7ನೇ ವಯಸ್ಸಿಗೆ ಚೆಸ್ ಕಲಿಕೆ, 12ಕ್ಕೆ ಗ್ರ್ಯಾಂಡ್ ಮಾಸ್ಟರ್, 18ಕ್ಕೆ ವಿಶ್ವ ಚಾಂಪಿಯನ್; ಇದು ಗುಕೇಶ್ ಜೀವನ ಚರಿತ್ರೆ

2006ರ ಮೇ 29ರಂದು ದಕ್ಷಿಣ ಭಾರತದ ಹೆಬ್ಬಾಗಿಲು ಚೆನ್ನೈನಲ್ಲಿ ಜನಿಸಿದ ಗುಕೇಶ್‌, ಮೂಲತಃ ತೆಲುಗು ಕುಟುಂಬದವರು. ಆದರೆ, ಗುಕೇಶ್‌ ಹುಟ್ಟಿ ಬೆಳೆದಿದ್ದು ಎಲ್ಲವೂ ಭಾರತದ ಬ್ಯಾಂಕಿಗ್‌ ಕ್ಷೇತ್ರದ ತೊಟ್ಟಿಲು ಎನಿಸಿಕೊಂಡ ಚೆನ್ನೈ ನಗರದಲ್ಲಿ. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಭಾರತದ ಹಲವಾರು ಪ್ರಮುಖ ಚೆಸ್‌ ಆಟಗಾರರ ಜನ್ಮಸ್ಥಳ ಚೆನ್ನೈ. ಹೀಗಾಗಿ ಗುಕೇಶ್‌ಗೆ ಹೆಚ್ಚುವರಿ ಸ್ಪೂರ್ತಿ ಬೇಕಿರಲಿಲ್ಲ. ಆತನಿಗೆ ಆತನ ಊರೇ, ಅಲ್ಲಿ ಹುಟ್ಟಿದ ಚೆಸ್‌ ದಿಗ್ಗಜರೇ ಸ್ಫೂರ್ತಿ, ಮಾದರಿ. ಗುಕೇಶ್ ತಂದೆ ರಜನಿಕಾಂತ್, ಕಿವಿ-ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕ. ತಾಯಿ ಪದ್ಮಾ ಸೂಕ್ಷ್ಮ ಜೀವಶಾಸ್ತ್ರಜ್ಞರಾಗಿದ್ದಾರೆ.

Source link