Bollywood
oi-Muralidhar S
‘ಆದಿಪುರುಷ್’
ಸಿನಿಮಾ
ರಿಲೀಸ್
ಆಗುತ್ತಿದ್ದಂತೆ
ದೇಶಾದ್ಯಂತ
ಸಿನಿಮಾ
ವಿರುದ್ಧ
ಆಕ್ರೋಶ
ವ್ಯಕ್ತವಾಗುತ್ತಿದೆ.
ರಾವಣ
ಹಾಗೂ
ಹನುಮಂತನ
ಪಾತ್ರಗಳ
ಬಗ್ಗೆ
ಟೀಕಿಸುತ್ತಿದ್ದಾರೆ.
ಇನ್ನೊಂದು
ಕಡೆ
ಹನುಮಂತನ
ಡೈಲಾಗ್‌ಗಳನ್ನು
ಕೇಳಿ
ಪ್ರೇಕ್ಷಕರು
ವ್ಯಕ್ತಪಡಿಸುತ್ತಿದ್ದಾರೆ.
ದೇಶದ
ಮೂಲೆ
ಮೂಲೆಯಲ್ಲೂ
ಈ
ಸಿನಿಮಾಗೆ
ವಿರೋಧ
ವ್ಯಕ್ತವಾಗುತ್ತುದೆ.
ಕೆಲವರು
ತಮ್ಮ
ಮಕ್ಕಳಿಗೆ
‘ಆದಿಪುರುಷ್’
ಸಿನಿಮಾ
ತೋರಿಸೋದಿಲ್ಲ
ಅಂತ
ಸೋಶಿಯಲ್
ಮೀಡಿಯಾದಲ್ಲಿ
ಕಿಡಿಕಾರುತ್ತಿದ್ದಾರೆ.
ಇಷ್ಟೊಂದು
ಆಕ್ರೋಶ
ವ್ಯಕ್ತಪಡಿಸುವುದಕ್ಕೆ
ಕಾರಣ
ಸಿನಿಮಾದ
ಡೈಲಾಗ್‌ಗಳು
ಹಾಗೂ
ಪಾತ್ರಗಳನ್ನು
ಸೃಷ್ಟಿಸಿದ
ರೀತಿ.
ಸಿನಿಮಾ
ನೋಡಿದವರು
‘ರಾಮಾಯಣ’
ಟಿವಿ
ಸೀರಿಸ್
ಅನ್ನು
ನೆನಪಿಸಿಕೊಳ್ಳುತ್ತಿದ್ದಾರೆ.
ಇಂದಿಗೂ
ರಾಮ,
ಸೀತೆ,
ಹನುಮಂತ
ಅಂದರೆ
‘ರಾಮಾಯಣ’
ಟಿವಿ
ಶೋದಂತೆ
ಇರಬೇಕು
ಅಂತ
ಬಹಳಷ್ಟು
ಮಂದಿ
ಅಭಿಪ್ರಾಯ
ವ್ಯಕ್ತಪಡಿಸುತ್ತಿದ್ದಾರೆ.
ಇದೇ
ವೇಳೆ
‘ರಾಮಾಯಣ’ದಲ್ಲಿ
ರಾಮನಾಗಿ
ನಟಿಸಿದ್ದ
ರಾಮನ
ಪಾತ್ರಧಾರಿ
ಅರುಣ್
ಗೊವಿಲ್
ಕೂಡ
‘ಆದಿಪುರುಷ್’
ಸಿನಿಮಾವನ್ನು
ಕಟುವಾಗಿ
ಟೀಕಿಸಿದ್ದಾರೆ.
‘ಇದು
ಹಾಲಿವುಡ್
ಕಾರ್ಟೂನ್’
ರಮಾನಂದ್
ಸಾಗರ್
ಅವರ
‘ರಾಮಾಯಣ’
ಟಿವಿ
ಶೋವನ್ನು
‘ಆದಿಪುರುಷ್’
ಸಿನಿಮಾ
ಕೂಡ
ಹಿಂದಿಕ್ಕುವುದಕ್ಕೆ
ಆಗಿಲ್ಲ.
‘ರಾಮಾಯಣ’
ಟಿವಿ
ಸೀರಿಸ್
ಅನ್ನು
ನೋಡಿ
ಮೆಚ್ಚಿಕೊಂಡವರಿಗೆ
‘ಆದಿಪುರುಷ್’
ಸಿನಿಮಾವನ್ನು
ಅರಗಿಸಿಕೊಳ್ಳುವುದಕ್ಕೆ
ಸಾಧ್ಯವಾಗಿಲ್ಲ.
ಹೀಗಾಗಿ
ಸೋಶಿಯಲ್
ಮೀಡಿಯಾಗಳಲ್ಲಿ
ತೀವ್ರ
ಆಕ್ಷೇಪ
ವ್ಯಕ್ತಪಡಿಸಿದ್ದಾರೆ.
ಹಾಗೇ
‘ರಾಮಾಯಣ’ದ
ರಾಮನ
ಪಾತ್ರಧಾರಿ
ಅರುಣ್
ಗೊವಿಲ್
ಕೂಡ
ಅಸಮಧಾನ
ಹೊರಹಾಕಿದ್ದಾರೆ.
Adipurush:
ಡಾರ್ಲಿಂಗ್
ಪ್ರಭಾಸ್
ಎಲ್ಲಿ?
ಟ್ರೋಲ್
ಆದರೂ
‘ಆದಿಪುರುಷ್’
ಬಗ್ಗೆ
ತುಟಿಬಿಚ್ಚಿಲ್ಲ
ಏಕೆ?
‘ರಾಮಾಯಣ’ದ
ರಾಮನ
ರೂಪವೇ
ನಿಜವಾದ
ರಾಮನ
ರೂಪ
ಎಂದುಕೊಂಡವರು
ಬಹಳಷ್ಟು
ಮಂದಿ
ಇದ್ದಾರೆ.
ಈ
ಪಾತ್ರದಲ್ಲಿ
ನಟಿಸಿದ್ದ
ಅರುಣ್
ಗೊವಿಲ್
‘ಆದಿಪುರುಷ್’
ಸಿನಿಮಾವನ್ನು
“ಹಾಲಿವುಡ್
ಕಾರ್ಟೂನ್”
ಎಂದು
ಟೀಕೆ
ಮಾಡಿದ್ದಾರೆ.
‘ರಾಮಾಯಣ’ಕ್ಕೆ
ಆಧುನಿಕ
ರೂಪ
ಕೊಟ್ಟಿದ್ದಕ್ಕೆ
ಕಿಡಿಕಾರಿದ್ದಾರೆ.
ಚಿತ್ರತಂಡಕ್ಕೆ
ಸಲಹೆ
ನೀಡಿದ್ದ
ಅರುಣ್
ಗೊವಿಲ್
ಇತ್ತೀಚೆಗೆ
ಎಬಿಪಿ
ಸುದ್ದಿ
ವಾಹಿನಿಗೆ
ಅರುಣ್
ಗೊವಿಲ್
ಸಂದರ್ಶನ
ನೀಡಿದ್ದರು.
ಈ
ವೇಳೆ
ಆರುಣ್
ಗೊವಿಲ್
ಇಂಟ್ರೆಸ್ಟಿಂಗ್
ವಿಷಯಗಳನ್ನು
ಹೊರ
ಹಾಕಿದ್ದಾರೆ.
“ನಾನು
ಸಿನಿಮಾವನ್ನು
ನೋಡಿಲ್ಲ.
ಆದರೆ,
ಆದಿಪುರುಷ್
ಟೀಸರ್
ರಿಲೀಸ್
ಆಗುತ್ತಿದ್ದಂತೆ
ಚಿತ್ರತಂಡಕ್ಕೆ
ಕೆಲವು
ಸಲಹೆಗಳನ್ನು
ನೀಡಿದ್ದೆ.”
ಎಂದು
ಹೇಳಿಕೆ
ಕೊಟ್ಟಿದ್ದಾರೆ.
Adipurush:
ನೆಗೆಟಿವ್
ಕಮೆಂಟ್‌ಗಳನ್ನು
ತೆಗೆಯುವಂತೆ
ಹಣದ
ಆಮಿಷ:
‘ಆದಿಪುರುಷ್’
ತಂಡದ
ಮೇಲಿನ
ಗಂಭೀರ
ಆರೋಪ!
ಇಷ್ಟೇ
ಅಲ್ಲದೆ
”
ರಾಮಾಯಣದ
ವಿಷಯದಲ್ಲಿ
ಆಧುನಿಕತೆ
ಮತ್ತು
ಪುರಾಣವನ್ನು
ಹೋಲಿಕೆ
ಮಾಡುವುದು
ಸಮಂಜಸವಲ್ಲ.
ರಾಮಾಯಣದಲ್ಲಿ
ಆಡುಭಾಷೆಯನ್ನು
ಬಳಸುವುದನ್ನೂ
ನಾನು
ಬೆಂಬಲಿಸುವುದಿಲ್ಲವೆಂದು”
ರಾಮಾಯಣದ
ರಾಮನ
ಅವತಾರದಲ್ಲಿ
ನಟಿಸಿದ್ದ
ಅರುಣ್
ಗೋವಿಲ್
ಹೇಳಿದ್ದಾರೆ.
ಡೈಲಾಗ್‌ನಲ್ಲಿ
ಬದಲಾವಣೆ
‘ಆದಿಪುರುಷ್’
ಸಿನಿಮಾದ
ಡೈಲಾಗ್
ವಿರುದ್ಧ
ಟೀಕೆಗಳು
ಆರಂಭ
ಆಗುತ್ತಿದ್ದಂತೆ
ತಂಡ
ಡೈಲಾಗ್‌ಗಳನ್ನು
ಬದಲಾವಣೆ
ಮಾಡುವುದಕ್ಕೆ
ನಿರ್ಧರಿಸಿದೆ.
ಇನ್ನು
ಕೆಲವೇ
ದಿನಗಳಲ್ಲಿ
‘ಆದಿಪುರುಷ್’
ಹೊಸ
ಡೈಲಾಗ್‌ಗಳನ್ನು
ಹೊತ್ತು
ಥಿಯೇಟರ್‌ಗಳಲ್ಲಿ
ಅಬ್ಬರಿಸಲಿದೆ.
ವಿಚಿತ್ರ
ಅಂದರೆ,
‘ಆದಿಪುರುಷ್’
ವಿರುದ್ಧ
ಅದೆಷ್ಟೇ
ನೆಗೆಟಿವ್
ಕಮೆಂಟ್‌ಗಳು
ಎದುರಾದರೂ,
ಬಾಕ್ಸಾಫೀಸ್‌ನಲ್ಲಿ
ಒಂದೊಂದೇ
ದಾಖಲೆಗಳನ್ನು
ಮುರಿದು
ಹಾಕುತ್ತಿದೆ.
ಎರಡು
ದಿನಗಳಲ್ಲೇ
ಬಾಕ್ಸಾಫೀಸ್‌ನಲ್ಲಿ
ದಾಖಲೆ
ಗಳಿಕೆ
ಮಾಡಿ
ಚಿಂದಿ
ಉಡಾಯಿಸಿದೆ.
ಹೀಗಾಗಿ
ಪ್ರೇಕ್ಷಕರೇ
ಗೊಂದಲದಲ್ಲಿದ್ದಾರೆ.
English summary
Ramayan TV shows Ram fame Arun Govil says Prabhas Adipurush is ‘Hollywood Ki Cartoon’, know more.
Sunday, June 18, 2023, 20:05
Story first published: Sunday, June 18, 2023, 20:05 [IST]