India
oi-Ravindra Gangal
ಮುಂಬೈ, ಜೂನ್ 23: ರಶ್ಮಿಕಾ ಮಂದಣ್ಣ ಅವರ ದೊಡ್ಡ ಚಿತ್ರ ಅನಿಮಲ್ ಒಂದೆರಡು ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಸುದ್ದಿ ಮಾಡುತ್ತಿರುವುದು ಅವರ ಮ್ಯಾನೇಜರ್ ಲಕ್ಷಾಂತರ ದುಡ್ಡು ವಂಚಿಸಿ ಓಡಿ ಹೋಗಿರುವ ವಿಚಾರ. ಈ ಕುರಿತು ಭಾರತದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವರೆಗೆ ಮೌನಕ್ಕೆ ಶರಣಾಗಿದ್ದ ರಶ್ಮಿಕಾ ಅವರು ಈ ಪ್ರಕರನದ ಕುರಿತು ಬಾಯಿ ಬಿಟ್ಟಿದ್ದಾರೆ.
ಎರಡು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ಮ್ಯಾನೇಜರ್ 80 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ವರದಿಯಾಗಿತ್ತು. ರಶ್ಮಿಕಾ ಹಾಗೂ ಅವರ ಮ್ಯಾನೇಜರ್ ನಡುವೆ ಜಗಳವಾಗಿದೆ. ಈ ಹಿನ್ನೆಲೆಯಲ್ಲಿ ಆತ ಅಸಮಾಧಾನಗೊಂಡು ರಶ್ಮಿಕಾ ಅವರಿಗೆ ವಂಚಿಸಿ ಪರಾರಿಯಾಗಿದ್ದಾನೆ. ಸರಿಸೂಮಾರು 80 ಲಕ್ಷ ರೂಪಾಯಿ ವಂಚಿಸಿ ಓಡಿಹೋಗಿದ್ದಾನೆ ಎಂಬ ತಹರೇವಾರಿ ಸುದ್ದಿಗಳು ಹರಿದಾಡಿದ್ದವು.
ಇದೀಗ ರಶ್ಮಿಕಾ ಮಂದಣ್ಣ ಅವರ ಮ್ಯಾನೇಜ್‌ಮೆಂಟ್ ಟೀಂ ಈ ಗಾಸಿಪ್ ಸುಳ್ಳಲ್ಲ ಎಂದು ಹೇಳಿಕೆ ನೀಡಿದೆ. ಆದರೆ, ಇದೆಲ್ಲವನ್ನೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ತಿಳಿಸಿದೆ.
IPL 2023 Opening Ceremony: ಐಪಿಎಲ್ ಉದ್ಘಾಟನಾ ಸಮಾರಂಭದ ಗ್ಲಾಮರ್ ಹೆಚ್ಚಿಸಲಿದ್ದಾರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ!
‘ರಶ್ಮಿಕಾ ಮಂದಣ್ಣ ಮತ್ತು ಅವರ ಮ್ಯಾನೇಜರ್ ಇತ್ತೀಚೆಗೆ ದೂರವಾಗಿರುವುದು ನಿಜ. ಆದರೆ, ವಂಚನೆಯಂತಹ ಪ್ರಕರಣ ನಡೆದಿಲ್ಲ. ಮ್ಯಾನೇಜರ್ ತಮ್ಮದೇ ಆದ ಸ್ವಂತ ದಾರಿಯಲ್ಲಿ ( ವೃತ್ತಿ ) ಸಾಗಲು ಬಯಸಿದ್ದಾರೆ. ವಂಚನೆಗೆ ಸಂಬಂಧಿಸಿದ ಸುದ್ದಿಗಳು ಸುಳ್ಳು. ನಾವು ಸೌಹಾರ್ದಯುತ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಮ್ಯಾನೇಜರ್ ದೂರವಾಗಿರುವ ಸಂದರ್ಭದಲ್ಲಿ ಹರಡಿದ ಹಲವಾರು ವರದಿಗಳನ್ನು ಗಾಳಿ ಮಾತಿನಿಂದ ಕೂಡಿದ್ದು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಧಿಕೃತ ಸ್ಪಷ್ಟೀಕರಣದಲ್ಲಿ ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಇಬ್ಬರೂ ತಮ್ಮ ನಡುವೆ ಯಾವುದೇ ದ್ವೇಷವಿಲ್ಲ ಎಂದು ಒತ್ತಿ ಹೇಳಿದ್ದಾರೆ. ಅವರ ನಿರ್ಗಮನದ ಸುತ್ತಲಿನ ವದಂತಿಗಳನ್ನು ನಿರಾಕರಿಸಿದ್ದಾರೆ.
‘ರಶ್ಮಿಕಾ ಮತ್ತು ಅವರ ಮ್ಯಾನೇಜರ್ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಈ ಹೇಳಿಕೆಯು ಆ ವದಂತಿಗಳ ಬಗ್ಗೆ ಸ್ಪಷ್ಟಿಕರಣ ನೀಡುತ್ತದೆ. ಎಲ್ಲವೂ ಆಶಾದಾಯಕವಾಗಿ ಕೊನೆಗೊಳಿಸುತ್ತದೆ. ಅವರು ಪರಸ್ಪರ ತಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋಗಲು ಬಯಸುವ ಸಂಪೂರ್ಣ ವೃತ್ತಿಪರರು’ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಪ್ಯಾನ್-ಇಂಡಿಯಾ ನಟಿಯಾಗಿ ಹೊರಹೊಮ್ಮಿರುವ ಖ್ಯಾತ ನಟಿ. ಅವರ ನಟನೆಯ ತಮಿಳಿನ ವಾರಿಸು ಚಿತ್ರ ಪೊಂಗಲ್ ವೇಳೆಯಲ್ಲಿ ರಿಲೀಸ್ ಆಗಿದ್ದು, ಸುಪರ್ ಡ್ಯುಪರ್ ಹಿಟ್ ಆಗಿದೆ. ಆ ಚಿತ್ರದಲ್ಲಿ ದಳಪತಿ ವಿಜಯ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.
ರಶ್ಮಿಕಾ ನಟನೆಯ ಹಿಂದಿ ಚಿತ್ರ ಮಿಷನ್ ಮಜ್ನು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇದು ಸೆಪ್ಟೆಂಬರ್‌ನಲ್ಲಿ ವೇಳೆಗೆ ತೆರೆಕಾಣಬಹುದು. ಆ ಚಿತ್ರವನ್ನು ಕಬೀರ್ ಸಿಂಗ್ ನಿರ್ಮಾಪಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.
‘ಪುಷ್ಪ 2: ದಿ ರೂಲ್’ ಸಿನೆಮಾವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಅವರು ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಜೊತೆ ನಟಿಸಿದ್ದಾರೆ. ಇದನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ ಅವರೊಂದಿಗಿನ ಸಂಬಂಧದ ವದಂತಿಗಳು ಪ್ರತಿ ಬಾರಿಯೂ ಮಾಧ್ಯಮಗಳಿಗೆ ಸುದ್ದಿಯ ಹೂರಣವನ್ನು ಒದಗಿಸುತ್ತಲೇ ಇರುತ್ತದೆ.
English summary
Rashmika Mandanna Clarifying the Rumors About Her Manager Revels Shocking Truth About the Previous Manager Where He Duped Some Money From Her | Know More at Oneindia Kannada,
Story first published: Friday, June 23, 2023, 18:56 [IST]