ಅದು ಇರಲಿ, ಇವತ್ತಲ್ಲ ನಾಳೆ ಕಂಬ್ಯಾಕ್ ಮಾಡುತ್ತದೆ ಎಂಬ ವಿಶ್ವಾಸ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಈಗ ಅವರ ಜೀವನ ಶೈಲಿಯ ಕಡೆ ಬರೋಣ. ಮನರಂಜನೆ, ಮೋಜು, ಮಸ್ತಿ ಎಂಬ ಪದಗಳು ವಿಂಡೀಸ್ ಕ್ರಿಕೆಟಿಗರಿಗೆ ಹೇಳಿ ಮಾಡಿಸಿದ ಉದಾಹರಣೆಗಳು. ಸಖತ್ ಎಂಜಾಯ್ ಮಾಡುತ್ತಾರೆ. ಈ ವಿಷಯವನ್ನೊಮ್ಮೆ ದೀಪಕ್ ಚಹರ್ (Deepak Chahar) ಕೂಡ ಬಹಿರಂಗಪಡಿಸಿದ್ದರು. ದಿ ಕಪಿಲ್ ಶರ್ಮಾ ಶೋನಲ್ಲಿ ಮಾತನಾಡಿದ್ದ ಚಹರ್, ಸಿಎಸ್ಕೆ ತಂಡದ ಸಹ ಆಟಗಾರ ಹಲವಾರು ಗೆಳತಿಯರನ್ನು ಹೊಂದಿದ್ದಾರೆ ಎಂದು ತಿಳಿಸಿದ್ದರು.