Features
oi-Sunitha B
ಬಾಲಕನೊಬ್ಬ 40 ಅಡಿ ಎತ್ತರದ ಜಿಪ್ಲೈನ್ನಿಂದ ಕೆಳಗೆ ಬಿದ್ದಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಾಕ್ಸ್ ನ್ಯೂಸ್ ಪ್ರಕಾರ, ಜೂನ್ 25 ರಂದು ಮೆಕ್ಸಿಕೋದ ಮಾಂಟೆರ್ರಿಯಲ್ಲಿ ಈ ಘಟನೆ ನಡೆದಿದೆ. ಹುಡುಗನಿಗೆ ಹಾಕಲಾಗಿದ್ದ ಜಿಪ್ಲೈನ್ ಬೆಲ್ಟ್ ತುಂಡಾಗಿದ್ದರಿಂದ ಈ ದುರ್ಘಟನೆ ನಡೆದಿದೆ. ಆರು ವರ್ಷದ ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ.
ಮೆಕ್ಸಿಕೋದ ಮಾಂಟೆರ್ರಿಯ ಆಕರ್ಷಣೆಯ ಪಾರ್ಕ್ ಫಂಡಿಡೋರಾದ ಅಮೆಜಾನಿಯನ್ ಎಕ್ಸ್ಪೆಡಿಶನ್ನಲ್ಲಿ ಈ ಘಟನೆ ನಡೆದಿದೆ. ಇದೊಂದು ಮನೋರಂಜನಾ ಉದ್ಯನವನವಾಗಿದ್ದು ಇಲ್ಲಿದ್ದ 40 ಅಡಿ ಎತ್ತರದ ಜಿಪ್ಲೈನ್ನಲ್ಲಿ ಬಾಲಕ ಹೋಗುತ್ತಿದ್ದ. ಆದರೆ ಆತನ ಬಳಿಗೆ ಮತ್ತೊಬ್ಬ ಬರುತ್ತಾನೆ. ಇಬ್ಬರು ಜೊತೆಯಾಗಿ ಹೋಗುವಾಗ ಹುಡುಗನಿಗೆ ಹಾಕಲಾಗಿದ್ದ ಬೆಲ್ಟ್ ತುಂಡಾಗಿ ಬಾಲಕ ಕೆಳಗೆ ಬೀಳುತ್ತಾನೆ. ಕೆಳಗೆ ಇದ್ದ ಕೃತಕ ಕೊಳಕ್ಕೆ ಬಿದ್ದಿದ್ದಾನೆ.
ಸಮೀಪದಲ್ಲಿದ್ದ ಪ್ರವಾಸಿಗರೊಬ್ಬರು ಕೊಳಕ್ಕೆ ಹಾರಿ ಬಾಲಕನನ್ನು ರಕ್ಷಿಸಿದ್ದಾರೆ ಎಂದು ಅವರ ಕುಟುಂಬ ಫಾಕ್ಸ್ ನ್ಯೂಸ್ಗೆ ತಿಳಿಸಿದೆ. ಜಿಪ್ಲೈನ್ ಅನ್ನು ಉತ್ತಮವಾಗಿ ನಿಭಾಯಿಸದಿರಲು ಉದ್ಯಾನವನದ ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.
ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ಚೇತರಿಸಿಕೊಳ್ಳುತ್ತಿದ್ದಾನೆ, ಆದರೆ ಅವನು ಮಾನಸಿಕವಾಗಿ ಹಾನಿಗೊಳಗಾಗಿದ್ದಾನೆ ಮತ್ತು ಭಯಪಡುತ್ತಾನೆ ಎಂದು ಅವನ ಸಹೋದರ ಜೆ ಸೀಸರ್ ಸೌಸೆಡಾ ತಿಳಿಸಿದ್ದಾರೆ. ಘಟನೆಯ ನಂತರ ಪಾರ್ಕ್ನಲ್ಲಿ ಸವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಸರ್ಕಾರ ತನಿಖೆ ಆರಂಭಿಸಿದೆ.
ಈ ಹಿಂದೆ ಒಂಬತ್ತು ವರ್ಷದ ಬಾಲಕನೊಬ್ಬ ಜೋರ್ಬ್ ಚೆಂಡಿನಲ್ಲಿ ಸಿಲುಕಿ 20 ಅಡಿಗಳಷ್ಟು ನೆಲಕ್ಕೆ ಅಪ್ಪಳಿಸಿದ ವಾರಗಳ ನಂತರ ಇದು ಸಂಭವಿಸಿದೆ. ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ನ ಮರ್ಸಿಸೈಡ್ನಲ್ಲಿರುವ ವಿಕ್ಟೋರಿಯಾ ಪಾರ್ಕ್ನಲ್ಲಿರುವ ಸೌತ್ಪೋರ್ಟ್ ಆಹಾರ ಮತ್ತು ಪಾನೀಯ ಉತ್ಸವದಲ್ಲಿ ಈ ಘಟನೆ ನಡೆದಿದೆ.
ಹುಡುಗ ಗಾಳಿಯ ಹೊಡೆತಕ್ಕೆ ಸಿಲುಕಿದಾಗ ನೀರಿನ ಕೊಳದ ಮೇಲೆ ಗಾಳಿ ತುಂಬಿದ ಜೋರ್ಬ್ ಬಾಲ್ನಲ್ಲಿದ್ದನು. ಈ ವೇಳೆ ಒಂಬತ್ತು ವರ್ಷದ ಬಾಲಕನಿಗೆ ಅನೇಕ ಗಾಯಗಳಾಗಿವೆ, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಶಾರ್ಕ್ ಜೊತೆ ಸರಸ: ಮುಂದೇನಾಯ್ತು ನೋಡಿ ಭಯಾನಕ ವಿಡಿಯೋ….
ಕೈ ಕಚ್ಚಿದ ಶಾರ್ಕ್: ಭಯಾನಕ ವಿಡಿಯೋ ವೈರಲ್
ಶಾರ್ಕ್ವೊಂದು ವ್ಯಕ್ತಿಯ ಕೈ ಕಚ್ಚುವ ಹಾಗೂ ಆತನನ್ನು ನೀರಿನೊಳಗೆ ಎಳೆಯುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರೊಳಗಿನ ಪ್ರಪಂಚವು ನಿಜವಾಗಿಯೂ ತುಂಬಾ ನಿಗೂಢವಾಗಿದೆ. ಕೆಲವೊಮ್ಮೆ ಬೃಹತ್ ಜೀವಿಗಳು ನೀರಿನಿಂದ ಮೇಲೆ ಬಂದು ಮಾನವರ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲದೆ ಅವು ಏಕಾಏಕಿ ದಾಳಿ ಮಾಡಲು ಹಿಂಜರಿಯುವುದಿಲ್ಲ. ಅಂತಹ ಒಂದು ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೋಣಿಯಲ್ಲಿ ನಿಂತ ವ್ಯಕ್ತಿ ನೀರಿನಲ್ಲಿ ಕೈ ತೊಳೆಯುತ್ತಾನೆ. ಮತ್ತೆ ನೀರಿನಲ್ಲಿ ಕೈ ಇಡುತ್ತಾನೆ. ಈ ವೇಳೆ ಏಕಾಏಕಿ ಶಾರ್ಕ್ ಆತನ ಕೈ ಕಚ್ಚುತ್ತದೆ. ಕಚ್ಚುವುದು ಮಾತ್ರವಲ್ಲದೆ ಆತನನ್ನು ನೀರಿನೊಳಗೆ ಎಳೆಯುತ್ತದೆ. ಗಾಬರಿಗೊಂಡ ವ್ಯಕ್ತಿ ತಕ್ಷಣ ದೋಣಿಯೊಳಗೆ ಆಗಮಿಸುತ್ತಾನೆ. ಈ ದೃಶ್ಯವನ್ನು ದೋಣಿಯೊಳಗೆ ಇದ್ದ ಮತ್ತೊಬ್ಬ ವ್ಯಕ್ತಿ ಸೆರೆ ಹಿಡಿದಿದ್ದಾನೆ.
ಶಾರ್ಕ್ ತನ್ನ ಸ್ನೇಹಿತನನ್ನು ನೀರಿನೊಳಗೆ ಎಳೆಯುತ್ತಿದ್ದಂತೆ ವಿಡಿಯೋ ಮಾಡುವ ವ್ಯಕ್ತಿ ತನ್ನ ಸ್ನೇಹಿತನನ್ನು ಮೇಲಕ್ಕೆ ಬರುವಂತೆ ಕರೆಯುತ್ತಾನೆ. ಆತ ಮೇಲಕ್ಕೆ ಬರುತ್ತಿದ್ದಂತೆ ಶಾರ್ಕ್ ಕಣ್ಮರೆಯಾಗಿದೆ. ಈ ಶಾರ್ಕ್ ಆಸ್ಟ್ರೇಲಿಯಾದ ಆಳ ಸಮುದ್ರದಲ್ಲಿ ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
English summary
A horrifying video of a boy falling from a 40 feet high zipline has gone viral.
Story first published: Friday, June 30, 2023, 17:38 [IST]