India
oi-Mamatha M
ಕೋಲ್ಕತ್ತಾ, ಜೂನ್. 19: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದಲ್ಲಿ ಜುಲೈ 8 ರಂದು ನಡೆಯಲಿರುವ ಪಂಚಾಯತ್ ಚುನಾವಣೆಗೆ ಸಜ್ಜಾಗುತ್ತಿದೆ. ಇದೇ ವೇಳೆ ಬಿಜೆಪಿಗೆ ಸೇರಿದ್ದಕ್ಕಾಗಿ “ಪಶ್ಚಾತ್ತಾಪ” ಆಚರಿಸಿದ್ದ ಬುಡಕಟ್ಟು ಮಹಿಳೆಯರಲ್ಲಿ ಒಬ್ಬರಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ನೀಡಿದೆ.
ಬಿಜೆಪಿಗೆ ಸೇರ್ಪಡೆಯಾದ ಆರೋಪದ ಮೇಲೆ ಬಲೂರ್ಘಾಟ್ನಲ್ಲಿ ತೃಣಮೂಲ ಕಾಂಗ್ರೆಸ್ನ ಮುಂದೆ ‘ದಂಡವತ್ ಪರಿಕರ್ಮ’ ನಡೆಸುವಂತೆ ಮೂವರು ಬುಡಕಟ್ಟು ಮಹಿಳೆಯರಿಗೆ ಒತ್ತಡ ಹಾಕಲಾಗಿತ್ತು ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ, ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಪಶ್ಚಿಮ ಬಂಗಾಳದಲ್ಲಿ ಮುಂಬರುವ ಪಂಚಾಯತ್ ಚುನಾವಣೆಗೆ ಪಕ್ಷವು ಟಿಕೆಟ್ ನೀಡಿದೆ.
ಗೋಫಾನಗರ ಗ್ರಾಮ ಪಂಚಾಯಿತಿಯಿಂದ ಮೂವರು ಮಹಿಳೆಯರ ಪೈಕಿ ಶಿಯುಲಿ ಮರ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಶಿಯುಲಿ ಮರ್ಡಿ ಭಾನುವಾರ ಮಧ್ಯಾಹ್ನದಿಂದ ಟಿಎಂಸಿ ಪರ ಪ್ರಚಾರ ಆರಂಭಿಸಿದ್ದು, ಮತ ಕೇಳಲು ಗೋಡೆ ಬರಹಗಳನ್ನು ಬರೆಯುತ್ತಿದ್ದರು. ಮಹಿಳೆಯರನ್ನು ರಸ್ತೆಯಲ್ಲಿ ಉರುಳುವಂತೆ ಮಾಡಿ ಅವರನ್ನು ಪಕ್ಷಕ್ಕೆ ಮತ್ತೆ ಸೇರುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪವಿದ್ದು, ಇದರ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿತ್ತು.
West Bengal Violence: ಕೇಂದ್ರ ಸಚಿವರ ಬೆಂಗಾವಲು ವಾಹನಗಳ ಮೇಲೆ ಬಾಂಬ್- ನನಗೇನೂ ಗೊತ್ತಿಲ್ಲವೆಂದ ಟಿಎಂಸಿ
ಘಟನೆಯ ವಿಡಿಯೋವನ್ನು ಬಂಗಾಳದ ಬಿಜೆಪಿ ನಾಯಕರು ಹಂಚಿಕೊಂಡ ನಂತರ ವೈರಲ್ ಆಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ದಕ್ಷಿಣ ದಿನಾಜ್ಪುರ ಜಿಲ್ಲೆಯಲ್ಲಿ ಹರಿದಾಡುತ್ತಿದ್ದ 27 ಸೆಕೆಂಡುಗಳ ವೈರಲ್ ವೀಡಿಯೊ ಕ್ಲಿಪ್ನಲ್ಲಿ ಕಾಣಿಸಿಕೊಂಡ ನಾಲ್ವರು ಬುಡಕಟ್ಟು ಮಹಿಳೆಯರಲ್ಲಿ ಶಿಯುಲಿ ಮರ್ಡಿ ಒಬ್ಬರು. ಟಿಎಂಸಿ ತನ್ನ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರದೀಪ್ತ ಚಕ್ರವರ್ತಿ ಅವರನ್ನು ತೆಗೆದುಹಾಕಿತ್ತು.
ಜಿಲ್ಲೆಯ ತಾಪನ್ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಟಿಎಂಸಿ ಶಿಯುಲಿ ಮರ್ಡಿ ಅವರನ್ನು ಕಣಕ್ಕಿಳಿಸಿದೆ. ಈ ಬಗ್ಗೆ ಮಾತನಾಡಿರುವ ಅವರು, “ನನ್ನ ಪಕ್ಷ ನನ್ನನ್ನು ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿರುವುದು ನನಗೆ ಖುಷಿ ತಂದಿದೆ. ಬುಡಕಟ್ಟು ಸಮುದಾಯ ನಮ್ಮ ಪಕ್ಷದೊಂದಿಗಿದ್ದು, ಪಂಚಾಯಿತಿ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯುತ್ತೇವೆ” ಎಂದು ಶಿಯುಲಿ ಮರ್ಡಿ ಹೇಳಿದ್ದಾರೆ.
ಇತ್ತೀಚಿನ ಬೆಳವಣಿಗೆಗೆ ಪ್ರತಿಕ್ರಿಯಿಸಿದ ದಕ್ಷಿಣ ದಿನಜ್ಪುರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಪಿ ಸರ್ಕಾರ್, “ಇದು ಬುಡಕಟ್ಟು ಸಮುದಾಯದ ಬಗ್ಗೆ ತಮಗೆ ಕಾಳಜಿಯುದೆ ಎಂದು ತೋರಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ವಾಸ್ತವದಲ್ಲಿ ಟಿಎಂಸಿ ಇಲ್ಲಿನ ಜನರಿಗೆ ಗೌರವವನ್ನೇ ತೋರುತ್ತಿಲ್ಲ. ಅವರು ಇಂತಹ ಕೃತ್ಯವನ್ನು ಮಾಡಲು ಬುಡಕಟ್ಟು ಮಹಿಳೆಯರನ್ನು ಒತ್ತಾಯಿಸಿದ್ದಕ್ಕಾಗಿ ಜನರ ಕ್ಷಮೆಯನ್ನು ಕೇಳಲು ಪ್ರಯತ್ನಿಸುತ್ತಿದ್ದಾರೆ” ಎಂದಿದ್ದಾರೆ.
ಬಿಜೆಪಿಯ ಆರೋಪಗಳಿಗೆ ಪ್ರತಿಯಾಗಿ, ಟಿಎಂಸಿಯ ದಕ್ಷಿಣ್ ದಿನಜ್ಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಭಾಸ್ ಚಾಕಿ, “ಬಿಜೆಪಿ ಈ ಮಹಿಳೆಯರನ್ನು ದಾರಿ ತಪ್ಪಿಸಿ ಅವರನ್ನು ಸೇರಿಸಿಕೊಂಡಿದೆ. ನಂತರ ಅವರು ತಮ್ಮ ತಪ್ಪನ್ನು ಅರಿತು ನಮ್ಮ ಪಕ್ಷಕ್ಕೆ ಮರಳಿದರು. ಬಿಜೆಪಿಗೆ ಪಕ್ಷಾಂತರ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದರು. ಆದರೆ ಅವರು ಈಗ ನಮ್ಮೊಂದಿಗಿದ್ದಾರೆ ಮತ್ತು ಪಕ್ಷವು ಅವರಿಗೆ ಬಹುಮಾನ ನೀಡಿದೆ” ಎಂದು ಸಮರ್ಥನೆ ನೀಡಿದ್ದಾರೆ.
ಇತ್ತ, ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗಾರ್ನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ತೃಣಮೂಲ ಕಾಂಗ್ರೆಸ್ ಶಾಸಕ ಸೌಕತ್ ಮೊಲ್ಲಾಗೆ ಮಮತಾ ಬ್ಯಾನರ್ಜಿ ಸರ್ಕಾರ Z ಕ್ಯಾಟಗರಿ ಭದ್ರತೆಯನ್ನು ನೀಡಿದೆ. ಕ್ಯಾನಿಂಗ್ ವಿಧಾನಸಭಾ ಸ್ಥಾನವನ್ನು ಪ್ರತಿನಿಧಿಸುವ ಸೌಕತ್ ಮೊಲ್ಲಾ ಅವರು ಪ್ರದೇಶದಲ್ಲಿ ತೊಂದರೆಯನ್ನು ಉಂಟುಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
English summary
Bengal panchayat elections: Trinamool Congress gives ticket to tribal woman from the Gofanagar gram panchayat who perform penance for joining BJP . know more.
Story first published: Monday, June 19, 2023, 23:58 [IST]