Mangaluru
lekhaka-Kishan Kumar
ಮಂಗಳೂರು, ಜೂನ್ 29: ರಾಜಕೀಯದಲ್ಲಿ ಆಸಕ್ತರಿರುವ ಪದವೀಧರಿಗೆ ರಾಜಕೀಯ ತರಬೇತಿ ನೀಡುವ ಉದ್ದೇಶದಿಂದ ತರಬೇತಿ ಸಂಸ್ಥೆ ಸ್ಥಾಪಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಆಸಕ್ತ ಪದವೀಧರರಿಗೆ ತರಬೇತಿ ಪಡೆಯಲು ರಾಜ್ಯದಲ್ಲಿ ಪೊಲಿಟಿಕಲ್ ಸೆಂಟರ್‌ನ ಕೊರತೆಯಿದೆ. ಆದ್ದರಿಂದ ಈ ಕೊರತೆ ನೀಗಿಸಲು ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸುವ ಚಿಂತನೆಯಿದೆ. ಪದವೀಧರರಿಗೆ ಒಂದು ವರ್ಷದ ಕೋರ್ಸ್ ಇದಾಗಿದ್ದು, ಆರು ತಿಂಗಳು ಪ್ರ್ಯಾಕ್ಟಿಕಲ್ ತರಗತಿಯಿದ್ದರೆ, ಇನ್ನಾರು ತಿಂಗಳು ಇಂಟರ್ ಶಿಪ್ ಇರುತ್ತದೆ. ಅದಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಚರ್ಚೆ ನಡೆದಿದ್ದು, ಒಂದು ಹಂತಕ್ಕೆ ಬಂದಿದೆ. ಸರಕಾರದೊಂದಿಗೆ, ವಿಧಾನಸಭಾ ಸಭಾಧ್ಯಕ್ಷರೊಂದಿಗೆ ಮಾತನಾಡಿಕೊಂಡು ಈ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೇಶದ ಪುಣೆಯಲ್ಲಿ ಇಂತಹ ರಾಜಕೀಯ ತರಬೇತಿ ನೀಡುವ ಸಂಸ್ಥೆಯೊಂದು ಇದೆ. ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಸಿಲೆಬಸ್ ಅನ್ನು ಮಾಡಲಾಗುತ್ತದೆ. ತರಬೇತಿ ಪಡೆದವರೆಲ್ಲಾ ರಾಜಕೀಯ ಪ್ರವೇಶಿಸಬೇಕು ಎಂದಲ್ಲ. ಅವರು ಎನ್‌ಜಿಒ ಕೂಡಾ ಆರಂಭಿಸಬಹುದು. ಸರಕಾರದ ಸಂಸ್ಥೆಗಳಲ್ಲೂ ಅವರಿಗೆ ಅವಕಾಶ ಇರಲಿದೆ. ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂದು ಹೇಳಿದರು.
ನೀರು ಹರಿಯುವ ಕಾಲುವೆಗೆ ಮಣ್ಣು ತುಂಬಿದ ನೌಕಾನೆಲೆ: ಮೊದಲ ಮಳೆಗೆ ಮುಳುಗಿದ ಇಡೂರು ಗ್ರಾಮ!
ಜುಲೈ ಮೂರರಂದು ಅಧಿವೇಶನ ಆರಂಭಗೊಳ್ಳಲಿದೆ. ಜುಲೈ 7 ರಂದು ನೂತನ ಸರ್ಕಾರದ ಮುಂಗಡ ಪತ್ರ ಮಂಡನೆಯಾಗಲಿದೆ. ಅಧಿವೇಶನದಲ್ಲಿ ಶಾಸಕರೆಲ್ಲರೂ ಭಾಗವಹಿಸಬೇಕು ಎಂದು ಯುಟಿ ಖಾದರ್ ಹೇಳಿದರು.
ಆಸಕ್ತಿ ಇರುವ ಡಿಗ್ರಿ ಕಲಿತರು ಈ ರಾಜಕೀಯ ತರಬೇತಿಗೆ ಬರಬಹುದು. ಒಂದು ವರ್ಷದ ತರಬೇತಿ ನಡೆಯಲಿದೆ. ಈಗಾಗಲೇ ಖಾಸಗಿ ವಿದ್ಯಾಸಂಸ್ಥೆಯಾದ ಸ್ಕೂಲ್ ಆಫ್ ಗಾರ್ಮೆಂಟ್ ಪೂಣೆಯಲ್ಲಿ ತರಬೇತಿ ನೀಡುತ್ತಿದೆ. ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಅನುಭವ ಪಡೆದುಕೊಳ್ಳಬಹುದು. ಪ್ರಾಥಮಿಕ ಹಂತದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.
ಎಂಪಿ, ಎಂಎಲ್‌ಎ ಆಗೋಕೆ ಈ ತರಬೇತಿ ಅಲ್ಲ. ಸರ್ಕಾರಿ ಹುದ್ದೆ ಸೇರಿದಂತೆ ಜನಪ್ರತಿನಿಧಿಯಾಗೋಕೆ ತರಬೇತಿ ಪಡೆಯಬಹುದು. ರಾಜ್ಯದಲ್ಲಿ ಎಲ್ಲರಿಗೂ ಉಪಯುಕ್ತವಾಗುವ ಪ್ರದೇಶದಲ್ಲಿ ತರಬೇತಿ ಮಾಡಲಿದ್ದೇವೆ. ಅಧ್ಯಯನಕಾರರು, ರಾಜಕೀಯ ಮುತ್ಸದ್ಧಿಗಳಿಂದ ತರಬೇತಿ ನಡೆಯಲಿದೆ. ತರಬೇತಿ ಪಡೆದವರು ಉತ್ಸುಕರಾಗಿದ್ದರೆ ದೊಡ್ಡ ಮಟ್ಟ ದ ತರಬೇತಿಯನ್ನು ಹೈದರಾಬಾದ್ ದೆಹಲಿಯಲ್ಲಿ ನೀಡುತ್ತೇವೆ ಎಂದು ಯು.ಟಿ ಖಾದರ್ ಹೇಳಿದರು.
English summary
One year training for political aspirants says Speaker UT Khader. Know more,
Story first published: Thursday, June 29, 2023, 21:06 [IST]