ದಾಖಲೆಯ ಒಪ್ಪಂದದಲ್ಲಿ ಏರ್‌ಬಸ್‌ನಿಂದ 500 ವಿಮಾನಗಳನ್ನು ಖರೀದಿಸಲಿದೆ ಇಂಡಿಗೋ | IndiGo to buy 500 A320 family aircraft from Airbus

India

oi-Mamatha M

|

Google Oneindia Kannada News

ನವದೆಹಲಿ, ಜೂನ್. 19: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಫ್ರಾನ್ಸಿನ ಏರ್‌ಬಸ್‌ (Airbus) ಕಂಪನಿಯ ಜೊತೆ 500 A320 ಮಾದರಿಯ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಅತಿ ಹೆಚ್ಚು ವಿಮಾನ ಖರೀದಿ ಒಪ್ಪಂದ ಮತ್ತು ಒಂದೇ ಕಂಪನಿಯ ಜೊತೆ ಅತಿ ಹೆಚ್ಚು ವಿಮಾನ ಖರೀದಿ ನಡೆಸುತ್ತಿರುವ ವಿಶ್ವದ ಮೊದಲ ಕಂಪನಿಯಾಗಿದೆ.

2030 ಮತ್ತು 2035 ರ ನಡುವೆ ವಿತರಿಸಲು 500 ಏರ್‌ಬಸ್‌ಗಳನ್ನು ಖರೀದಿಸಲಿದೆ. ಪಟ್ಟಿ ಬೆಲೆಯಲ್ಲಿ 50 ಕೋಟಿ ಶತಕೋಟಿ ಮೌಲ್ಯದ ಒಪ್ಪಂದವು ವಾಯುಯಾನ ಇತಿಹಾಸದಲ್ಲಿ ಅತಿದೊಡ್ಡ ಏಕ ಖರೀದಿ ಒಪ್ಪಂದವಾಗಿದೆ. ಈ ವರ್ಷದ ಆರಂಭದಲ್ಲಿ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ ಏರ್ ಇಂಡಿಯಾದ ಮೆಗಾ-470 ಏರ್‌ಕ್ರಾಫ್ಟ್ ಆರ್ಡರ್ ಅನ್ನು ಹಿಂದಿಕ್ಕಿದೆ.

IndiGo to buy 500 A320 family aircraft from Airbus

ಏರ್‌ಲೈನ್‌ನ ಪ್ರಕಾರ, ಇದು ಏರ್‌ಬಸ್‌ನೊಂದಿಗೆ ಯಾವುದೇ ಏರ್‌ಲೈನ್‌ನಿಂದ ಅತಿದೊಡ್ಡ ಏಕೈಕ ವಿಮಾನ ಖರೀದಿಯಾಗಿದೆ. ಈ ಆದೇಶದೊಂದಿಗೆ, ಇಂಡಿಗೋ ವಿಶ್ವದ ಅತಿದೊಡ್ಡ A320 ಕುಟುಂಬದ ಗ್ರಾಹಕರಾಗಿ ಮಾರ್ಪಟ್ಟಿದೆ. ಆದರೆ, ಎಂಜಿನ್ ಆಯ್ಕೆ ಮತ್ತು A320 ಮತ್ತು A321 ವಿಮಾನಗಳ ನಿಖರವಾದ ಮಿಶ್ರಣ ಸರಿಯಾದ ಸಮಯದಲ್ಲಿ ಮಾಡಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ: ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ: ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?

ಜೂನ್ 19 ರಂದು ಪ್ಯಾರಿಸ್ ಏರ್ ಶೋ 2023 ರಲ್ಲಿ ಏರ್‌ಲೈನ್ ಮತ್ತು ಏರ್‌ಬಸ್‌ನ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಈ ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 480 ವಿಮಾನಗಳ ಹಿಂದಿನ ಆರ್ಡರ್‌ನೊಂದಿಗೆ ಸೇರಿ, ಇಂಡಿಗೋದ ಆರ್ಡರ್-ಬುಕ್ ಈಗ ಸುಮಾರು ಸಾವಿರ ವಿಮಾನಗಳನ್ನು ಹೊಂದಿದೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ. ಈ ಆದೇಶವು ಇಂಡಿಗೋಗೆ 2030 ಮತ್ತು 2035 ರ ನಡುವೆ ವಿತರಣೆ ಮಾಡಲಿದೆ.

ಪ್ರಸ್ತುತ, ಇಂಡಿಗೋ ಏರ್‌ಲೈನ್ 300 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತದೆ ಮತ್ತು ಏರ್‌ಲೈನ್‌ನ ಆರ್ಡರ್ ಬುಕ್ ಈಗ A320NEO, A321NEO ಮತ್ತು A321XLR ವಿಮಾನಗಳನ್ನು ಒಳಗೊಂಡಿದೆ.

“ಈ ಹೊಸ ಆದೇಶವು ಇಂಡಿಗೋ ಮತ್ತು ಏರ್‌ಬಸ್ ನಡುವಿನ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಲಿದೆ. ಈ ಹೊಸ ಒಪ್ಪದದೊಂದಿಗೆ, 2006 ರಲ್ಲಿ ಪ್ರಾರಂಭವಾದಾಗಿನಿಂದ ಇಂಡಿಗೋ ಏರ್‌ಬಸ್‌ನೊಂದಿಗೆ ಒಟ್ಟು 1,330 ವಿಮಾನಗಳನ್ನು ಆರ್ಡರ್ ಮಾಡಿದೆ. ಮುಂದಿನ ದಶಕದಲ್ಲಿ ಸುಮಾರು 1,000 ವಿಮಾನಗಳ ಆರ್ಡರ್ ಬುಕ್, ಭಾರತದಲ್ಲಿ ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಗ್ಗಟ್ಟು ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಇಂಡಿಗೋ ತನ್ನ ಉದ್ದೇಶವನ್ನು ಪೂರೈಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿಕೆ ತಿಳಿಸಿದೆ.

English summary

India’s largest airline IndiGo to buy 500 A320 family aircraft from Airbus in record deal. know more.

Story first published: Monday, June 19, 2023, 22:02 [IST]

Source link