Telugu
oi-Narayana M
ನಟಿ
ಪವಿತ್ರಾ
ಲೋಕೇಶ್
ಹಾಗೂ
ನಟ
ನರೇಶ್
ಲಿವ್
ಇನ್
ರಿಲೇಷನ್‌ಶಿಪ್‌ನಲ್ಲಿ
ಇರೋದಾಗಿ
ಘೋಷಿಸಿದ್ದಾರೆ.
ಇಬ್ಬರು
ತಮ್ಮದೇ
ಜೀವನದ
ಕಥೆಯನ್ನು
‘ಮಳ್ಳಿ
ಪೆಳ್ಳಿ’
ಸಿನಿಮಾ
ಮೂಲಕ
ತೆರೆಗೆ
ತಂದಿದ್ದರು.
ಆದರೆ
ಸಿನಿಮಾ
ಯಾಕೋ
ಸಕ್ಸಸ್
ಕಾಣಲಿಲ್ಲ.
ಅಂದಾಜು
15
ಕೋಟಿ
ರೂ.
ಬಜೆಟ್‌ನಲ್ಲಿ
ನಿರ್ಮಾಣವಾಗಿದ್ದ
ಸಿನಿಮಾ
2
ಕೋಟಿ
ರೂ.
ಕೂಡ
ಗಳಿಸಲಿಲ್ಲ.
‘ಮಳ್ಳಿ
ಪೆಳ್ಳಿ’
ಸಿನಿಮಾ
ಕನ್ನಡಕ್ಕೂ
ಡಬ್
ಆಗಿ
ರಿಲೀಸ್
ಆಯಿತು.
ಆದರೆ
ಒಂದು
ವಾರ
ಕೂಡ
ಸಿನಿಮಾ
ಥಿಯೇಟರ್‌ಗಳಲ್ಲಿ
ಉಳಿಯಲಿಲ್ಲ.
ಭಾರೀ
ನಿರೀಕ್ಷೆ
ಇಟ್ಟುಕೊಂಡು
ಮಾಡಿದ್ದ
ಸಿನಿಮಾ
ಹೀನಾಯವಾಗಿ
ಸೋಲುಂಡಿದೆ.
ಇನ್ನು
ನರೇಶ್
ಹಾಗೂ
ಪವಿತ್ರಾ
ಮದುವೆ
ಕೂಡ
ಆಗುವುದಾಗಿ
ಹೇಳಿದ್ದಾರೆ.
ಆದರೆ
ನರೇಶ್‌ಗೆ
3ನೇ
ಪತ್ನಿ
ರಮ್ಯಾ
ರಘುಪತಿ
ಡಿವೋರ್ಸ್
ಕೊಟ್ಟಿಲ್ಲ.
ಹಾಗಾಗಿ
ಮದುವೆ
ಆಗದೇ
ಲಿವ್
ಇನ್‌ರಿಲೇಷನ್‌ಶಿಪ್‌ನಲ್ಲಿ
ಮುಂದುವರೆಯಲು
ಜೋಡಿ
ಮುಂದಾಗಿದೆ.
ನರೇಶ್
ಬಳಿ
ಇರುವ
ಹಣಕ್ಕಾಗಿಯೇ
ಪವಿತ್ರಾ
ಆತನ
ಹಿಂದೆ
ಹೋಗಿದ್ದಾರೆ
ಎನ್ನುವ
ಆರೋಪವನ್ನು
ಕೂಡ
ಕೆಲವರು
ಮಾಡಿದ್ಧಾರೆ.
ತೆಲುಗು
ಸಿನಿಮಾಗಳಲ್ಲಿ
ನಟಿಸುವ
ವೇಳೆ
ನರೇಶ್
ಹಾಗೂ
ಪವಿತ್ರಾ
ನಡುವೆ
ಪ್ರೀತಿ
ಹುಟ್ಟಿತ್ತು.
ನಂತರ
ನರೇಶ್
ಪ್ರಪೋಸ್
ಮಾಡಿದ್ದರಂತೆ.
ತಮ್ಮ
ಲವ್
ಸ್ಟೋರಿಯನ್ನು
‘ಮಳ್ಳಿ
ಪೆಳ್ಳಿ’
ಸಿನಿಮಾ
ಪ್ರಚಾರದ
ವೇಳೆ
ಜೋಡಿ
ಬಿಚ್ಚಿಟ್ಟಿತ್ತು.
ಇನ್ನು
ಸಿನಿಮಾ
ಪ್ರಚಾರಕ್ಕಾಗಿ
ಇಬ್ಬರು
ವಿಭಿನ್ನ
ರೀತಿಯಲ್ಲಿ
ಪ್ರಚಾರ
ಕೂಡ
ಮಾಡಿದ್ದರು.
ಆದರೆ
ಅದೆಲ್ಲಾ
ಪ್ರಯೋಜನವಾಗಲೇಯಿಲ್ಲ.
ಇನ್ನು
ಸಂದರ್ಶನವೊಂದರಲ್ಲಿ
ನಿಮ್ಮ
ಕನಸು
ಏನು
ಎನ್ನುವ
ಪ್ರಶ್ನೆಗೆ
ನರೇಶ್,
ಒಳ್ಳೆ
ಮದುವೆ
ಜೀವನ
ಎಂದು
ಹೇಳಿದ್ದಾರೆ.
ನನಗೆ
ಹಣದ
ವ್ಯಾಮೋಹ
ಇಲ್ಲ
“ಒಬ್ಬೊಬ್ಬರಿಗೆ
ಒಂದೊಂದು
ಡ್ರೀಮ್
ಇರುತ್ತದೆ.
ಚಿಕ್ಕಂದಿನಿಂದಲೂ
ನನಗೆ
ಹಣದ
ಮೇಲೆ
ವ್ಯಾಮೋಹ
ಇಲ್ಲ.
ಹಣದ
ಜೊತೆಗೆ
ಹುಟ್ಟಿದವನು
ನಾನು.
ಮೊದಲಿಗೆ
ಸ್ಕೂಲ್‌ಗೆ
ಸ್ಪೋರ್ಟ್ಸ್
ಸೈಕಲ್,
5
ಗೇರ್
ಸೈಕಲ್
ತಗೊಂಡು
ಹೋದವನು
ನಾನೇ.
ಅದು
ಕೂಡ
1978ರಲ್ಲಿ.
ಎಂಜಿಆರ್
ಬಳಿ
ಎಲೆಕ್ಟ್ರಿಕ್
ವಾಚ್
ಇತ್ತು.
ಅಂತದ್ದೇ
ವಾಚ್
ನಮ್ಮ
ಅಮ್ಮ
ನನಗೆ
ಗಿಫ್ಟ್
ಕೊಟ್ಟಿದ್ದರು.
ಅಂತಹ
ವಾಚ್
ಆ
ಕಾಲೇಜ್‌ನಲ್ಲಿ
ಯಾರ
ಬಳಿಯೂ
ಇರಲಿಲ್ಲ.
ಆ
ರೀತಿ
ಬೆಳೆದವನು
ನಾನು”
ಮದುವೆ
ಜೀವನ
ಸೆಟ್
ಆಗ್ಲಿಲ್ಲ
“ಜೀವನದಲ್ಲಿ
ನಟನಾಗಬೇಕು
ಎನ್ನುವ
ಕನಸ್ಸಿತ್ತು.
ಕಾರು
ತಗೊಂಡು
ಓಡಾಡಬೇಕು
ಎನ್ನುವ
ಆಸೆ
ಎಲ್ಲ
ಇರಲಿಲ್ಲ.
ಅದೆಲ್ಲಾ
ನನ್ನ
ಬಳಿ
ಇತ್ತು.
ನಟನಾಗಬೇಕು
ಎನ್ನುವ
ಕನಸು
ನನಸು
ಮಾಡಿಕೊಂಡೆ.
ನಟನಾಗಿ
ಅಲ್ಲ
ಸಾಮಾಜಿಕ
ಜೀವನದಲ್ಲಿ
ಹೋಗಬೇಕು
ಎಂದಾಗ
10
ವರ್ಷ
ಆ
ಹಾದಿಯಲ್ಲಿ
ಸಾಗಿದೆ.
ನನಗೆ
ಜೀವನದಲ್ಲಿ
ಸೆಟ್
ಆಗದೇ
ಇರುವುದು
ಒಂದೇ.
ಅದು
ಮದುವೆ
ಜೀವನ.
ಅದು
ನನ್ನ
ತಪ್ಪಾ?
ಅವರ
ತಪ್ಪಾ?
ಅನ್ನೋದನ್ನೆಲ್ಲಾ
ಪಕ್ಕಕ್ಕಿಡೋಣ.
ನಾನು
ಅವರನ್ನು
ಆರೋಪಿಸುವುದಿಲ್ಲ.”
9
ಟೇಕ್
ಬೇಕಾದ್ರು
ತಗೋತ್ತೀನಿ
“ನನಗೆ
ಯಾಕೋ
ಮದುವೆ
ಲೈಫ್
ಸೆಟ್
ಆಗ್ಲಿಲ್ಲ.
ನಾನು
ಎಂತವನು
ಅಂದ್ರೆ
ಒಂದು
ಶಾಟ್
ಚೆನ್ನಾಗಿ
ಬರ್ಲಿಲ್ಲ
ಅಂದ್ರೆ
9
ಟೇಕ್
ಬೇಕಾದ್ರು
ತಗೋತ್ತೀನಿ.
ಒಂದೇ
ಟೇಕ್‌ನಲ್ಲೂ
ಅದು
ಓಕೆ
ಆಗಬಹುದು.
ಅಂಥದ್ದರಲ್ಲಿ
ನನ್ನ
ಮದುವೆ
ಲೈಫ್
ಸೆಟ್ಲ್
ಆಗಿಲ್ಲ,
ಅಂತ
ನಮ್ಮ
ತಾಯಿ
ಬಹಳ
ನೋವು
ಅನುಭವಿಸಿದರು.
ಅದು
ಕೂಡ
ಆಕೆಯ
ಕನಸು.
ನಾನು
ಲೈಫ್‌ನಲ್ಲಿ
ಖುಷಿಯಾಗಿರಬೇಕು
ಅನ್ನೋದು.
ಅದೊಂದು
ನನ್ನಿಂದ
ಸಾಧ್ಯವಾಗಲಿಲ್ಲ,
ಅಂತ
ಹೇಳುತ್ತಿರುತ್ತಿದ್ದರು.
ನನಗೆ
ಒಂದೇ
ಒಂದೇ
ದೊಡ್ಡ
ಕನಸು,
ಎಲ್ಲರಂತೆ
ನಾನು
ಒಳ್ಳೆ
ವ್ಯಕ್ತಿಯ
ಜೊತೆ
ಜೀವನ
ಸಾಗಿಸಬೇಕು
ಅನ್ನೋದು.
ಆ
ಕನಸು
ಪವಿತ್ರಾ
ಲೋಕೇಶ್
ಮೂಲಕ
ನನಸಾಗುತ್ತಿದೆ”
“ನನ್ನ
ಬೈಸಿಪ್ಸ್
ನೋಡಿ
ಹೇಗಿದೆ?
ಪಪ್ಪಾ
ಸ್ಟ್ರಾಂಗ್,
ಮಮ್ಮ
ಹ್ಯಾಪಿ”
ಎಂದ
ನರೇಶ್:
ನಾಚಿ
ನೀರಾದ
ಪವಿತ್ರಾ
ರೋಲ್ಸ್
ರಾಯ್ಸ್
ಒಂದಿಲ್ಲ
“ಪರ್ಸನಲ್
ಲೈಫ್
ಬಿಟ್ಟರೆ
ನನಗೆ
ದೊಡ್ಡ
ಕನಸು
ಯಾವುದು
ಇಲ್ಲ.
ಒಳ್ಳೆ
ಒಳ್ಳೆ
ಪಾತ್ರಗಳು
ಮಾಡಬೇಕು.
ಪ್ರಪಂಚವೆಲ್ಲಾ
ಸುತ್ತಾಡಬೇಕು
ಎನ್ನುವುದು
ನಮ್ಮ
ಕನಸು.
ಈಗಾಗಲೇ
ಸುತ್ತಾಡುತ್ತಿದ್ದೇವೆ.
ನನ್ನ
ಬಳಿ
ಎಲ್ಲಾ
ತರಹ
ಕಾರುಗಳು
ಇವೆ.
ರೋಲ್ಸ್
ರಾಯ್ಸ್
ಬಿಟ್ಟು.
ಆ
ಕಾರಿನ
ಬಗ್ಗೆ
ಹೆಚ್ಚಿನ
ಆಸಕ್ತಿ
ಏನು
ಇಲ್ಲ.
ಸ್ಟೇಟಸ್‌ಗೋಸ್ಕರ
ಅದನ್ನು
ತಗೋಬೇಕು
ಅಷ್ಟೆ.
ಆದರೆ
ಅದು
ಬೇಡ”
ಎಂದು
ನರೇಶ್
ಹೇಳಿದ್ದಾರೆ.
English summary
Malli Pelli: Naresh and Pavitra Lokesh About their dreams. Malli Pelli turns out to be box office disaster. know more.
Monday, June 19, 2023, 18:14
Story first published: Monday, June 19, 2023, 18:14 [IST]