8 ವರ್ಷಗಳಲ್ಲಿ ಎನ್‌ಸಿಪಿ ಮೂರು ಬಾರಿ ಬಿಜೆಪಿ ಜೊತೆ ಕೈಜೋಡಿಸಲು ಬಯಸಿತ್ತು: ಅಜಿತ್ ಪವಾರ್ | NCP Wanted To Join Hands With BJP Thrice, Party had 5 meetings: Ajit Pawar

India

oi-Mamatha M

|

Google Oneindia Kannada News

ಮುಂಬೈ, ಜುಲೈ. 05: ಪಕ್ಷವನ್ನು ಇಬ್ಭಾಗ ಮಾಡಿ ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ನೀಡಿ ಉಪಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಹಲವು ವಿಷಯಗಳನ್ನು ಹೊರಹಾಕಿದ್ದಾರೆ. 2019 ರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ಐದು ಸುತ್ತಿನ ಸಭೆಗಳನ್ನು ನಡೆಸಿದ ನಂತರ ಶರದ್ ಪವಾರ್ ಅವರು ಬಿಜೆಪಿಗೆ ಸೇರುವ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ಇಂದಿನ ಶಕ್ತಿ ಪ್ರದರ್ಶನದಲ್ಲಿ ಗೆದ್ದಿರುವ ಅಜಿತ್ ಪವಾರ್ ಹೇಳಿದ್ದಾರೆ.

ಮತ್ತೆ, ಕಳೆದ ವರ್ಷ ಶಿವಸೇನೆ ವಿಭಜನೆಯಾದಾಗ ಪಕ್ಷದ ಶಾಸಕರು ಮತ್ತೆ ಎನ್‌ಡಿಎ ಸೇರಲು ಬಯಸಿದ್ದರು. ಇದು ನಿಜವಲ್ಲ ಎಂದು ಎನ್‌ಸಿಪಿ ಶಾಸಕರು ಹೇಳಲಿ ನೋಡೋಣ. ಆ ವೇಳೆ ಮಾಡಿದ್ದ ಎಲ್ಲಾ ಶಾಸಕರ ಸಹಿಯ ಪ್ರತಿ ನನ್ನ ಬಳಿ ಇದೆ. ಆದರೆ, ಈಗ ನನ್ನನ್ನು ಏಕೆ ವಿಲನ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.

Maharashtra Deputy Chief Minister Ajit Pawar

2019 ರ ರಾಜ್ಯ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನದ ಜಗಳದ ನಂತರ ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿಯನ್ನು ತೊರೆದ ಸಮಯವನ್ನು ಉಲ್ಲೇಖಿಸಿದ ಅಜಿತ್ ಪವಾರ್, “ನಾವು ಸರ್ಕಾರ ರಚಿಸಲು ಬಿಜೆಪಿಯೊಂದಿಗೆ 5 ಸಭೆಗಳನ್ನು ನಡೆಸಿದ್ದೇವೆ ಮತ್ತು ಇದ್ದಕ್ಕಿದ್ದಂತೆ ನನಗೆ ತಿಳಿಸಲಾಯಿತು. ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಶಿವಸೇನೆಯೊಂದಿಗೆ ಹೋಗುತ್ತೇವೆ” ಎಂದು ತಿಳಿಸಲಾಯಿತು.

ಏಕನಾಥ್ ಶಿಂಧೆ ಶಿವಸೇನೆಯ ವಿರುದ್ಧ ಬಂಡಾಯವೆದ್ದಾಗ ಎನ್‌ಸಿಪಿಯ ಎಲ್ಲಾ ಶಾಸಕರು ಬಿಜೆಪಿ ಸೇರಲು ಬಯಸಿದ್ದರು ಎಂದೂ ಅವರು ಹೇಳಿದ್ದಾರೆ. “ನಾವು ಪತ್ರಕ್ಕೂ ಸಹಿ ಹಾಕಿದ್ದೇವೆ. ನಾವೆಲ್ಲರೂ ನಮ್ಮ ನಿಲುವನ್ನು ಒಪ್ಪಿಕೊಳ್ಳುವಂತೆ ಶರದ್ ಪವಾರ್ ಅವರನ್ನು ಕೇಳಿದ್ದೇವೆ. ಇಲ್ಲದಿದ್ದರೆ ನಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಬಿಜೆಪಿಯೊಂದಿಗೆ ಮಾತನಾಡಲು ಪ್ರಫುಲ್ ಪಟೇಲ್, ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ಸಮಿತಿಯನ್ನು ಮಾಡಲಾಗಿದೆ” ಎಂದು ಹಲವು ವಿಚಾರಗಳನ್ನು ಹೊರಹಾಕಿದ್ದಾರೆ.

Maharashtra Deputy Chief Minister Ajit Pawar

ಅಜಿತ್ ಪವಾರ್ ಬುಧವರಾ ಪಕ್ಷದ 53 ಶಾಸಕರಲ್ಲಿ 29 ಮಂದಿಯನ್ನು ತಮ್ಮ ಬಣದ ಅಡಿಯಲ್ಲಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಶರದ್ ಪವಾರ್ ಬಣದಲ್ಲಿ ಕೇವಲ 17 ಶಾಸಕರಿದ್ದಾರೆ. ಕೆಲವು ಶಾಸಕರು ಎರಡೂ ಶಿಬಿರಗಳಲ್ಲಿ ಭಾಗವಹಿಸಿದ್ದರು. ಎರಡರಲ್ಲಿಯೂ ಕಾಣಿಸಿಕೊಳ್ಳುವುದನ್ನು ತಪ್ಪಿಸಿದವರಂತೆ ಅವರು ನಿರ್ಣಾಯಕ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.

ಚುನಾವಣಾ ಆಯೋಗದಲ್ಲಿ ಬಾಕಿ ಉಳಿದಿರುವ ಕದನವನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಅಫಿಡವಿಟ್‌ಗಳಿಗೆ ಸಹಿ ಹಾಕುವಂತೆ ಮಾಡಲಾಗಿದೆ, ಇಂದು ಅಜಿತ್ ಪವಾರ್ ಅವರು ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ತಮಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಒಡೆದ ಬಳಿಕ ಕಾಂಗ್ರೆಸ್ ಮೇಲೆ ಕಣ್ಣಿಟ್ಟಿತೇ ಬಿಜೆಪಿ?ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಒಡೆದ ಬಳಿಕ ಕಾಂಗ್ರೆಸ್ ಮೇಲೆ ಕಣ್ಣಿಟ್ಟಿತೇ ಬಿಜೆಪಿ?

“2017ರಲ್ಲೂ ವರ್ಷಾ ಬಂಗಲೆಯಲ್ಲಿ ಸಭೆ ನಡೆಸಿದ್ದೆವು. ಪಕ್ಷದ ಹಿರಿಯ ನಾಯಕರಾದ ಛಗನ್ ಭುಜಬಲ್, ಜಯಂತ್ ಪಟೇಲ್, ನಾನು ಮತ್ತು ಇನ್ನೂ ಹಲವರು ಅಲ್ಲಿಗೆ ಹೋಗಿದ್ದೆವು. ಬಿಜೆಪಿಯ ಹಲವಾರು ನಾಯಕರು ಸಹ ಅಲ್ಲಿದ್ದರು. ನಮ್ಮ ನಡುವೆ ಚರ್ಚೆಗಳು ನಡೆದವು. ಕ್ಯಾಬಿನೆಟ್ ಖಾತೆ ಹಂಚಿಕೆ ಮತ್ತು ಗಾರ್ಡಿಯನ್ ಮಂತ್ರಿಗಳ ಸ್ಥಾನಗಳ ಬಗ್ಗೆ ಚರ್ಚೆ ನಡೆದವು. ಆದರೆ ನಂತರ ನಮ್ಮ ಪಕ್ಷವು ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಂಡಿತು” ಎಂದು ಶರದ್ ಪವಾರ್ ಹೇಳಿದ್ದಾರೆ.

English summary

Nationalist Congress Party wanted to join hands with BJP thrice says Maharashtra Deputy Chief Minister Ajit Pawar. know more.

Source link