿಯಾಗಿದ್ದರು. ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಈ ವರ್ಷ ಏಪ್ರಿಲ್ 15 ರಂದು ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರಂತೆ ನಟಿಸಿದ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.

English summary

Uttar Pradesh Chief Minister Yogi Adityanath on Friday handed over keys to beneficiaries of 76 affordable housing units constructed under the Pradhan Mantri Awas Yojana (PMAY) on land acquired by slain gangster Atiq Ahmed in Prayagraj.

Story first published: Friday, June 30, 2023, 16:59 [IST]

Source link