ಬಿಆರ್‌ಎಸ್‌ ಪಕ್ಷಕ್ಕೆ ಏಕೆ ಮತ ನೀಡಬೇಕು?, ಮೋದಿ ವಿವರಣೆ | Vote For BRS For Welfare Of K Chandrashekhar Raos Daughter Modi Attacked

India

oi-Gururaj S

|

Google Oneindia Kannada News

ನವದೆಹಲಿ, ಜೂನ್ 28; ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ಕಾವು ಈಗಿನಿಂದಲೇ ಏರುತ್ತಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ಬಯಸುತ್ತಿದೆ. ಆದ್ದರಿಂದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ವಿರುದ್ಧ ಬಿಜೆಪಿ ಟೀಕೆಗಳನ್ನು ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಧ್ಯ ಪ್ರದೇಶದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ನೇತೃತ್ವದ ಬಿಆರ್‌ಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Vote For BRS For Welfare Of K Chandrashekhar Raos Daughter Modi Attacked

“ಕರುಣಾನಿಧಿ ಕುಟುಂಬದ ಕಲ್ಯಾಣವಾಗಬೇಕಾದರೆ ಡಿಎಂಕೆಗೆ ಮತ ಹಾಕಿ. ಕೆ. ಚಂದ್ರಶೇಖರರಾವ್ ಪುತ್ರಿಯ ಅಭಿವೃದ್ಧಿಗಾಗಿ ಬಿಆರ್‌ಎಸ್‌ಗೆ ಮತ ನೀಡಿ. ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ” ಎಂದರು.

ರಾಜಕೀಯ ಚಿತ್ರಣ ಬದಲು; ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ತೆಲಂಗಾಣದ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಕೆ. ಚಂದ್ರಶೇಖರರಾವ್‌ ಈ ಬಾರಿ ಹಿನ್ನಡೆ ಅನುಭವಿಸಲಿದ್ದಾರೆ ಎಂಬ ಸುದ್ದಿಗಳಿವೆ. ಬಿಆರ್‌ಎಸ್ ಪಕ್ಷದ 35ಕ್ಕೂ ಅಧಿಕ ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಬಿಆರ್‌ಎಸ್‌ ಪಕ್ಷದ ಮಾಜಿ ನಾಯಕ ಪೊಂಗುಲೆಟ್ಟಿ ಶ್ರೀನಿವಾಸ ರೆಡ್ಡಿ ಮತ್ತು ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.

ಸತತ ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಭೆಗಳನ್ನು ಬರಿಷ್ಕಾರ ಮಾಡಿದ್ದ ಬಿಆರ್‌ಎಸ್ ಪಕ್ಷ ಎರಡು ವಾರದ ಹಿಂದೆ ಮಣಿಪುರದ ಪರಿಸ್ಥಿತಿ ಕುರಿತು ಕೇಂದ್ರ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿತ್ತು. ಜೂನ್‌ ಮೊದಲ ವಾರ ಕಾರ್ಯಕ್ರಮವೊಂದರಲ್ಲಿ ಕೆ. ಚಂದ್ರಶೇಖರರಾವ್ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಉತ್ತಮ ಸ್ನೇಹಿತ” ಎಂದು ಕರೆದಿದ್ದರು.

English summary

Ahead of the Telangana elections prime minister Narendra Modi attack on K Chandrashekhar Rao and BRS party. If you want the welfare of K Chandrashekhar Rao’s daughter, then vote for BRS Modi said.

Story first published: Wednesday, June 28, 2023, 8:11 [IST]

Source link