ಪಂದ್ಯಾವಳಿಯುದ್ದಕ್ಕೂ ಅಬ್ಬರಿಸಿದ್ದ ಪಲ್ಟನ್ಸ್, ಫೈನಲ್ ಪಂದ್ಯದಲ್ಲೂ ಪ್ರಬಲ ಪೈಪೋಟಿ ನೀಡಿತು. ಆರಂಭದಿಂದಲೂ ಲೀಡ್ ಕಾಯ್ದುಕೊಂಡು ಮುನ್ನಡೆಯಿತು. ಉಭಯ ತಂಡಗಳೂ ಸಮಬಲದ ಹೋರಾಟ ನಡೆಸುತ್ತಾ ಬಂದರೂ, ಪುಣೆ ಲೀಡ್ ಕಾಯ್ದುಕೊಂಡಿತು. ಅಂತಿಮವಾಗಿ 28-25 ಅಂಕಗಳ ಅಂತರದಿಂದ ತಂಡ ಟ್ರೋಫಿ ಗೆದ್ದತು. ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ತಂಡವು ಮೊದಲ ಕಪ್ ಗೆದ್ದು ಬೀಗಿದೆ.