ದಿ ಟೆಲಿಗ್ರಾಫ್ನ ವರದಿಯ ಪ್ರಕಾರ, ಇಂಟರ್ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್ ಬೋರ್ಡ್ (IFAB: International Football Association Board) ಪ್ರಯೋಗದ ಭಾಗವಾಗಿ ನೀಲಿ ಕಾರ್ಡ್ ಪರಿಚಯಿಸಲಾಗುತ್ತಿದೆ. ಫೆಬ್ರವರಿ 9ರಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ನಿಯಮ ಬದಲಾವಣೆ ಜಾರಿಗೆ ಬಂದರೆ, 50 ವರ್ಷಗಳ ನಂತರ ಮೊದಲ ಬಾರಿಗೆ ಫುಟ್ಬಾಲ್ನಲ್ಲಿ ಹೊಸ ನಿಯಮ ಜಾರಿಗೆ ಬಂದಂತಾಗುತ್ತದೆ. ಈ ಹಿಂದೆ ಅಂದರೆ 1970ರ ಫಿಫಾ ವಿಶ್ವಕಪ್ನಲ್ಲಿ ಹಳದಿ, ಬಿಳಿ ಮತ್ತು ಕೆಂಪು ಕಾರ್ಡ್ಗಳನ್ನು ಫುಟ್ಬಾಲ್ನಲ್ಲಿ ಅಂತಹ ಯಾವುದೇ ಕ್ರಮವನ್ನು ಕೊನೆಯ ಬಾರಿಗೆ ಪರಿಚಯಿಸಲಾಯಿತು.